ETV Bharat / bharat

ವೀರ್ ಸಾವರ್ಕರ್​ರಂತೆ ನಾನು ಕ್ಷಮೆ ಕೇಳುವುದಿಲ್ಲ: ರಾಹುಲ್ ಗಾಂಧಿ ಗರಂ - ಭಾರತೀಯ ಜನತಾ ಪಕ್ಷ

''ವೀರ್ ಸಾವರ್ಕರ್‌ನಂತೆ ನಾನು ಕ್ಷಮೆ ಕೇಳುವುದಿಲ್ಲ'' ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ ಗರಂ ಆದರು.

Rahul Gandhi
ರಾಹುಲ್ ಗಾಂಧಿ
author img

By

Published : Mar 25, 2023, 8:30 PM IST

ನವದೆಹಲಿ: ಸಂಸತ್ತಿನಿಂದ ಅನರ್ಹವಾದ ಒಂದು ದಿನದ ಬಳಿಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ''ನನ್ನ ಹೆಸರು ರಾಹುಲ್​ ಗಾಂಧಿ, ವೀರ್ ಸಾವರ್ಕರ್‌ರಂತೆ ನಾನು ಕ್ಷಮೆ ಕೇಳುವುದಿಲ್ಲ'' ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ''ಸತ್ಯಕ್ಕಾಗಿ ಹೋರಾಡುವುದು ಹಾಗೂ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ರಕ್ಷಿಸುವುದು ನನಗೆ ಇರುವ ಒಂದೇ ಒಂದು ಹೆಜ್ಜೆ. ನಾನು ಯಾವುದೇ ಅಡೆತಡೆಗಳನ್ನು ಲೆಕ್ಕಿಸದೇ ಹೋರಾಟವನ್ನು ಮುಂದುವರಿಸುತ್ತೇನೆ ಎಂದರು.

''ಮೋದಿ ಅವರು ನನ್ನ ಮುಂದಿನ ಭಾಷಣಕ್ಕೆ ಹೆದರುತ್ತಿದ್ದಾರೆ ಎಂದ ಅವರು, ವಿಶೇಷವಾಗಿ ಅದಾನಿ ಗುಂಪಿನ ಬಗ್ಗೆ ಪ್ರಧಾನಿಯಲ್ಲಿ ಭಯ ಕಾಡುತ್ತಿದೆ'' ಎಂದು ದೂರಿದರು. ಅದಾನಿ ಕುರಿತ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ಮೋದಿ ಅವರು ಹೆದರಿ ನನ್ನ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.

ನಾನು ಕ್ಷಮೆ ಕೇಳುವುದಿಲ್ಲ: ಸಂಸತ್ತಿನಲ್ಲಿ ತನ್ನ ವಿರುದ್ಧ ಮಾಡಲಾದ ಆರೋಪಗಳಿಗೆ ಪ್ರತಿಕ್ರಿಯಿಸಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಮಾತ್ರ ಕೇಳಿದ್ದೆ. ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನೀವು ಏಕೆ ಕ್ಷಮೆಯಾಚಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ನಾನು ಕ್ಷಮೆ ಕೇಳುವುದಿಲ್ಲ" ಎಂದು ಹೇಳಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಚೇರಿಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಸಂಸತ್ತಿನಿಂದ ಅನರ್ಹತೆಗೆ ಪ್ರತಿಕ್ರಿಯೆ ನೀಡಿದರು. ಹಿಂದಿನ ದಿನ, ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿ, ಈ ಯೋಜಿತ ಪತ್ರಿಕಾಗೋಷ್ಠಿ ಬಗ್ಗೆ ಚರ್ಚಿಸಿದ್ದರು.

ರಾಹುಲ್​ ಗಾಂಧಿ ತೀವ್ರ ಅಸಮಾಧಾನ: ಅದಾನಿ ಸಮೂಹವು ಭಾರತೀಯ ರಾಜಕೀಯದಲ್ಲಿ ವಿವಾದಾತ್ಮಕ ವಿಷಯವಾಗಿದೆ. ಸರ್ಕಾರವು ಈ ಕಂಪನಿ ಬಗ್ಗೆ ಒಲವು ತೋರುತ್ತಿದೆ. ವಿವಿಧ ನೀತಿಗಳು ಮತ್ತು ಒಪ್ಪಂದಗಳಿಂದ ಲಾಭ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಈ ವಿಷಯದ ಬಗ್ಗೆ ರಾಹುಲ್ ಗಾಂಧಿ ವಿಶೇಷವಾಗಿ ಧ್ವನಿಯೆತ್ತಿದ್ದಾರೆ. ಸರ್ಕಾರವು ಜನರ ವೆಚ್ಚದಲ್ಲಿ ಅದಾನಿಗೆ ಸಹಾಯ ಮಾಡುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಮರ್ಥಿಸಿಕೊಂಡ ಬಿಜೆಪಿ: ರಾಹುಲ್ ಗಾಂಧಿಯ ಅನರ್ಹತೆಯು ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ಕಾರವು ಕೆಲವು ವಿಮರ್ಶಕರು ಭಿನ್ನಾಭಿಪ್ರಾಯದ ಧ್ವನಿಗಳನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ತತ್ವಗಳಿಗಾಗಿ ಹೋರಾಟವನ್ನು ಮುಂದುವರಿಸಲು ಪ್ರತಿಜ್ಞೆ ಮಾಡಿದೆ. ಈ ಹೋರಾಟದಲ್ಲಿ ತಮ್ಮನ್ನು ಬೆಂಬಲಿಸುವಂತೆ ಜನರಿಗೆ ಕರೆ ನೀಡಲಾಗಿದೆ. ಅನರ್ಹತೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಪಕ್ಷ, ಇದು ನಿಯಮಗಳ ಪ್ರಕಾರ ನಡೆದ ಕಾನೂನು ಪ್ರಕ್ರಿಯೆ ಎಂದು ಹೇಳಿದೆ.

ಕಾಂಗ್ರೆಸ್​ನಿಂದ ದೇಶಾದ್ಯಂತ ಪ್ರತಿಭಟನೆ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಗುರುವಾರ ವಿಧಿಸಿದೆ. ಶುಕ್ರವಾರದಂದು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಅನರ್ಹತೆಯಿಂದ ರಕ್ಷಿಸುವ ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್​ ಗಾಂಧಿ: ಇತಿಹಾಸ ನೆನಪಿಸಿದ ಅಣ್ಣಾಮಲೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.