ಅಹಮದಾಬಾದ್: ದೂರುದಾರರ ನಿರಂತರ ಅನುಪಸ್ಥಿತಿಯ ಆಧಾರದ ಮೇಲೆ ಅಹಮದಾಬಾದ್ ಜಿಲ್ಲಾ ಸಹಕಾರಿ (ಎಡಿಸಿ) ಬ್ಯಾಂಕ್ ತನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮನ್ನು ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.
ವಿಚಾರಣೆಗೆ ಹಾಜರಾಗಲು ಮತ್ತು ಮುಂದೂಡಲು ಕೋರಿ ದೂರುದಾರರಾಗಿರುವ ಬ್ಯಾಂಕ್ ಅಧ್ಯಕ್ಷ ಅಜಯ್ ಪಟೇಲ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ರಾಹುಲ್ ಪರ ವಕೀಲ ಪಿ ಎಸ್ ಚಂಪನೇರಿ ತಿಳಿಸಿದ್ದಾರೆ.
ಪಟೇಲ್ ಹಲವಾರು ಸಂದರ್ಭಗಳಲ್ಲಿ ವಿಚಾರಣೆಗೆ ಹಾಜರಾಗಲಿಲ್ಲ ಎಂದು ವಕೀಲರು ಹೇಳಿದ್ದಾರೆ.
ಪಟೇಲ್ ಅವರ ಮನವಿಯನ್ನು ತಿರಸ್ಕರಿಸಿದ ನಂತರ, ರಾಹುಲ್ ಗಾಂಧಿ ಪರ ವಕೀಲರು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಪಿ ದುಲೇರಾ ಅವರ ಮುಂದೆ ಪ್ರಕರಣದ ವಿಸರ್ಜನೆಗಾಗಿ ಅರ್ಜಿ ಸಲ್ಲಿಸಿದರು.
"ಈ ಎರಡು ಅರ್ಜಿಗಳ ನಿರಾಕರಣೆಯ ಪರಿಣಾಮವು ಆರೋಪಿಗಳನ್ನು ಪ್ರಕರಣದಿಂದ ಮುಕ್ತಗೊಳಿಸಲು ಕಾರಣವಾಗುತ್ತದೆ. ಆದ್ದರಿಂದ ನಾವು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯಡಿ ಡಿಸ್ಚಾರ್ಜ್ ಅರ್ಜಿಯನ್ನು ಸಲ್ಲಿಸಿದ್ದೇವೆ" ಎಂದು ವಕೀಲ ಚಂಪನೇರಿ ಹೇಳಿದರು.
ಫೆಬ್ರವರಿ 11 ನ್ಯಾಯಾಲಯ ಈ ಅರ್ಜಿಯ ವಿಚಾರಣೆ ನಡೆಸಲಿದೆ.