ನವದೆಹಲಿ : ಉತ್ತರಪ್ರದೇಶದ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಈ ಸಂಬಂಧ ಲೋಕಸಭೆಯಲ್ಲಿಂದು ನಿಲುವಳಿ ಸೂಚನೆ ಮಂಡಿಸಿದ್ದಾರೆ.
-
मोदी जी, फिर से माफ़ी माँगने का टाइम आ गया…
— Rahul Gandhi (@RahulGandhi) December 14, 2021 " class="align-text-top noRightClick twitterSection" data="
लेकिन पहले अभियुक्त के पिता को मंत्री पद से हटाओ।
सच सामने है!#Lakhimpur #Murder pic.twitter.com/r5wfoOLHak
">मोदी जी, फिर से माफ़ी माँगने का टाइम आ गया…
— Rahul Gandhi (@RahulGandhi) December 14, 2021
लेकिन पहले अभियुक्त के पिता को मंत्री पद से हटाओ।
सच सामने है!#Lakhimpur #Murder pic.twitter.com/r5wfoOLHakमोदी जी, फिर से माफ़ी माँगने का टाइम आ गया…
— Rahul Gandhi (@RahulGandhi) December 14, 2021
लेकिन पहले अभियुक्त के पिता को मंत्री पद से हटाओ।
सच सामने है!#Lakhimpur #Murder pic.twitter.com/r5wfoOLHak
ನಿಲುವಳಿ ಸೂಚಕ ಮಂಡನೆ ಜೊತೆಗೆ ಕಾಂಗ್ರೆಸ್ ತಮ್ಮ ಪಕ್ಷದ ಸಂಸದರ ಸಭೆ ನಡೆಸಿದ್ದು, ಲಖೀಂಪುರ ಖೇರಿ ಹಿಂಸಾಚಾರದ ಬಗ್ಗೆ ಸಭೆಯಲ್ಲಿ ಚರ್ಚಿಸಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಹಣಿಯಲು ಮುಂದಾಗಿದೆ.
ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ರೈತರ ಮೇಲೆ ಕಾರು ಹರಿಸಿರುವುದು ಪೂರ್ವ ಯೋಜಿತ ಪಿತೂರಿ ಎಂದು ಹೇಳಿ 13 ಆರೋಪಿಗಳ ವಿರುದ್ಧ ಹೊಸ ಸೆಕ್ಷನ್‌ಗಳನ್ನು ಸೇರಿಸಲು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಬಳಿ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಲಖೀಂಪುರ್ ಖೇರಿ ಹಿಂಸಾಚಾರ ಪೂರ್ವಯೋಜಿತ: ಆರೋಪಿಗಳ ವಿರುದ್ಧ ಹೊಸ ಸೆಕ್ಷನ್ ಸೇರಿಸಲು ಎಸ್‌ಐಟಿ ಅರ್ಜಿ