ETV Bharat / bharat

'Dis'Qualified MP' ಎಂದು ಟ್ವಿಟರ್, ಫೇಸ್​ಬುಕ್​​ ಅಪ್ಡೇಟ್​ ಮಾಡಿದ ರಾಹುಲ್​ ಗಾಂಧಿ

author img

By

Published : Mar 26, 2023, 12:45 PM IST

ಕಾಂಗ್ರೆಸ್ ಮಾಜಿ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಮತ್ತು ಫೇಸ್​ಬುಕ್​​ ಖಾತೆಯ ಬಯೋವನ್ನು 'ಅನರ್ಹ ಸಂಸದ' ಎಂದು ಬದಲಾಯಿಸುವ ಮೂಲಕ ಆಡಳಿತಾರೂಢ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Rahul
ರಾಹುಲ್​ ಗಾಂಧಿ

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಮ್ಮ ಟ್ವಿಟರ್ ಮತ್ತು ಫೇಸ್​ಬುಕ್ ಬಯೋವನ್ನು 'ಅನರ್ಹ ಸಂಸದ' ಎಂದು ಹೊಸದಾಗಿ ಅಪ್ಡೇಟ್​ ಮಾಡಿದ್ದಾರೆ. 23 ಮಿಲಿಯನ್ ಫಾಲೋವರ್ಸ್​ ಮತ್ತು 269 ಟ್ವಿಟರ್ ಖಾತೆಗಳನ್ನು ಫಾಲೋ ಮಾಡುತ್ತಿರುವ ಕೇರಳದ ವಯನಾಡ್ ಕ್ಷೇತ್ರದ​ ಮಾಜಿ ಸಂಸದ, ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ, ಸಂಸತ್ತಿನಿಂದ ಅನರ್ಹಗೊಂಡ ಎರಡು ದಿನಗಳ ನಂತರ ಈ ರೀತಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಲೋಕಸಭೆಯಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಮೊದಲ ಮಾಧ್ಯಮಗೋಷ್ಟಿ

ರಾಹುಲ್ ಅನರ್ಹತೆ ಖಂಡಿಸಿ ಇಂದೂ ಸಹ ಕೈ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ದೇಶದ ಎಲ್ಲಾ ರಾಜ್ಯಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಅನರ್ಹತೆಯಿಂದ ರಕ್ಷಿಸುವ ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್​ ಗಾಂಧಿ: ಇತಿಹಾಸ ನೆನಪಿಸಿದ ಅಣ್ಣಾಮಲೈ

ಕಳೆದ ಕೆಲವು ದಿನಗಳ ಹಿಂದೆ ಲಂಡನ್‌ಗೆ ಭೇಟಿ ನೀಡಿದ್ದ ರಾಹುಲ್​ ಗಾಂಧಿ 'ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಬಳಿಕ ತಮ್ಮ ಈ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಬಿಜೆಪಿ ಒತ್ತಾಯಿಸಿತ್ತು. ಆದರೆ, ಕಾಂಗ್ರೆಸ್ ಕ್ಷಮೆಯಾಚನೆಯನ್ನು ತಳ್ಳಿಹಾಕಿತ್ತು.

ಶನಿವಾರ ಅನರ್ಹತೆ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್‌ ಗಾಂಧಿ, ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಬಂಧವನ್ನು ಮತ್ತೆ ಪ್ರಶ್ನಿಸಿದ್ದರು. ಜೊತೆಗೆ ನಾನು ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿದ್ದೇನೆ. ಯಾರಿಗೂ ಹೆದರುವುದಿಲ್ಲ ಎಂದು ಪುನರುಚ್ಛಸಿರಿದ್ದರು.

ಇದನ್ನೂ ಓದಿ : ನನ್ನನ್ನು ಅನರ್ಹಗೊಳಿಸಿ, ಜೈಲಿಗೆ ಹಾಕಿದರೂ ಕೂಡ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ: ರಾಹುಲ್​ ಗಾಂಧಿ

ಅನರ್ಹತೆಗೆ ಕಾರಣವಾದ ಪ್ರಕರಣ: 2019 ರಲ್ಲಿ ಕೋಲಾರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ವೇಳೆ ರಾಹುಲ್​ ಗಾಂಧಿ, 'ಮೋದಿ ಉಪನಾಮ' ಪದ ಬಳಸಿ ವ್ಯಂಗ್ಯವಾಗಿ ಮಾತನಾಡಿದ್ದರು. "ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿಯಂತಹ ಎಲ್ಲಾ ಕಳ್ಳರು ಏಕೆ ಸಾಮಾನ್ಯ ಉಪನಾಮಗಳನ್ನು ಹೊಂದಿದ್ದಾರೆ" ಎಂದು ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ ದಾಖಲಾದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯ ಗುರುವಾರ ರಾಹುಲ್ ಗಾಂಧಿ​ ದೋಷಿ ಎಂದು ಘೋಷಿಸಿ 2 ವರ್ಷಗಳ ಕಾಲ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದಾದ ಒಂದು ದಿನದ ನಂತರ ರಾಹುಲ್ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಸಂವಿಧಾನದ 102 (1) (e) ವಿಧಿಯ ನಿಬಂಧನೆಗಳ ಅಡಿಯಲ್ಲಿ ಅನರ್ಹಗೊಳಿಸಲಾಗಿದೆ.

ಇದನ್ನೂ ಓದಿ : ವೀರ್ ಸಾವರ್ಕರ್​ರಂತೆ ನಾನು ಕ್ಷಮೆ ಕೇಳುವುದಿಲ್ಲ: ರಾಹುಲ್ ಗಾಂಧಿ ಗರಂ

ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಸತ್ಯಾಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.