ETV Bharat / bharat

ಮಕ್ಕಳಿಗೋಸ್ಕರನಾದ್ರೂ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳಲಿ - ರಾಹುಲ್​ ಗಾಂಧಿ - ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಜೈವೀರ್ ಶೆರ್ಗಿಲ್ ಅವರು ಕೋವಿಡ್​ 3ನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಭಾರತದ ಮಕ್ಕಳಿಗಾಗಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

RaGa hopes Modi 'system' will wake up for kids' sake
ರಾಹುಲ್​ ಗಾಂಧಿ
author img

By

Published : May 18, 2021, 2:19 PM IST

ನವದೆಹಲಿ: ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದು, ನರೇಂದ್ರ ಮೋದಿ ಸರ್ಕಾರದ ಸನ್ನದ್ಧತೆ ಮತ್ತು ಯೋಜನೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

"ಮುಂಬರಲಿರುವ ದಿನಗಳಲ್ಲಿ ಮಕ್ಕಳಿಗೆ ಕೋವಿಡ್​ನಿಂದ ರಕ್ಷಣೆ ಬೇಕಾಗುತ್ತದೆ. ಮಕ್ಕಳ ಆರೋಗ್ಯ ಸೇವೆಗಳು ಮತ್ತು ಲಸಿಕೆ-ಚಿಕಿತ್ಸೆಯ ಮಾರ್ಗಸೂಚಿಗಳು ಈಗಾಗಲೇ ಜಾರಿಯಲ್ಲಿರಬೇಕಿತ್ತು. ಪ್ರಸ್ತುತ ಮೋದಿ ಸರ್ಕಾರದ ವ್ಯವಸ್ಥೆಯನ್ನು ನಿದ್ರೆಯಿಂದ ಎಚ್ಚರಗೊಳಿಸುವುದು ಭಾರತದ ಭವಿಷ್ಯದ ಅಗತ್ಯತೆಯಾಗಿದೆ" ಎಂದು ರಾಗಾ ಟ್ವೀಟ್​ ಮಾಡಿದ್ದಾರೆ.

  • In the time to come, children will need protection from Corona. Paediatric services and vaccine-treatment protocol should already be in place.

    India’s future needs for the present Modi ‘system’ to be shaken out of sleep.

    — Rahul Gandhi (@RahulGandhi) May 18, 2021 " class="align-text-top noRightClick twitterSection" data=" ">

ಇದೇ ವಿಚಾರವಾಗಿ ಟ್ವೀಟ್​ ಮಾಡಿರುವ ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್, " ಡಾರ್ಕ್ ಚಾಕೊಲೇಟ್ ತಿನ್ನುವುದು ಮತ್ತು ಗೋಮೂತ್ರವನ್ನು ಕುಡಿಯುವ ಸಲಹೆಯನ್ನು ನೀಡುವುದನ್ನು ಬಿಟ್ಟು ಕೋವಿಡ್​ 3ನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಭಾರತದ ಮಕ್ಕಳಿಗಾಗಿ ಬಿಜೆಪಿ ಸರ್ಕಾರ ಸಿದ್ಧತೆ ನಡೆಸುವುದು ಒಳಿತು ಎಂದು ತಿಳಿಸಿದ್ದಾರೆ.

  • Sincerely hope especially for sake of India’s children that BJPGovt is preparing for anticipated 3rd #COVID19 wave beyond giving advice of eating dark chocolate & drinking cow urine;Has a GOI task force of paediatricians been formed?Or the plan is to play the usual helpless card?

    — Jaiveer Shergill (@JaiveerShergill) May 18, 2021 " class="align-text-top noRightClick twitterSection" data=" ">

ಅಮೆರಿಕ ಸೇರಿದಂತೆ ಕೆಲ ದೇಶಗಳು 12-15 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಮುಂದಾಗಿವೆ. ಭಾರತದಲ್ಲಿನ್ನೂ 18 ವರ್ಷ ಮೇಲ್ಪಟ್ಟವರಿಗೆ ಸರಿಯಾಗಿ ಲಸಿಕೆ ಸಿಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಅನೇಕ ಟೀಕೆಗಳಿಗೆ ಗುರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.