ETV Bharat / bharat

ಲಿಖಿತ ಪರೀಕ್ಷೆ ಇಲ್ಲದೇ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ 100 ಜನರಿಗೆ ಮೋಸ: ಇಬ್ಬರು ಅರೆಸ್ಟ್​ - ಲಿಖಿತ ಪರೀಕ್ಷೆ ಇಲ್ಲದೇ ಉದ್ಯೋಗ

ರೈಲ್ವೆ ಅಧಿಕಾರಿಗಳೊಂದಿಗೆ ಬೆಳೆದಿದ್ದ ಸಂಪರ್ಕವನ್ನೇ ಬಂಡವಾಳ ಮಾಡಿಕೊಂಡು ಲಿಖಿತ ಪರೀಕ್ಷೆಗಳು ಇಲ್ಲದೇ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕರಿಂದ ಆರೋಪಿಗಳು ಹಣ ಪಡೆಯುತ್ತಿದ್ದರು.

railways
railways
author img

By

Published : Mar 15, 2022, 3:30 PM IST

ಹೈದರಾಬಾದ್​ (ತೆಲಂಗಾಣ): ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಂದ 10 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಹೈದರಾಬಾದ್​ನ ರಾಚಕೊಂಡ ಪೊಲೀಸ್​ ಆಯುಕ್ತಾಲಯದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೆನಗೊಂಡ ಮೂಲದ ಪೊನ್ನಾಲ ಭಾಸ್ಕರ್​ ಮತ್ತು ಸಿಕಂದರಾಬಾದ್​ನ ವ್ಯಾಪಾರಿ ರಿತೇಶ್​ ಬಂಧಿತ ಆರೋಪಿಗಳು. ಇದರಲ್ಲಿ ಪ್ರಮುಖ ಆರೋಪಿಯಾದ ಭಾಸ್ಕರ್​​ ಸುಮಾರು 100 ಜನ ಉದ್ಯೋಗಾಕಾಂಕ್ಷಿಗಳಿಂದ ಅಂದಾಜು 10 ಕೋಟಿ ರೂ. ಪಡೆದು ಮೋಸ ಮಾಡಿದ್ದಾನೆ. ಪ್ರತಿಯೊಬ್ಬ ಅಭ್ಯಥಿಯಿಂದಲೂ ತಲಾ 10 ಲಕ್ಷ ರೂ. ಪಡೆಯಲಾಗುತ್ತಿತ್ತು ಎನ್ನಲಾಗ್ತಿದೆ.

ರೈಲ್ವೆ ಗುತ್ತಿಗೆ ಕೆಲಸಗಳಿಗೆ ಸಂಬಂಧಿಸಿದಂತೆ ಬಾಕಿ ಬಿಲ್​​ಗಳ ಹಣ ಕೊಡಿಸುವ ಮೂಲಕ ಗುತ್ತಿಗೆದಾರರಿಂದ ಕಮಿಷನ್​ ಪಡೆಯುವುದನ್ನು ಆರೋಪಿ ಭಾಸ್ಕರ್ ಮಾಡುತ್ತಿದ್ದ. ಇದರಿಂದ ದೆಹಲಿಯಲ್ಲಿನ ರೈಲ್ವೆ ಅಧಿಕಾರಿಗಳೊಂದಿಗೆ ಈತನಿಗೆ ಸಂಪರ್ಕ ಬೆಳೆದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಲಿಖಿತ ಪರೀಕ್ಷೆಗಳು ಇಲ್ಲದೇ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕರಿಂದ ಹಣ ಪಡೆಯುತ್ತಿದ್ದ ಎಂದು ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ ಭಾಗವತ್​ ತಿಳಿಸಿದ್ದಾರೆ.

ಬಯಲಿಗೆ ಬಂದಿದ್ದು ಹೇಗೆ?: ಭಾಸ್ಕರ್​ ಸಹಚಾರನಾದ ರಿತೇಶ್​ ಮೂಲಕ 16 ಜನ ಉದ್ಯೋಗಾಕಾಂಕ್ಷಿಗಳಿಂದ ಅಂದಾಜು 1 ಕೋಟಿ ರೂ. ಹಣ ಪಡೆಯಲಾಗಿತ್ತು. ಈ ಹಣ ನೀಡಿದ್ದ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ರಿತೇಶ್​ ಮೇಲೆ ಒತ್ತಡ ಹಾಕಿದ್ದರು. ಆಗ ವಿಷಯವನ್ನು ಭಾಸ್ಕರ್​ ಗಮನಕ್ಕೆ ತಂದಾಗ ಆತ ನಕಲಿ ಉದ್ಯೋಗ ನೇಮಕಾತಿ ಪತ್ರಗಳನ್ನು ಆಕಾಂಕ್ಷಿಗಳಿಗೆ ನೀಡಿದ್ದ. ಈ ಉದ್ಯೋಗ ಪತ್ರಗಳನ್ನು ಹಿಡಿದುಕೊಂಡು ಆಕಾಂಕ್ಷಿಗಳು ದೆಹಲಿಗೆ ತೆರಳಿದ್ದರು. ಈ ವೇಳೆ ತಾವು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ಅಂತೆಯೇ ಉದ್ಯೋಗಾಕಾಂಕ್ಷಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಅಲ್ಲದೇ, 9 ಲಕ್ಷ ರೂ. ನಗದು ಮತ್ತು 25 ಲಕ್ಷ ರೂ. ಮೌಲ್ಯದ ಎರಡು ಕಾರುಗಳು ಹಾಗೂ ನಕಲಿ ನೇಮಕಾತಿ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಮುಖ ಆರೋಪಿ ಭಾಸ್ಕರ್​​ ವಿದೇಶದಿಂದ ಹಣ ವರ್ಗಾವಣೆ ಸಂಬಂಧಿಸಿದ ವಂಚನೆ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಇಂಟರ್​ನೆಟ್​​ ಸೌಲಭ್ಯ: ಯಾವ ರಾಜ್ಯದಲ್ಲಿ ಎಷ್ಟಿದೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.