ETV Bharat / bharat

Wi-Fi 7 ಕ್ಷಮತೆಯ 20GB ಚಿಪ್​​ಸೆಟ್​ ಬಿಡುಗಡೆ ಮಾಡಿದ ಕ್ವಾಲ್ಕಾಮ್ - ಕಂಪ್ಯೂಟರ್ ಚಿಪ್ ತಯಾರಕ ಕಂಪನಿ ಕ್ವಾಲ್ಕಾಮ್

ಹೊಸ ಕ್ವಾಲ್ಕಾಮ್ ಚಿಪ್‌ಗಳನ್ನು ಪ್ರಸ್ತುತ ಹೋಮ್ ರೂಟರ್‌ಗಳು ಮತ್ತು ಮೆಶ್ ವೈ-ಫೈ ಸಾಧನಗಳ ತಯಾರಕರು ಸ್ಯಾಂಪಲ್ ಆಗಿ ಪರಿಶೀಲನೆ ಮಾಡುತ್ತಿದ್ದಾರೆ. ಇವು 2023 ರ ದ್ವಿತೀಯಾರ್ಧದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

Wi-Fi 7 ಕ್ಷಮತೆಯ 20 GB ಚಿಪ್​​ಸೆಟ್​ ಬಿಡುಗಡೆ ಮಾಡಿದ ಕ್ವಾಲ್ಕಾಮ್
qualcomm-unveils-new-wi-fi-7-capable-chipsets-with-over-20-gbps-capacity
author img

By

Published : Dec 14, 2022, 5:12 PM IST

Updated : Dec 14, 2022, 5:20 PM IST

ಸ್ಯಾನ್ ಫ್ರಾನ್ಸಿಸ್ಕೋ: ಜಾಗತಿಕ ಮಟ್ಟದ ಕಂಪ್ಯೂಟರ್ ಚಿಪ್ ತಯಾರಕ ಕಂಪನಿ ಕ್ವಾಲ್ಕಾಮ್ ತನ್ನ ಹೊಸ ಇಮ್ಮರ್ಸಿವ್ ಹೋಮ್ ಪ್ಲಾಟ್‌ಫಾರ್ಮ್‌ನ ಭಾಗವಾಗಿ ವೈ-ಫೈ 7 ಸಾಮರ್ಥ್ಯದ ಚಿಪ್‌ಸೆಟ್‌ಗಳನ್ನು ಅನಾವರಣಗೊಳಿಸಿದೆ. ಇತ್ತೀಚಿನ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಮತ್ತು ಉನ್ನತ-ಕಾರ್ಯಕ್ಷಮತೆಯ ಸಾಧನಗಳ ಸಂಪೂರ್ಣ ಶ್ರೇಣಿಯನ್ನು ಸಪೋರ್ಟ್ ಮಾಡುವಂತೆ ಇವನ್ನು ನಿರ್ಮಿಸಲಾಗಿದೆ. ಹೊಸ ವೈ-ಫೈ 7 ಇಮ್ಮರ್ಸಿವ್ ಪ್ಲಾಟ್​ಫಾರ್ಮ್​ ಒಟ್ಟಾರೆ 20 ಜಿಬಿಪಿಎಸ್​ ಸಿಸ್ಟಮ್ ಸಾಮರ್ಥ್ಯದಲ್ಲಿ ಚಿಕ್ಕ ಗಾತ್ರದಲ್ಲಿ, ವಿದ್ಯುತ್ ಮಿತವ್ಯಯಕಾರಿಯಾಗಿ, ಕಡಿಮೆ ವೆಚ್ಚದಲ್ಲಿ ನೆಟ್ವರ್ಕ್ ಚಿಪ್​ಸೆಟ್​ ಆರ್ಕಿಟೆಕ್ಚರ್ ಕೆಲಸ ಮಾಡುತ್ತದೆ.

ಹೋಮ್ ನೆಟ್‌ವರ್ಕಿಂಗ್‌ನಲ್ಲಿ ವೆಚ್ಚ-ಪರಿಣಾಮಕಾರಿ, ಕಡಿಮೆ ಪ್ರೊಫೈಲ್ ಫಾರ್ಮ್ ಫ್ಯಾಕ್ಟರ್‌ನಲ್ಲಿ ಉನ್ನತ-ಕಾರ್ಯಕ್ಷಮತೆಯ ಸಂಪರ್ಕವನ್ನು ಸಕ್ರಿಯಗೊಳಿಸಲು ನಾವು ಕ್ವಾಲ್ಕಾಮ್ ಇಮ್ಮರ್ಸಿವ್ ಹೋಮ್ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಮೂಲಕ ಹೊಸ ಆವಿಷ್ಕಾರಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ ಎಂದು ಕ್ವಾಲ್ಕಾಮ್ ಟೆಕ್ನಾಲಜೀಸ್ ವೈರ್​ಲೆಸ್​ ಇನ್ಫ್ರಾಸ್ಟ್ರಕ್ಚರ್ ಮತ್ತು ನೆಟ್ವರ್ಕಿಂಗ್ ಹಿರಿಯ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ನಿಕ್ ಕುಚರೆವ್ ಸ್ಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸ ಕ್ವಾಲ್ಕಾಮ್ ಚಿಪ್‌ಗಳನ್ನು ಪ್ರಸ್ತುತ ಹೋಮ್ ರೂಟರ್‌ಗಳು ಮತ್ತು ಮೆಶ್ ವೈ-ಫೈ ಸಾಧನಗಳ ತಯಾರಕರು ಸ್ಯಾಂಪಲ್ ಆಗಿ ಪರಿಶೀಲನೆ ಮಾಡುತ್ತಿದ್ದಾರೆ. ಇವು 2023 ರ ದ್ವಿತೀಯಾರ್ಧದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಇಂದಿನ ಮತ್ತು ಭವಿಷ್ಯದ ಮನೆಗಳ ಟೆಲಿಪ್ರೆಸೆನ್ಸ್, AR/VR ಮತ್ತು ಇಮ್ಮರ್ಸಿವ್ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಸಕ್ರಿಯಗೊಳಿಸಲು ಚಿಪ್‌ಸೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಹೊಸ Wi-Fi 7 ತಂತ್ರಜ್ಞಾನವನ್ನು ಇತ್ತೀಚಿನ ಉನ್ನತ ಕಾರ್ಯಕ್ಷಮತೆಯ ಸಾಧನಗಳಿಗೆ ಗರಿಷ್ಠ ಸಂಪರ್ಕವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಒಂದು ಸಂಪರ್ಕಿತ ಸಾಧನಕ್ಕೆ 5.8 Gbps ವರೆಗೆ ಗರಿಷ್ಠ ವೇಗವನ್ನು ತಲುಪಿಸುತ್ತದೆ. ಕ್ವಾಲ್ಕಾಮ್‌ನ ಹೊಸ ಪ್ಲಾಟ್‌ಫಾರ್ಮ್ ಮಲ್ಟಿ-ಲಿಂಕ್ ಮೆಶ್ ಎಂದು ಕರೆಯಲ್ಪಡುವ ಮೆಶ್ ನೆಟ್‌ವರ್ಕಿಂಗ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಲ್ಯಾಗ್-ಫ್ರೀ ಗೇಮಿಂಗ್ ಅನುಭವಗಳಿಗಾಗಿ ರಿಯಲ್ ಟೈಮ್ ಲೇಟೆನ್ಸಿಯನ್ನು ಶೇಕಡಾ 75 ರಷ್ಟು ಕಡಿಮೆ ಮಾಡಬಹುದು ಎಂದು ಕಂಪನಿ ಹೇಳಿದೆ.

ಇದು ದಟ್ಟಣೆಯ ಮನೆಯ ಪರಿಸರವನ್ನು ತಪ್ಪಿಸಲು ಅಡಾಪ್ಟಿವ್ ಇಂಟರ್‌ಫರೆನ್ಸ್ ಪಂಕ್ಚರಿಂಗ್ ಅನ್ನು ಬಳಸುತ್ತದೆ ಮತ್ತು ಇತರ ನೆಟ್‌ವರ್ಕ್‌ಗಳಿಂದ ಹಸ್ತಕ್ಷೇಪವನ್ನು ತಪ್ಪಿಸಲು ಅವಾಯ್ಡನ್ಸ್​ ಅಲ್ಗಾರಿದಮ್‌ಗಳನ್ನು ಬಳಸುತ್ತದೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಮುಂದಾದ ವೇದಾಂತ, ಫಾಕ್ಸ್​ಕಾನ್​

Last Updated : Dec 14, 2022, 5:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.