ಹೈದರಾಬಾದ್: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮಾಡಿರುವ ಗೊಂದಲದ ಟ್ವೀಟ್ಗೆ ಸಂಬಂಧಿಸಿದಂತೆ ಅವರ ತಂದೆಯನ್ನ ಕೇಳಿದಾಗ, ಎಲ್ಲರೂ ಸಿಂಧು ಮಾಡಿರುವ ಟ್ವೀಟ್ ಸಂಪೂರ್ಣವಾಗಿ ಓದುವಂತೆ ಮನವಿ ಮಾಡಿದ್ದಾರೆ.
'ನಾನು ನಿವೃತ್ತಿಯಾಗುತ್ತಿದ್ದೇನೆ'... ಗೊಂದಲ ಹುಟ್ಟಿಸಿದ ಪಿವಿ ಸಿಂಧು ದಿಢೀರ್ ಟ್ವೀಟ್!
ಕಳೆದ ಕೆಲ ತಿಂಗಳಿಂದ ಜಗತ್ತಿನಲ್ಲಿ ಅಶಾಂತಿ, ಕೆಟ್ಟ ಪರಿಸ್ಥಿತಿ ಉದ್ಭವವಾಗಿತ್ತು. ಆದರೆ ಇದೀಗ ಆ ಭಯದಿಂದ ನಾನು ನಿವೃತ್ತಿಯಾಗುತ್ತಿದ್ದೇನೆ ಎಂದಿದ್ದಾರೆ. ಕೊರೊನಾ ವೈರಸ್ ಹಾಗೂ ಲಾಕ್ಡೌನ್ ನಮಗೆ ಅನೇಕ ಪಾಠ ಕಲಿಸಿದೆ. ಹೀಗಾಗಿ ಮನೆಯಲ್ಲೇ ಜೀವನ ಕಳೆಯುವಂತಾಗಿದೆ ಎಂದು ಸಿಂದು ಟ್ವೀಟ್ ಮಾಡಿದ್ದರು. ಇದರಿಂದ ಅನೇಕ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದರು.
- — Pvsindhu (@Pvsindhu1) November 2, 2020 " class="align-text-top noRightClick twitterSection" data="
— Pvsindhu (@Pvsindhu1) November 2, 2020
">— Pvsindhu (@Pvsindhu1) November 2, 2020
ಇದೀಗ ಇದರ ಬಗ್ಗೆ ಅವರ ತಂದೆ ಪಿ.ವಿ.ರಮಣ್ ಸ್ಪಷ್ಟನೆ ನೀಡಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಸಿಂಧು ಮಾಡಿರುವ ಟ್ವೀಟ್ ಸಂಪೂರ್ಣವಾಗಿ ಓದುವಂತೆ ತಿಳಿಸಿದ್ದು, ಸದ್ಯ ಅವರು ಬ್ಯಾಡ್ಮಿಂಟನ್ನಿಂದ ನಿವೃತ್ತಿ ಪಡೆದುಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಿಂಧು ಕೌಟುಂಬಿಕ ಸಮಸ್ಯೆಯಿಂದಾಗಿ ಲಂಡನ್ಗೆ ತೆರಳಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪಿ.ವಿ.ರಮಣ್, ಸಿಂಧು ತನ್ನ ತರಬೇತಿಯ ಕಡೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಗ್ಯಾಟೋರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಗೆ ತೆರಳಿದ್ದಾರೆ ಎಂದು ತಿಳಿಸಿದ್ದರು.