ETV Bharat / bharat

ಗಂಟೆಯಲ್ಲಿ 3,321 ಸಲ ದಂಡ ಹೊಡೆದು ವಿಶ್ವದಾಖಲೆ ನಿರ್ಮಿಸಿದ ಮಹಾರಾಷ್ಟ್ರದ ಯುವಕ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಯುವಕನೊಬ್ಬ ಪುಶ್​ಅಪ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾನೆ. ಒಂದು ತಾಸಿನಲ್ಲಿ 3,321 ಬಾರಿ ದಂಡ ಹೊಡೆಯುವ ಮೂಲಕ ಆಸ್ಟ್ರೇಲಿಯಾದ ಡೇನಿಯಲ್​ ಹೆಸರಲ್ಲಿದ್ದ ದಾಖಲೆ ಅಳಿಸಿದ್ದಾನೆ.

ಗಂಟೆಯಲ್ಲಿ 3321 ಸಲ ದಂಡ ಹೊಡೆದು ವಿಶ್ವದಾಖಲೆ ನಿರ್ಮಿಸಿದ ಮಹಾರಾಷ್ಟ್ರದ ಯುವಕ

author img

By

Published : Jun 15, 2022, 9:19 PM IST

Updated : Jun 15, 2022, 9:50 PM IST

ನಾಗ್ಪುರ(ಮಹಾರಾಷ್ಟ್ರ): ದೇಹವನ್ನು ಹುರಿಗಟ್ಟಲು ಪುಶ್​​ಅಪ್​ ಮಾಡುತ್ತಾರೆ. ಆದರೆ, ಇಲ್ಲೊಬ್ಬ ದಾಖಲೆಗಾಗಿ ಪುಶ್​ಅಪ್​ ಮಾಡಿದ್ದಾನೆ. ಅದೂ ಒಂದು ಗಂಟೆಯಲ್ಲಿ ಬರೋಬ್ಬರಿ 3,321 ಬಾರಿ ದಂಡ ಹೊಡೆಯುವ ಮೂಲದ ವಿಶ್ವ ದಾಖಲೆ ನಿರ್ಮಿಸಿದ್ದಾನೆ.

ಈ ಸಾಧಕನ ಹೆಸರು ಕಾರ್ತಿಕ್ ಜೈಸ್ವಾಲ್. ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ 21 ವರ್ಷದ ಈತ ಸಣ್ಣ ವಯಸ್ಸಿನಲ್ಲೇ ವಿಶ್ವವೇ ಕಣ್ಣರಳಿಸುವ ಸಾಧನೆ ಮಾಡಿ ತೋರಿಸಿದ್ದಾನೆ. 1 ಗಂಟೆಯಲ್ಲಿ ಅತಿ ಹೆಚ್ಚು ದಂಡ ಹೊಡೆಯುವ ಮೂಲಕ ಗಿನ್ನಿಸ್ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಆಟಗಾರ ಡೇನಿಯಲ್ ಸ್ಕಾಲಿ ಒಂದು ತಾಸಿನಲ್ಲಿ 3054 ಬಾರಿ ಪುಶ್​ಅಪ್​ ಹೊಡೆದಿದ್ದರು. ಇದೀಗ ಈ ವಿಶ್ವದಾಖಲೆ ಕಾರ್ತಿಕ್​ ಜೈಸ್ವಾಲ್​ ಹೆಸರಿಗೆ ಸೇರಿದೆ.

ಗಂಟೆಯಲ್ಲಿ 3,321 ಸಲ ದಂಡ ಹೊಡೆದು ವಿಶ್ವದಾಖಲೆ ನಿರ್ಮಿಸಿದ ಮಹಾರಾಷ್ಟ್ರದ ಯುವಕ

ಡೇನಿಯಲ್​ ಸ್ಕಾಲಿ ಕೂಡ ಇದೇ ವರ್ಷವೇ ದಂಡ ಹೊಡೆಯುವುದರಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು. ಕಾರ್ತಿಕ ಜೈಸ್ವಾಲ್​ ಕೆಲವೇ ತಿಂಗಳುಗಳ ಅಂತರದಲ್ಲಿ ಈ ದಾಖಲೆಯನ್ನು ಅಳಿಸಿ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

ಐದು ವರ್ಷಗಳ ಸತತ ಅಭ್ಯಾಸ: ಕಾರ್ತಿಕ್ ಜೈಸ್ವಾಲ್ ಎಂಎಂಎ ಫೈಟರ್ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಹೊಂದಿರುವ ಫಿಟ್‌ನೆಸ್ ಆಟಗಾರ. 1 ಗಂಟೆಯಲ್ಲಿ ಹೆಚ್ಚು ಪುಶ್‌ಅಪ್ ಮಾಡಿದ ದಾಖಲೆಯನ್ನು ಸೃಷ್ಟಿಸಬೇಕು ಎಂದು ಕಾರ್ತಿಕ್ ಕಳೆದ 5 ವರ್ಷಗಳಿಂದ ದಿನಕ್ಕೆ 6 ಗಂಟೆಗಳಿಗಿಂತ ಹೆಚ್ಚು ಕಾಲ ಪುಶ್​ಅಪ್​ ಅಭ್ಯಾಸ ಮಾಡುತ್ತಿದ್ದಾರೆ.

ಪಣ ತೊಟ್ಟಿದ್ದ ಕಾರ್ತಿಕ್​: ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ ಪುಶ್​ಅಪ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಬಳಿಕ ಅವರ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಕಾರ್ತಿಕ್​ ದಾಖಲೆಯನ್ನು ಅಳಿಸಲೇಬೇಕು ಎಂದು 5 ವರ್ಷಗಳಿಂದ ಕಠಿಣ ಅಭ್ಯಾಸ ನಡೆಸಿದ್ದರು.

ಅಲ್ಲದೇ, ಕಳೆದ 2 ವರ್ಷಗಳಿಂದ ಜಿಮ್​ನಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಇದರ ಜೊತೆಗೆ 6 ಗಂಟೆಗಳ ನಿರಂತರ ಅಭ್ಯಾಸ ಅವರ ದೈನಂದಿನ ಜೀವನದ ಭಾಗವಾಗಿತ್ತು. ದಂಡ ಹೊಡೆಯುವ ಜೊತೆಗೆ ಒಂದು ಗಂಟೆ ಧ್ಯಾನವನ್ನೂ ಮಾಡುತ್ತಾರೆ. ಇದು ಫಿಟ್ನೆಸ್ ಕಾಪಾಡಿಕೊಳ್ಳಲು ನೆರವಾಯಿತು ಎಂಬುದು ಕಾರ್ತಿಕ್​​ರ ಮಾತಾಗಿದೆ. ಒಂದು ನಿಮಿಷದಲ್ಲಿ ಅತಿ ಹೆಚ್ಚು ದಂಡ ಹೊಡೆದ ದಾಖಲೆಯೂ ಕಾರ್ತಿಕ್​ ಹೆಸರಲ್ಲಿದೆ.

ಇದನ್ನೂ ಓದಿ: ಶೂಟರ್​ ಸಿಪ್ಪಿ ಸಿಧು ಹತ್ಯೆ ಕೇಸ್​: 7 ವರ್ಷದ ಬಳಿಕ ಜಡ್ಜ್​ ಪುತ್ರಿಯನ್ನು ಬಂಧಿಸಿದ ಸಿಬಿಐ

Last Updated : Jun 15, 2022, 9:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.