ETV Bharat / bharat

ಪಕ್ಷ ಗೆಲ್ಲಿಸಿ ಚುನಾವಣೆಯಲ್ಲಿ ಸೋತ ಸಿಎಂ ಧಾಮಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ - ಮುಖ್ಯಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್​ ರಾಜೀನಾಮೆ

ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್​ ರಾಜೀನಾಮೆ

author img

By

Published : Mar 11, 2022, 5:03 PM IST

ಡೆಹ್ರಾಡೂನ್​(ಉತ್ತರಾಖಂಡ): ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಲು ಕಂಡಿದ್ದರು. ಇಂದು ರಾಜ್ಯಪಾಲ ಗುರ್ಮಿತ್​ ಸಿಂಗ್​ ಅವರನ್ನು ಭೇಟಿ ಮಾಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದು, ಉತ್ತರಾಖಂಡದಲ್ಲಿ ನಾವು ಪ್ರಚಂಡ ಬಹುಮತ ಪಡೆದುಕೊಂಡಿದ್ದೇವೆ. ಆದರೆ, ಈಗಿನ ಸರ್ಕಾರದ ಅಧಿಕಾರದ ಅವಧಿ ಮುಕ್ತಾಯಗೊಂಡಿದ್ದು, ನನ್ನ ಸಚಿವ ಸಂಪುಟ ಮತ್ತು ನಾನು ಇಂದು ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯಪಾಲರು ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗುವವರೆಗೂ ಹಂಗಾಮಿ ಸ್ಥಾನದಲ್ಲಿ ಮುಂದುವರೆಯುವಂತೆ ಧಾಮಿಗೆ ಮನವಿ ಮಾಡಿದ್ದಾರೆ.

  • जैसा कि हमें उत्तराखण्ड में प्रचण्ड बहुमत प्राप्त हो चुका है, इसी क्रम में वर्तमान कार्यकाल का कार्य समाप्त होने के पश्चात आज राजभवन पहुंचकर मा. राज्यपाल श्री @LtGenGurmit जी (से.नि.) को कैबिनेट सहित अपना इस्तीफा सौंपा। pic.twitter.com/44mzZPTLdG

    — Pushkar Singh Dhami (@pushkardhami) March 11, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಮಾ.​​16ರಂದು ಸಿಎಂ ಆಗಿ ಭಗವಂತ್ ಮನ್​ ಪದಗ್ರಹಣ: ಅಮೃತಸರದಲ್ಲಿ ಬೃಹತ್ ರೋಡ್​ ಶೋಗೆ ಸಿದ್ಧತೆ

70 ಸದಸ್ಯರ ಉತ್ತರಾಖಂಡದಲ್ಲಿ ಭಾರತೀಯ ಜನತಾ ಪಾರ್ಟಿ 47 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದೆ. ಆದರೆ ಖತಿಮಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಪುಷ್ಕರ್ ಸಿಂಗ್ ಕಾಂಗ್ರೆಸ್​ ಅಭ್ಯರ್ಥಿ ಭುವನ್​ ಚಂದ್ರ ಕಪ್ರಿ ವಿರುದ್ಧ 6 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು.

ಧಾಮಿ-ಧೋನಿ ಹೋಲಿಕೆ​: ಉತ್ತರಾಖಂಡದಲ್ಲಿ ಬಿಜೆಪಿ ಗೆಲ್ಲಿಸಿ, ಸೋಲು ಕಂಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರು ಮಹೇಂದ್ರ ಸಿಂಗ್ ಧೋನಿ ಅವರಿಗೆ ಹೋಲಿಕೆ ಮಾಡಿದ್ದು, ಅವರೊಬ್ಬ ಒಳ್ಳೆಯ ಫಿನಿಶರ್ ಎಂದು ಕರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.