ETV Bharat / bharat

ಜರ್ಮನ್​ ಸೈನ್ಸ್​ ಎಕ್ಸ್​ಪೋಗೆ ಪಂಜಾಬ್​ ವಿದ್ಯಾರ್ಥಿ ಆಯ್ಕೆ.. ಭಾರತದಿಂದ ಇಬ್ಬರು ಸ್ಟೂಡೆಂಟ್ಸ್​ ಭಾಗಿ

ಭಾರತದ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದು ಮತ್ತೆ ಪ್ರೂವ್​ ಆಗಿದೆ. ಪಂಜಾಬ್​ನ ವಿದ್ಯಾರ್ಥಿಯೊಬ್ಬ ಜರ್ಮನಿಯಲ್ಲಿ ಮುಂದಿನ ತಿಂಗಳು ನಡೆಯುವ ಸೈನ್ಸ್​ ಎಕ್ಸ್​ಪೋಗೆ ಆಯ್ಕೆಯಾಗಿದ್ದಾನೆ. ಭಾರತದಿಂದ ಇಬ್ಬರು ವಿದ್ಯಾರ್ಥಿಗಳು ಎಕ್ಸ್​ಪೋದಲ್ಲಿ ಭಾಗವಹಿಸಲಿದ್ದಾರೆ.

punjab-student-selected-for-german-science-expo
ಜರ್ಮನ್​ ಸೈನ್ಸ್​ ಎಕ್ಸ್​ಪೋಗೆ ಪಂಜಾಬ್​ ವಿದ್ಯಾರ್ಥಿ ಆಯ್ಕೆ
author img

By

Published : Sep 27, 2022, 8:38 PM IST

ಚಂಡೀಗಢ​: ಜರ್ಮನಿಯಲ್ಲಿ ಮುಂದಿನ ತಿಂಗಳು ನಡೆಯುವ ವಿಜ್ಞಾನ ಎಕ್ಸ್​ಪೋದಲ್ಲಿ ಭಾರತದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರಿಬ್ಬರು ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿ ಅವರ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ. ಇಬ್ಬರಲ್ಲಿ ಒಬ್ಬ ಪಂಜಾಬ್​ ಮೂಲದ ಎಸ್​ಡಿ ಕಾಲೇಜು ವಿದ್ಯಾರ್ಥಿಯಾಗಿದ್ದಾರೆ.

ಜರ್ಮನಿಯ ಜೂಲಿಚ್ ನಗರದಲ್ಲಿ ಅಕ್ಟೋಬರ್ 4 ರಿಂದ ಅಕ್ಟೋಬರ್ 7 ರವರೆಗೆ ವಿಜ್ಞಾನ ಎಕ್ಸ್​ಪೋ ನಡೆಯಲಿದ್ದು, ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ಪುತ್ರ ನಿಖಿಲ್ ಎಂಬುವವರು ಆಯ್ಕೆಯಾಗಿದ್ದಾರೆ. ನಿಖಿಲ್​ರ ಈ ಸಾಧನೆಗೆ ಕುಟುಂಬ ಹಾಗೂ ಕಾಲೇಜು ಸಂತಸ ವ್ಯಕ್ತಪಡಿಸಿದೆ.

ಕಾಲೇಜಿನಿಂದಲೇ ಹಣದ ವ್ಯವಸ್ಥೆ: ವಿಜ್ಞಾನ ಎಕ್ಸ್​ಪೋಗೆ ಆಯ್ಕೆಯಾದ ವಿದ್ಯಾರ್ಥಿಗೆ ಆರ್ಥಿಕ ಸಮಸ್ಯೆ ಇರುವ ಕಾರಣ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಯ ಜರ್ಮನಿ ಪ್ರವಾಸದ ಖರ್ಚು ವಹಿಸಿಕೊಂಡಿದೆ. ತಮ್ಮ ಕಾಲೇಜಿನ ವಿದ್ಯಾರ್ಥಿ ವಿದೇಶದ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಕಾಲೇಜು ತಿಳಿಸಿದೆ.

ಸಂಶೋಧನೆ ಮಾಡುವ ಆಸೆ: ಬಡತನದಲ್ಲೂ ಅರಳಿದ ಪ್ರತಿಭೆಯಾದ ನಿಖಿಲ್ ತಾನು ಮುಂದೆ ಉನ್ನತ ವ್ಯಾಸಂಗ ಮಾಡಿ ಪಿಎಚ್​ಡಿ ಮಾಡಬೇಕು ಎಂಬ ಆಸೆ ಹೊಂದಿದ್ದಾನೆ. ಸರ್ಕಾರದ ಸ್ಕಾಲರ್‌ಶಿಪ್‌ ಪಡೆದು ಭೌತಶಾಸ್ತ್ರದಲ್ಲಿ ಸಂಶೋಧನಾ ಕೈಗೊಳ್ಳುವ ಗುರಿ ಹಾಕಿಕೊಂಡಿದ್ದಾನೆ.

ಓದಿ: ಎಸಿಪಿ ರೀನಾ ಸುವರ್ಣ ಹೆಸರು ಹೇಳಿ ಸುಲಿಗೆ: ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.