ETV Bharat / bharat

ಭಗತ್​ ಸಿಂಗ್​ ಭಯೋತ್ಪಾದಕ: ಪಂಜಾಬ್​ ಸಂಸದನ ವಿವಾದಿತ ಹೇಳಿಕೆಗೆ ವ್ಯಾಪಕ ಟೀಕೆ - ಸಂಸದ ಸಿಮ್ರನ್​ಜಿತ್ ಸಿಂಗ್ ಮಾನ್

ಪಂಜಾಬ್​ನ ಸಂಗ್ರೂರ್​ ಸಂಸದ ಸಿಮ್ರನ್​ಜಿತ್ ಸಿಂಗ್ ಮಾನ್​ ವಿವಾದಿತ ಹೇಳಿಕೆ ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Simranjit Singh Mann
Simranjit Singh Mann
author img

By

Published : Jul 16, 2022, 9:22 PM IST

ಚಂಡೀಗಢ(ಪಂಜಾಬ್​): ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್​​ ಭಯೋತ್ಪಾದಕ ಎಂದು ಹೇಳಿಕೆ ನೀಡುವ ಮೂಲಕ ಶಿರೋಮಣಿ ಅಕಾಲಿ ದಳದ ಸಂಸದ ಸಿಮ್ರನ್​ಜಿತ್ ಸಿಂಗ್ ಮಾನ್ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇವರ ಹೇಳಿಕೆಗೆ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಸಂಸದರಾಗಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್​​ ರಾಜೀನಾಮೆಯಿಂದ ತೆರವಾದ ಲೋಕಸಭಾ ಸ್ಥಾನ ಸಂಗ್ರೂರ್​​ನಲ್ಲಿ ಗೆಲುವು ದಾಖಲು ಮಾಡಿರುವ ಶಿರೋಮಣಿ ಅಕಾಲಿ ದಳದ ಸಿಮ್ರನ್​ಜಿತ್ ಸಿಂಗ್​ ಇದೀಗ ಈ ರೀತಿಯಾದ ಹೇಳಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಬಾಂಬ್ ಎಸೆದು, ಹಾಡುಹಗಲೇ ಇಂಗ್ಲೀಷ್ ಅಧಿಕಾರಿಯನ್ನ ಕೊಂದಿರುವ ಭಗತ್ ಸಿಂಗ್ ಓರ್ವ ಭಯೋತ್ಪಾದಕ ಎಂದು ಹೇಳಿರುವ ಅವರು, ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್​ ಭಿಂದ್ರನ್​ವಾಲ್​ ಅವರನ್ನ ಶ್ರೇಷ್ಠ ಸಿಖ್​ ನಾಯಕ ಎಂದು ಶ್ಲಾಘನೆ ಮಾಡಿದ್ದಾರೆ.

  • Sangrur MP Simranjit Singh Mann says Shaheed E Azam Bhagat Singh is a terrorist, when he was asked yesterday by journalists in Karnal about his take on Sardar Bhagat Singh pic.twitter.com/yVFX1mNr2k

    — Gagandeep Singh (@Gagan4344) July 15, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಉಪರಾಷ್ಟ್ರಪತಿ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಪಾಲ ಜಗದೀಪ್​ ಧನ್ಕರ್ ಕಣಕ್ಕೆ

ಇವರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಆಡಳಿತಾರೂಢ ಆಮ್​ ಆದ್ಮಿ ಪಕ್ಷ ಕ್ಷಮೆಯಾಚನೆಗೆ ಪಟ್ಟು ಹಿಡಿದಿದೆ. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಅವರನ್ನ ಭಯೋತ್ಪಾದಕ ಎಂದು ಕರೆಯುವುದು ಅಗೌರವ. ಅವರ ಬೇಜವಾಬ್ದಾರಿ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆಂದು ಎಎಪಿ ಟ್ವೀಟ್ ಮಾಡಿದೆ.

ಇದೇ ವಿಚಾರವಾಗಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್​ ಸಿಂಗ್ ಬಾದಲ್ ಕೂಡ ವಾಗ್ದಾಳಿ ನಡೆಸಿದ್ದು, ಪ್ರತಿ ಸಿಖ್ ಮತ್ತು ಭಾರತೀಯನು ಭಗತ್ ಸಿಂಗ್ ಬಗ್ಗೆ ಹೆಮ್ಮೆ ಪಡುತ್ತಾರೆ. ಸಿಮ್ರನ್​ಜಿತ್ ಸಿಂಗ್ ಮಾನ್ ಅವರ ಹೇಳಿಕೆ ಸಲ್ಲದು ಎಂದಿದ್ದಾರೆ.

  • Shameful and pitiful!

    Sangrur MP, Simranjeet Singh Mann, calling revolutionary freedom fighter Bhagat Singh a "terrorist" is disgraceful and disrespectful

    Punjabis are connected to the ideology of Bhagat Singh & we strongly condemn this irresponsible comment#ShaheedBhagatSingh https://t.co/EveKRBOn4q

    — AAP Punjab (@AAPPunjab) July 15, 2022 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.