ETV Bharat / bharat

ಕೇಜ್ರಿವಾಲ್ ಮಾದರಿ ಆಡಳಿತವನ್ನು ಪಂಜಾಬ್ ಜನ ಒಪ್ಪಿಕೊಂಡಿದ್ದಾರೆ.. ಮನೀಶ್ ಸಿಸೋಡಿಯಾ - ಪಂಜಾಬ್ ಚುನಾವಣೆಯಲ್ಲಿ ಅಕಾಲಿದಳ

Punjab Result 2022.. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮಾದರಿ ಆಡಳಿತಕ್ಕೆ ಪಂಜಾಬ್ ಅವಕಾಶ ನೀಡಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಮಹಿಳಾ ಸುರಕ್ಷತೆಯ ಮೇಲೆ ಅರವಿಂದ್ ಕೇಜ್ರಿವಾಲ್ ಸರ್ಕಾರ ಗಮನ ಹರಿಸುತ್ತದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

Punjab fuels AAP's national ambitions, Sisodia claims vote for Kejriwal model of governance
Punjab Result: ಕೇಜ್ರಿವಾಲ್ ಮಾದರಿ ಆಡಳಿತವನ್ನು ಪಂಜಾಬ್ ಜನ ಒಪ್ಪಿಕೊಂಡಿದ್ದಾರೆ.. ಮನೀಶ್ ಸಿಸೋಡಿಯಾ
author img

By

Published : Mar 10, 2022, 1:12 PM IST

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರ ಹಿಡಿಯಲು ಸಮೀಪದಲ್ಲಿದ್ದು, ಆಪ್ ಕಾರ್ಯಕರ್ತರು ಈಗಾಗಲೇ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮತ್ತು ಆಪ್ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಸಂತಸ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆಯನ್ನು ಶ್ಲಾಘಿಸಿದ ಮನೀಶ್ ಸಿಸೋಡಿಯಾ ಅರವಿಂದ್ ಕೇಜ್ರಿವಾಲ್ ಮಾದರಿಯ ಆಡಳಿತವನ್ನು ಪಂಜಾಬ್ ಒಪ್ಪಿಕೊಂಡಿದೆ ಎಂದು ಈ ಮೂಲಕ ಗೊತ್ತಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಮಾದರಿ ಆಡಳಿತಕ್ಕೆ ಪಂಜಾಬ್ ಅವಕಾಶ ನೀಡಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಮಹಿಳಾ ಸುರಕ್ಷತೆಯ ಮೇಲೆ ಅರವಿಂದ್ ಕೇಜ್ರಿವಾಲ್ ಸರ್ಕಾರ ಗಮನ ಹರಿಸುತ್ತದೆ. ಕೇಜ್ರಿವಾಲ್ ಅವರು ಬಿ ಆರ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಕನಸನ್ನು ನನಸಾಗಿಸಿದ್ದಾರೆ. ಇದು ಎಎಪಿಯ ಗೆಲುವಲ್ಲ, ಜನಸಾಮಾನ್ಯರ ಗೆಲುವು ಎಂದು ಸಿಸೋಡಿಯಾ ಹೇಳಿದ್ದಾರೆ.

ಇದನ್ನೂ ಓದಿ: Punjab Result: ಪಂಜಾಬ್​ನಲ್ಲಿ ಆಪ್​ಗೆ ಭಾರಿ ಮುನ್ನಡೆ.. ಮಾಜಿ ಸಿಎಂ ಕ್ಯಾ.​ ಅಮರೀಂದರ ಸಿಂಗ್​ಗೆ ಸೋಲು

ಇತರ ರಾಜ್ಯಗಳಲ್ಲಿ ಆಪ್ ಪಕ್ಷದ ಕಳಪೆ ಸಾಧನೆ ಕುರಿತ ಮಾತನಾಡಿದ ಸಿಸೋಡಿಯಾ ನಾವು ಗೋವಾ, ಉತ್ತರಾಖಂಡ ಮತ್ತ ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಆದರೆ ನಾವು ಹೆಚ್ಚಾಗಿ ಗಮನ ಹರಿಸಿದ್ದು, ಪಂಜಾಬ್​ನತ್ತ. ಉಳಿದ ರಾಜ್ಯಗಳ ಜನರೂ ನಮ್ಮ ಪಕ್ಷವನ್ನು ನಂಬಲು ಆರಂಭಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.