ETV Bharat / bharat

ಪಂಜಾಬ್​ನಲ್ಲಿ ಕೈ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ: ಎರಡು ಕ್ಷೇತ್ರಗಳಿಂದ ಸಿಎಂ ಚನ್ನಿ ಸ್ಪರ್ಧೆ, ಕೇಜ್ರಿವಾಲ್ ವ್ಯಂಗ್ಯ - ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ

ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಎಂಟು ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭದೌರ್ ಮತ್ತು ಚಮ್ಕೌರ್ ಸಾಹಿಬ್ ಎರಡು ಕ್ಷೇತ್ರಗಳಿಂದ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಕಣಕ್ಕಿಳಿಸಿದೆ.

ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ
ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ
author img

By

Published : Jan 31, 2022, 6:51 AM IST

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಗೆ ಎಂಟು ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಚರಣ್‌ ಜಿತ್‌ ಸಿಂಗ್‌ ಚನ್ನಿ ಅವರು ಭದೌರ್ ಮತ್ತು ಚಮ್ಕೌರ್ ಸಾಹಿಬ್ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಈಗಾಗಲೇ ನವಜೋತ್ ಸಿಧು ಜೊತೆಗಿನ ವೈಮನಸ್ಸಿನಿಂದಾಗಿ ಅಮರಿಂದರ್ ಸಿಂಗ್ ಕಾಂಗ್ರೆಸ್‌ ತೊರೆದಿದ್ದು, ಪಟಿಯಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್, ಅಮರಿಂದರ್ ಸಿಂಗ್ ವಿರುದ್ಧ ಪಟಿಯಾಲ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮೇಯರ್ ವಿಷ್ಣು ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಶರ್ಮಾ ಅವರು ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಿಕಟವರ್ತಿ ಎಂದು ಪರಿಗಣಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಪವನ್ ಕುಮಾರ್ ಬನ್ಸಾಲ್ ಅವರ ಪುತ್ರ ಮನೀಶ್ ಬನ್ಸಾಲ್ ಅವರನ್ನು ಬರ್ನಾಲಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಶಿರೋಮಣಿ ಅಕಾಲಿದಳದ ಸುಖಬೀರ್ ಸಿಂಗ್ ಬಾದಲ್ ವಿರುದ್ಧ ಜಲಾಬಾದ್ ವಿಧಾನಸಭಾ ಕ್ಷೇತ್ರದಿಂದ ಮೋಹನ್ ಸಿಂಗ್ ಫಲಿಯನ್ ವಾಲಾ ಅವರು ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ. ಖೇಮ್ ಕರಣ್‌ನಿಂದ ಸುಖ್​ಪಾಲ್ ಸಿಂಗ್ ಭುಲ್ಲರ್ ಮತ್ತು ಅಟ್ಟಾರಿ (ಎಸ್‌ಸಿ) ಕ್ಷೇತ್ರದಿಂದ ತಾರ್ಸೆಮ್ ಸಿಂಗ್ ಸಿಯಾಲಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಸತ್ವೀರ್ ಸಿಂಗ್ ಸೈನಿ ಬಲಿಚಿಕಿ ನವನ್‌ಶಹರ್‌ನಿಂದ ಸ್ಪರ್ಧಿಸಲಿದ್ದು, ಲುಧಿಯಾನ ದಕ್ಷಿಣದಿಂದ ಕಾಂಗ್ರೆಸ್ ಈಶ್ವರ್ ಜೋತ್ ಸಿಂಗ್ ಚೀಮಾ ಅವರನ್ನು ಕಣಕ್ಕಿಳಿಸಲಾಗಿದೆ.

ಅರವಿಂದ್ ಕೇಜ್ರಿವಾಲ್ ವ್ಯಂಗ್ಯ: ಕಾಂಗ್ರೆಸ್ ಪಟ್ಟಿ ಬಿಡುಗಡೆಯಾದ ನಂತರ AAP ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಚರಣ್ ಜಿತ್ ಸಿಂಗ್ ಚನ್ನಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ''ನಮ್ಮ ಸಮೀಕ್ಷೆ ಪ್ರಕಾರ ಚಮ್ಕೌರ್ ಸಾಹಿಬ್ ಪ್ರದೇಶದಿಂದ ಚನ್ನಿ ಸೋಲುತ್ತಾರೆ ಎಂದು ನಾನು ಹೇಳಿದ್ದೆ. ಹಾಗಾಗಿ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಇದರರ್ಥ ಸಮೀಕ್ಷೆ ನಿಜವೇ?" ಎಂದು ಟ್ವೀಟ್ ಮಾಡಿದ್ದಾರೆ.

  • मैंने कहा था कि हमारे सर्वे के मुताबिक़ चन्नी जी चमकौर साहिब से हार रहे हैं। आज कांग्रेस ने एलान किया है कि वो दो सीटों से चुनाव लड़ेंगे। इसका मतलब सर्वे सच है?

    — Arvind Kejriwal (@ArvindKejriwal) January 30, 2022 " class="align-text-top noRightClick twitterSection" data=" ">

ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.