ETV Bharat / bharat

ಪಂಜಾಬ್ ಕಾಂಗ್ರೆಸ್ ಜಟಾಪಟಿ: ಅಧ್ಯಕ್ಷ ಪಟ್ಟಕ್ಕಾಗಿ ಸಾಲು ಸಾಲು ನಾಯಕರ ಭೇಟಿಯಾದ ಸಿಧು - ಸಿಎಂ ಅಮರಿಂದರ್ ಸಿಂ

ಪಂಜಾಬ್‌ ಕಾಂಗ್ರೆಸ್​​ನಲ್ಲಿ ರಾಜಕೀಯ ಸಮರ ತಾರಕಕ್ಕೇರಿದ್ದು, ನಿನ್ನೆ ನವಜೋತ್ ಸಿಂಗ್ ಸಿಧು ಮತ್ತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು. ಇಂದೂ ಸಹ ಕಾಂಗ್ರೆಸ್ ನಾಯಕರ ಭೇಟಿಯಾಗುತ್ತಿದ್ದು, ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ.

punjab-congress-clash-navjot-singh-sidhu-meets-congress-leaders
ಅಧ್ಯಕ್ಷ ಪಟ್ಟಕ್ಕಾಗಿ ಸಾಲು ಸಾಲು ನಾಯಕರ ಭೇಟಿಯಾದ ಸಿಧು
author img

By

Published : Jul 17, 2021, 4:23 PM IST

ನವದೆಹಲಿ: ಪಂಜಾಬ್ ಕಾಂಗ್ರೆಸ್​ ದಳ್ಳುರಿ ಸದ್ಯ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ನಿನ್ನೆ ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದರು. ಈ ಭೇಟಿಯ ಬೆನ್ನಲ್ಲೆ ದೆಹಲಿ ಕಾಂಗ್ರೆಸ್ ನಾಯಕರು ಸಿಧು ಭೇಟಿಗೆ ತೆರಳುತ್ತಿದ್ದಾರೆ.

ಇದೀಗ ಪಂಜಾಬ್ ಕಾಂಗ್ರೆಸ್ ಘಟಕದ ಉಸ್ತುವಾರಿ ಹರೀಶ್ ರಾವತ್ ಚಂಡೀಗಢ ತಲುಪಿದ್ದು, ಸಿಎಂ ಅಮರಿಂದರ್ ಸಿಂಗ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.

ಅಮರಿಂದರ್​ ಸಿಂಗ್​ ಎಚ್ಚರಿಕೆ

ಅಲ್ಲದೇ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಜಟಾಪಟಿ ಕುರಿತಂತೆ ಮಾಹಿತಿ ನೀಡಲಿದ್ದಾರೆ. ಮೂಲಗಳ ಪ್ರಕಾರ ಸಿಎಂ ಅಮರಿಂದರ್ ಸಿಂಗ್ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ಸಿಧು ಅವರಿಗೆ ಪಕ್ಷದ ಉಸ್ತುವಾರಿ ಜವಾಬ್ದಾರಿ ವಹಿಸಿದರೆ ಪಕ್ಷ ವಿಭಜನೆಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಉನ್ನತ ಹುದ್ದೆ ನೀಡಿದರೆ ಮುಂಬರುವ ಚುನಾವಣೆವಣೆಯಿಂದ ಹೊರಗುಳಿಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮೊದಲು ಸಿಧು ಪಿಪಿಸಿಸಿ ಅಧ್ಯಕ್ಷ ಸುನಿಲ್ ಜಖರ್ ಅವರ ಭೇಟಿ ಮಾಡಿ ಪಕ್ಷದ ಅಧ್ಯಕ್ಷ ಹುದ್ದೆಯ ಕುರಿತು ಚರ್ಚೆ ನಡೆಸಿದ್ದರು. ಈ ಚರ್ಚೆಯ ಬಳಿಕ ಪಂಜಾಬ್​ ಕಾಂಗ್ರೆಸ್​​ನಲ್ಲಿ ಇನ್ನಷ್ಟು ಬಿರುಕು ಹೆಚ್ಚಾಗಿತ್ತು. ಅಲ್ಲದೆ ಸಚಿವ ಸುಖೀಂದರ್ ರಾಂಧವ ಹಾಗೂ ಬಲ್ಬೀರ್ ಸಿಂಗ್ ಅವರನ್ನು ಸಿಧು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಮಾತುಕತೆಗಳು ಮುಕ್ತಾಯಗೊಂಡ ಬಳಿಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡಲು ಹರೀಶ್ ರಾವತ್ ಆಗಮಿಸಿದ್ದರು.

ಓದಿ: ಪಕ್ಷ ಬಿಡುವವರು ಬಿಡಬಹುದು..'ನಿರ್ಭೀತ' ನಾಯಕರು ನಮ್ಮ ಪಕ್ಷಕ್ಕೆ ಬರಬಹುದು: ರಾಹುಲ್ ಗಾಂಧಿ ಆಫರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.