ETV Bharat / bharat

ಮದುವೆ ಮಂಟಪಗಳೆದುರು ಪೊಲೀಸ್ ಚೆಕ್‌ಪೋಸ್ಟ್; ಕುಡಿದು ವಾಹನ ಹತ್ತಿದ್ರೆ ಇಲ್ಲಿ ದಂಡ! - ಕುಡಿದು ವಾಹನ ಹತ್ತಿದರೆ ದಂಡ

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಆರು ತಿಂಗಳ ಜೈಲು ಶಿಕ್ಷೆ ಅಥವಾ 10,000 ರೂ. ದಂಡ ಅಥವಾ ಎರಡೂ ವಿಧಿಸಬಹುದು. ಎರಡನೇ ಬಾರಿ ಸಿಕ್ಕಿಬಿದ್ದರೆ 2 ವರ್ಷ ಜೈಲು ಅಥವಾ 15,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು. ಇದು ಆಮ್‌ ಪಾರ್ಟಿ ನೇತೃತ್ವದ ಪಂಜಾಬ್ ಸರ್ಕಾರದ ಕಟ್ಟುನಿಟ್ಟಿನ ಕ್ರಮ.

ಮದುವೆ ಮಂಟಪಗಳೆದುರು ಪೊಲೀಸ್ ಚೆಕ್ ಪೋಸ್ಟ್; ಕುಡಿದು ವಾಹನ ಹತ್ತಿದರೆ ದಂಡ ಖಚಿತ!
police-check-post-in-front-of-marriage-halls-be-careful-if-you-get-into-a-drunk-vehicle
author img

By

Published : Dec 7, 2022, 3:23 PM IST

ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ರಸ್ತೆ ಅಪಘಾತಗಳನ್ನು ತಡೆಯಲು ಪಂಜಾಬ್ ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. ಇದರ ಅಂಗವಾಗಿ ಪಂಜಾಬ್‌ನ ಎಲ್ಲ ಕಲ್ಯಾಣ ಮಂಟಪಗಳ ಹೊರಗೆ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಗೃಹ ಇಲಾಖೆಗೆ ಆದೇಶಿಸಿದ್ದಾರೆ. ಕುಡಿದು ವಾಹನ ಚಲಾಯಿಸುವವರನ್ನು ಅಲ್ಲಿಯೇ ನಿಲ್ಲಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ. ಸ್ಥಳದಲ್ಲೇ ಅಲ್ಕೊಹಾಲ್ ಮೀಟರ್​ನಿಂದ ಉಸಿರಾಟದ ಪರೀಕ್ಷೆ ನಡೆಸಲಾಗುತ್ತದೆ.

ಪಂಜಾಬ್ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ರಸ್ತೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಸಿದ್ಧತೆಗಳನ್ನು ವೇಗಗೊಳಿಸುವಂತೆ ಡಿಜಿಪಿ ಪಂಜಾಬ್ ಗೌರವ್ ಯಾದವ್ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಇದರ ಪರಿಣಾಮವಾಗಿ ಮದುವೆಗೆ ಬರುವ ಅತಿಥಿಗಳ ವಾಹನಗಳನ್ನು ಪರಿಶೀಲಿಸುವ ಮತ್ತು ಅಲ್ಕೊ ಸೆನ್ಸರ್ ಕಿಟ್‌ಗಳೊಂದಿಗೆ ಪರೀಕ್ಷಿಸುವ ವ್ಯವಸ್ಥೆ ಈಗ ಪ್ರತಿ ಕಲ್ಯಾಣ ಮಂಟಪಗಳ ಮುಂದೆ ಕಾಣಿಸುತ್ತಿದೆ.

ಹಿಂದಿನ ಸರ್ಕಾರಗಳ ಕ್ರಮ: ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಆರು ತಿಂಗಳ ಜೈಲು ಶಿಕ್ಷೆ ಅಥವಾ 10,000 ರೂ. ದಂಡ ಅಥವಾ ಎರಡೂ ವಿಧಿಸಬಹುದು. ಆದರೆ ಎರಡನೇ ಬಾರಿ ಸಿಕ್ಕಿಬಿದ್ದರೆ 2 ವರ್ಷ ಜೈಲು ಶಿಕ್ಷೆ ಅಥವಾ 15,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು. ಆದರೆ ಪಂಜಾಬ್‌ನಲ್ಲಿ ಮೋಟಾರು ವಾಹನ ಕಾಯಿದೆ-2019 ಅನ್ನು ಜಾರಿಗೊಳಿಸುವ ಮೂಲಕ, ಹಿಂದಿನ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರವು ಡ್ರಂಕ್ ಅಂಡ್ ಡ್ರೈವ್‌ಗೆ ದಂಡ ವಿಧಿಸುವ ಕಾನೂನನ್ನು ತೆಗೆದುಹಾಕಿತ್ತು.

ಕೇಂದ್ರದ ಕಾನೂನು ಅನ್ವಯಿಸಲ್ಲ: ಈಗ ಕುಡಿದು ಗಾಡಿ ಚಲಾಯಿಸುವುದಕ್ಕೆ ದಂಡ ವಿಧಿಸಲು ಪಂಜಾಬ್ ಕಾಂಗ್ರೆಸ್ ಸರ್ಕಾರ ಹೊಸ ಕಾನೂನು ಜಾರಿ ಮಾಡಿತ್ತು. ಅದರ ಅಡಿಯಲ್ಲಿ ಮಾನಸಿಕ ಅಥವಾ ದೈಹಿಕವಾಗಿ ಅಸಮರ್ಥ ಸ್ಥಿತಿಯಲ್ಲಿ ವಾಹನ ಚಲಾಯಿಸಿದರೆ 1,000 ರೂ. ದಂಡ ವಿಧಿಸಲಾಗುತ್ತದೆ. ಆದರೆ ಡ್ರಿಂಕ್ ಅಂಡ್ ಡ್ರೈವ್ ಕಾನೂನಿನ ಅಡಿಯಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ದಂಡದ ಮೊತ್ತವು ಪಂಜಾಬ್‌ನಲ್ಲಿ ಅನ್ವಯಿಸುವುದಿಲ್ಲ.

ಇದನ್ನೂ ಓದಿ: ಮದುವೆ ನಡೆಯುತ್ತಿದ್ದಾಗಲೇ ವರ ಮದ್ಯಪಾನ.. ಅದೇ ಮಂಟಪದಲ್ಲಿ ಬೇರೆಯವನೊಂದಿಗೆ ಸಪ್ತಪದಿ ತುಳಿದ ವಧು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.