ETV Bharat / bharat

ನಿಮ್ಮ ಮಗನನ್ನು ನಂಬಿ ಮತ ಹಾಕಿದ್ದಕ್ಕೆ ಧನ್ಯವಾದ.. ಸಂಸದ ಸ್ಥಾನಕ್ಕೆ ಮಾನ್​ ರಾಜೀನಾಮೆ - ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್​

ಪಂಜಾಬ್​ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್​​ ತಮ್ಮ ಲೋಕಸಭೆ ಸದಸ್ಯ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದು, ನಿಮ್ಮ ಮಗನನ್ನು ನಂಬಿ ಮತ ಹಾಕಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

Bhagwant Mann resigns as Lok Sabha MP
Bhagwant Mann resigns as Lok Sabha MP
author img

By

Published : Mar 14, 2022, 5:29 PM IST

ನವದೆಹಲಿ: ಪಂಜಾಬ್​ನ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್​​ ತಮ್ಮ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಸಭಾಪತಿ ಓಂ ಬಿರ್ಲಾ ಅವರನ್ನ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಕಳೆದ ಎರಡು ಅವಧಿಗೆ ಸಂಗ್ರೂರ್​​​ ಸಂಸದೀಯ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಭಗವಂತ್ ಮಾನ್​, ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಧುರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಮಾರ್ಚ್​​ 16ರಂದು ಪಂಜಾಬ್​ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಲಿದ್ದು, ಹೀಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

  • आज दिल्ली जाकर मैं संगरूर के MP पद से इस्तीफ़ा दे रहा हूँ। संगरूर के लोगों ने इतने साल मुझे बहुत प्यार दिया, इस लिए बहुत धन्यवाद। अब पूरे पंजाब की सेवा करने का मौका मिला है, संगरूर के लोगों से वादा करता हूँ कि कुछ ही महीनों में उनकी आवाज़ लोक सभा में फिर से गूंजेगी।

    — Bhagwant Mann (@BhagwantMann) March 14, 2022 " class="align-text-top noRightClick twitterSection" data=" ">

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ನಾನು ಸದನವನ್ನ ಕಳೆದುಕೊಳ್ಳಲಿದ್ದೇನೆ. ಪಂಜಾಬ್​​​ನ ಜನತೆ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಆದರೆ, ಶೀಘ್ರದಲ್ಲೇ ಸದನದಲ್ಲಿ ದಿಟ್ಟ ಧ್ವನಿ ಪ್ರತಿಧ್ವನಿಸಲಿದೆ ಎಂಬ ಭರವಸೆಯನ್ನ ಸಂಗ್ರೂರ್​ ಜನರಿಗೆ ನೀಡುತ್ತೇನೆ. ನಿಮ್ಮ ಮಗನನ್ನು ನಂಬಿ ಮತ ಹಾಕಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

ಇದನ್ನೂ ಓದಿರಿ: ಏರ್​ಪೋರ್ಟ್​ಗಳಲ್ಲಿ ಸಿಖ್ಖರು ಕಿರ್ಪಾನ್​ ಕೊಂಡೊಯ್ಯಲು ಅವಕಾಶ

117 ಕ್ಷೇತ್ರಗಳ ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ 92 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಸನ್ನದ್ಧವಾಗಿದ್ದು, ಮಾರ್ಚ್​​ 16ರಂದು ಪ್ರಮಾಣವಚನ ಕಾರ್ಯಕ್ರಮ ಜರುಗಲಿದೆ. ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಅವರ ಹುಟ್ಟೂರು ಖಟಕಡಕಲಾನ್​ನಲ್ಲಿ ಪಂಜಾಬ್​ನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್​ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.