ಪುಣೆ: ಕೊಂಕಣದ ರಾಜ ಎಂದೇ ಜನಪ್ರಿಯವಾಗಿರುವ ರತ್ನಗಿರಿ ಹಾಪೂಸ್ ಅಥವಾ ಆಲ್ಫೋನ್ಸೋ ಮಾವಿನ ಹಣ್ಣಿನ ಪೆಟ್ಟಿಗೆಗಳ ಮೊದಲ ಕಂತು ಪುಣೆ ಮಾರುಕಟ್ಟೆಗೆ ಬಂದಿದೆ.
ನಾಲ್ಕು ಡಜನ್ ಹಪಸ್ ಮಾವಿನ ಹಣ್ಣುಗಳ ಮೊದಲ ಬಾಕ್ಸ್ ಅನ್ನು ಮೊದಲ ಬಾರಿಗೆ ಇಲ್ಲಿನ ಹಣ್ಣು ಮಾರಾಟಗಾರರಾದ ದೇಸಾಯಿ ಸಹೋದರರು ಪಡೆದಿದ್ದಾರೆ. ಕಳೆದೆರಡು ವರ್ಷಗಳಿಂದ ಹಣ್ಣುಗಳ ರಾಜನಾಗಿರುವ ಇವನ್ನು ಕೊರೊನಾ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತಂದಿರಲಿಲ್ಲ. ಈ ಮಾವಿಗೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ಅಂಗಡಿ ಮಾಲೀಕ ಮಂದಾರ ದೇಸಾಯಿ.
ಇದನ್ನೂ ಓದಿ: 'ಅಶ್ವತ್ಥ್ ನಾರಾಯಣ್‌ಗೂ ರಾಮನಗರಕ್ಕೂ ಏನ್ ಸಂಬಂಧ?, ಕುಮಾರಸ್ವಾಮಿಯಾದ್ರೂ ಒಂದಷ್ಟು ಕಟ್ಟಡ ಕಟ್ಟಿದ್ದಾರೆ'
ಈ ವರ್ಷ ಜನರಿಂದ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಜನರು ಈಗಾಗಲೇ ಮಾವಿನ ಹಣ್ಣಿನ ಬಗ್ಗೆ ಯೋಚಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಜನರು ಈ ರುಚಿಕಟ್ಟಾದ ಮಾವಿನಹಣ್ಣು ತಿನ್ನಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಈ ವರ್ಷ ಹೆಚ್ಚು ಬೇಡಿಕೆಯಿದೆ ಎನ್ನುತ್ತಾರೆ ದೇಸಾಯಿ.
ಈ ಹಣ್ಣಿನ ವಿಶೇಷತೆ ಏನು?
ಹಾಪೂಸ್ ಮಾವನ್ನು ಇಂಗ್ಲಿಷ್‌ನಲ್ಲಿ ಆಲ್ಫೋನ್ಸೋ ಮ್ಯಾಂಗೋ ಎಂದು ಕರೆಯಲಾಗುತ್ತದೆ. ಇದರ ತೂಕ 150 ರಿಂದ 300 ಗ್ರಾಂ. ಇರಲಿದೆ. ರುಚಿ ಮತ್ತು ಸುವಾಸನೆಯಲ್ಲಿ ಇದು ಇತರ ಮಾವಿನ ಹಣ್ಣುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಮಾವು ಹಣ್ಣಾಗಿ ಒಂದು ವಾರ ಕಳೆದರೂ ಕೆಡದಿರುವುದು ಇದರ ವೈಶಿಷ್ಟ್ಯ. ಇದರಿಂದಾಗಿ ರಫ್ತು ಮಾಡಲು ಹೆಚ್ಚಿನ ತೊಂದರೆ ಇಲ್ಲ. ಹೀಗಾಗಿಯೇ ಈ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ.