ETV Bharat / bharat

ಕೋವಿಡ್ ತಡೆಯಲು ಔಷಧೀಯ ಗುಣವುಳ್ಳ 3D ಮಾಸ್ಕ್​ ಆವಿಷ್ಕಾರ - ವೈರಸಿಡಲ್ ಮಾಸ್ಕ್ ಪ್ರಾಜೆಕ್ಟ್​

ಪುಣೆ ಮೂಲದ ಸ್ಟಾರ್ಟ್​ಅಪ್ ಕಂಪನಿಯೊಂದು 3ಡಿ (ಮೂರು ಆಯಾಮ) ಮಾಸ್ಕ್ ಅನ್ನು ಸಂಶೋಧನೆ ಮಾಡಿದ್ದು, ಕೊರೊನಾ ವೈರಸ್ ಹರಡದಂತೆ ತಡೆಯಲು ಇದು ಯಶಸ್ವಿಯಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Pune-based startup company brings 3D printed mask to beat Covid
ಕೋವಿಡ್ ತಡೆಯಲು ಔಷಧೀಯ ಗುಣವುಳ್ಳ 3D ಮಾಸ್ಕ್​ ಆವಿಷ್ಕಾರ
author img

By

Published : Jun 16, 2021, 7:14 AM IST

ಪುಣೆ(ಮಹಾರಾಷ್ಟ್ರ): ಕೋವಿಡ್ ತಡೆಯಲು ಅನೇಕ ಆವಿಷ್ಕಾರಗಳು ನಡೆಯುತ್ತಿವೆ. ತರಹೇವಾರಿ ಲಸಿಕೆಗಳು ಮಾರುಕಟ್ಟೆಗೆ ಬಂದಿರುವಂತೆ, ವಿವಿಧ ರೀತಿಯ ಮಾಸ್ಕ್​ಗಳೂ ಕೂಡಾ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾಗಿವೆ. ಈಗ ಸಂಪರ್ಕಕ್ಕೆ ಬಂದ ಕೋವಿಡ್​ ವೈರಸ್ ಕೆಲವೇ ಕ್ಷಣಗಳಲ್ಲಿ ನಿಷ್ಕ್ರಿಯಗೊಳಿಸುವ ಮಾಸ್ಕ್​ ಆವಿಷ್ಕಾರಗೊಂಡಿದೆ.

ಪುಣೆ ಮೂಲದ ಸ್ಟಾರ್ಟ್​ಅಪ್ ಕಂಪನಿಯೊಂದು 3ಡಿ (ಮೂರು ಆಯಾಮ) ಮಾಸ್ಕ್ ಸಂಶೋಧನೆ ಮಾಡಿದ್ದು, ಕೊರೊನಾ ವೈರಸ್ ಹರಡದಂತೆ ತಡೆಯಲು ಇದು ಬಹುಪಾಲು ಯಶಸ್ವಿಯಾಗುತ್ತದೆ ಎಂದು ಕಂಪನಿ ಹೇಳಿದೆ.

ಥಿನ್​ಸಿಆರ್​ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಈ ಮಾಸ್ಕ್ ಆವಿಷ್ಕರಿಸಿದೆ. ಮಾಸ್ಕ್‌ ಇದರ ಮೇಲಿನ 3ಡಿ ಪ್ರಿಂಟಿಂಗ್ ಮತ್ತು ಈ ಮಾಸ್ಕ್​ಗೆ ಬಳಸಿರುವ ಔಷಧೀಯ ಗುಣಗಳು ವೈರಸ್ ಸಂಪರ್ಕಕ್ಕೆ ಬಂದ ತಕ್ಷಣ ಕೊಲ್ಲಲ್ಪಡುತ್ತವೆ. ಇದಕ್ಕಾಗಿ ಮಾಸ್ಕ್​ನಲ್ಲಿ ವೈರಸೈಡ್ಸ್​ ಎಂಬ ಆ್ಯಂಟಿವೈರಲ್ ಸಂಯುಕ್ತವನ್ನು ಬಳಸಲಾಗುತ್ತದೆ.

ಮಾಸ್ಕ್ ಆವಿಷ್ಕಾರಕ್ಕೆ ಸರ್ಕಾರಿ ಅನುದಾನ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗವಾದ ಟೆಕ್ನಾಲಜಿ ಡೆವಲೆಪ್​ಮೆಂಟ್​ ಬೋರ್ಡ್ ಅನುದಾನ ನೀಡುವ ವೈರಸಿಡಲ್ ಮಾಸ್ಕ್ ಪ್ರಾಜೆಕ್ಟ್​ (Virucidal Mask project) ಅಡಿಯಲ್ಲಿ ಮಾಸ್ಕ್​ ತಯಾರು ಮಾಡಲಾಗಿದೆ. ಮೇ 2020ರಂದು ಈ ಯೋಜನೆಗೆ ಅನುದಾನ ನೀಡಲಾಗಿತ್ತು. ಈ ಯೋಜನೆಯ ಅಡಿಯಲ್ಲಿ 2020ರ ಜೂನ್ 8ರಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಇದನ್ನೂ ಓದಿ: ಗಂಗೆಯಲ್ಲಿ ತೇಲಿ ಬಂದ ಪೆಟ್ಟಿಗೆ.. ತೆರೆದು ನೋಡಿದಾಗ ಕಾದಿತ್ತು ಅಚ್ಚರಿ!

ಥಿನ್​ಸಿಆರ್​ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2016ರಲ್ಲಿ ಹುಟ್ಟುಹಾಕಲ್ಪಟ್ಟ ಸಂಸ್ಥೆಯಾಗಿದ್ದು, ಈಗಾಗಲೇ ಫ್ಯೂಸ್ಡ್​ ಡೆಪೋಸಿಷನ್ ಮಾಡೆಲಿಂಗ್ 3ಡಿ ಪ್ರಿಂಟರ್​​ಗಳನ್ನು ಈ ಕಂಪನಿ ಉತ್ಪಾದಿಸುತ್ತದೆ.

"ಝಾಂಬಾದ್, ಕೋವಿಡ್ ತಡೆಯುವಲ್ಲಿ ಮಾಸ್ಕ್ ಅತ್ಯಂತ ಮುಖ್ಯವಾದ ಸಾಧನ. ಈಗಾಗಲೇ ನಾವು ಹಲವು ರೀತಿಯ ಮಾಸ್ಕ್​ಗಳನ್ನು ಕಂಡುಹಿಡಿದಿದ್ದೇವೆ. ಆದರೆ ಕೋವಿಡ್ ತಡೆಯಲು ಪ್ರಬಲ ಮಾಸ್ಕ್ ಕೂಡಾ ಅವಶ್ಯಕತೆ ಇರುವ ಕಾರಣದಿಂದ 3ಡಿ ಮಾಸ್ಕ್ ಅನ್ನು ಅಭಿವೃದ್ಧಿಪಡಿಸಿದ್ದೇವೆ."

- ಡಾ. ಶೀತಲ್ ಕುಮಾರ್‌, ಸಂಸ್ಥಾಪಕ ನಿರ್ದೇಶಕ, ಥಿನ್​ಸಿಆರ್​ ಟೆಕ್ನಾಲಜೀಸ್ ಇಂಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.