ETV Bharat / bharat

ತಾಲಿಬಾನ್​ ದಾಳಿಗೆ​ ಪುಲಿಟ್ಜರ್ ಪುರಸ್ಕೃತ ಭಾರತದ ಫೋಟೋ ಜರ್ನಲಿಸ್ಟ್​ ಬಲಿ - Pulitzer Prize danish siddiqui

ಮುಂಬೈ ಮೂಲದ ಸಿದ್ದಿಕಿ 2007ರಲ್ಲಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಮೊದಲಿಗೆ ದೂರದರ್ಶನದಲ್ಲಿ ಸುದ್ದಿ ವರದಿಗಾರರಾಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು.

Pulitzer awardee Indian photojournalist killed in Afghanistan
ತಾಲಿಬಾನ್​ ದಾಳಿಯಲ್ಲಿ​ ಪುಲಿಟ್ಜರ್ ಪುರಸ್ಕೃತ ಭಾರತದ ಫೋಟೋ ಜರ್ನಲಿಸ್ಟ್​ ಡ್ಯಾನಿಶ್ ಸಿದ್ದಿಕಿ ಮೃತ
author img

By

Published : Jul 16, 2021, 3:41 PM IST

ನವದೆಹಲಿ: ತಾಲಿಬಾನ್ ಪಡೆಗಳು ಒಂದೊಂದಾಗಿ ಅಫ್ಘಾನಿಸ್ತಾನದ ಪ್ರದೇಶಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಿವೆ. ತಾಲಿಬಾನ್ ಮತ್ತು ಆಫ್ಘನ್ ಪಡೆಗಳ ನಡುವೆ ಗುಂಡಿನ ಚಕಮಕಿ ಸರ್ವೇಸಾಮಾನ್ಯವಾಗಿದ್ದು, ಈ ಸಂಘರ್ಷದಲ್ಲಿ ಪುಲಿಟ್ಜರ್ ಪುರಸ್ಕೃತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವನ್ನಪ್ಪಿದ್ದಾರೆ.

ರಾಯಿಟರ್ಸ್​​ನಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಭಾರತದ ಡ್ಯಾನಿಶ್ ಸಿದ್ದಿಕಿ ಕಂದಾಹಾರ್​​ನಲ್ಲಿ ಆಫ್ಘನ್ ಸೈನಿಕರು ಮತ್ತು ತಾಲಿಬಾನ್ ಪಡೆಗಳ ನಡುವಿನ ಸಂಘರ್ಷದ ವರದಿ ಮಾಡಲು ತೆರಳಿದ್ದರು. ಸ್ಪಿನ್ ಬೋಲ್ಡಾಕ್​ ಜಿಲ್ಲೆಯಲ್ಲಿ ನಡೆದ ತಾಲಿಬಾನಿಗಳ ದಾಳಿಯಲ್ಲಿ ಡ್ಯಾನಿಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸ್ನೇಹಿತ ಡ್ಯಾನಿಶ್ ಸಿದ್ದಿಕಿಯನ್ನು ಕಳೆದುಕೊಂಡಿರುವ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಅಫ್ಘನ್ ಭದ್ರತಾ ಪಡೆಗಳ ರಕ್ಷಣೆಯೊಂದಿಗೆ ಡ್ಯಾನಿಶ್ ತೆರಳಿದ್ದರು ಎಂದು ಅಫ್ಘಾನಿಸ್ತಾನದಲ್ಲಿರುವ ಭಾರತದ ರಾಯಭಾರಿ ಫರೀದ್ ಮಮುಂದಝೆ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಎರಡು ವಾರಗಳ ಹಿಂದೆ ಸಿದ್ದಿಕಿ ಕಾಬೂಲ್​​ಗೆ ಬಂದಾಗ ಆತನನ್ನು ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ.

  • Deeply disturbed by the sad news of the killing of a friend, Danish Seddiqi in Kandahar last night. The Indian Journalist & winner of Pulitzer Prize was embedded with Afghan security forces. I met him 2 weeks ago before his departure to Kabul. Condolences to his family & Reuters. pic.twitter.com/sGlsKHHein

    — Farid Mamundzay फरीद मामुन्दजई فرید ماموندزی (@FMamundzay) July 16, 2021 " class="align-text-top noRightClick twitterSection" data=" ">

ಮುಂಬೈ ಮೂಲದ ಸಿದ್ದಿಕಿ 2007ರಲ್ಲಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಮೊದಲಿಗೆ ದೂರದರ್ಶನದಲ್ಲಿ ಸುದ್ದಿ ವರದಿಗಾರರಾಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು.

ನಂತರ 2010ರಲ್ಲಿ ರಾಯಿಟರ್ಸ್‌ನೊಂದಿಗೆ ಇಂಟರ್ನ್‌ ಆಗಿ ಫೋಟೊ ಜರ್ನಲಿಸಂಗೆ ಸೇರ್ಪಡೆಯಾದರು. 2018ರಲ್ಲಿ, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಕುರಿತು ತೆಗೆದಿದ್ದ ಫೋಟೋಗಳಿಗಾಗಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದಿದ್ದರು.

ಇದನ್ನೂ ಓದಿ: ಮುಂಬೈ-ಥಾಣೆ ಹೆದ್ದಾರಿಯಲ್ಲಿ ಉರುಳಿಬಿದ್ದ ಟ್ರಕ್: 20 ಟನ್ ಟೊಮ್ಯಾಟೋ ರಸ್ತೆಯಲ್ಲಿ ಚೆಲ್ಲಾಪಿಲ್ಲಿ

2015ರಲ್ಲಿ ನಡೆದ ನೇಪಾಳ ಭೂಕಂಪ, 2016-17ರಲ್ಲಿ ನಡೆದ ಮೊಸುಲ್ ಕದನ, ಹಾಂಗ್ ಕಾಂಗ್‌ನಲ್ಲಿ 2019–2020ರ ಪ್ರತಿಭಟನೆ ಮತ್ತು 2020ರ ದೆಹಲಿ ಗಲಭೆಗಳನ್ನೂ ಕೂಡಾ ರಾಯಿಟರ್ಸ್​ ಸುದ್ದಿಗಾಗಿ ಕವರ್​​ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.