ನವದೆಹಲಿ: ಸಂಸತ್ತು ಇಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ರಾಜ್ಯಸಭೆಯ ಚೇರ್ಮನ್ ಅವರ ಅನುಪಸ್ಥಿತಿಯಲ್ಲಿ ಪ್ರಸಿದ್ಧ ಮಾಜಿ ಓಟಗಾರ್ತಿ ಹಾಗು ರಾಜ್ಯಸಭೆ ಸದಸ್ಯೆ ಪಿ. ಟಿ. ಉಷಾ ಅವರು ಕಲಾಪದ ಅಧ್ಯಕ್ಷತೆ ವಹಿಸಿದರು. ಸಭಾಪತಿ ಜಗದೀಪ್ ಧನಕರ್ ಅವರ ಅನುಪಸ್ಥಿತಿಯಲ್ಲಿ ಉಷಾ ಅವರು ಅಧ್ಯಕ್ಷರ ಆಸೀನವನ್ನು ಅಲಂಕರಿಸಿದ್ದರು.
ಚೇರ್ಮನ್ ಜಗದೀಪ್ ಧನಕರ್ ಅವರ ಅನುಪಸ್ಥಿತಿಯಲ್ಲಿ ಅವರು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಆದ್ರೆ ಎಂದಿನಂತೆ ಪ್ರತಿಪಕ್ಷಗಳ ಗಲಾಟೆಯಿಂದಾಗಿ ಗೊಂದಲದ ಗೂಡಾಗಿ ಕಂಡಿತು. ಒಲಿಂಪಿಯನ್ ಪಿಟಿ ಉಷಾ ಅವರು ಮಾಜಿ ಅನುಭವಿ ರಾಜಕಾರಣಿಯಾದ ಜಗದೀಪ್ ಧನಕರ್ ಅವರಂತೆ ಅಲ್ಲದಿದ್ದರೂ ಚರ್ಚೆಯನ್ನು ಅನಾಯಾಸವಾಗಿ ನಡೆಸಿಕೊಟ್ಟರು. ಸ್ವಲ್ಪ ಸಮಯದ ನಂತರ ಜಗದೀಪ್ ಧನಕರ್ ಮರಳಿದರು. ಚೇರ್ಮನ್ ಸ್ಥಾನದಲ್ಲಿ ಕುಳಿತ ಧನಕರ್ ಉಷಾ ಅವರನ್ನು ಹೊಗಳಿದರು. "ಈಗ ರಾಜ್ಯಸಭೆಯಲ್ಲಿ ಆನ್ ಮತ್ತು ಆಫ್ ಟ್ರ್ಯಾಕ್‌ನಲ್ಲಿ ಅವರ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ" ಎಂದು ಉಷಾ ಅವರು ಸಭೆ ನಡೆಸಿದ ಬಗ್ಗೆ ಹೊಗಳಿದರು.
ಈ ಹಿಂದೆ ರಾಜಕೀಯ ಸೇರುವ ಇಚ್ಛೆ ವ್ಯಕ್ತಪಡಿಸಿದ್ದ ಪಿಟಿ ಉಷಾ, 2016ರಲ್ಲಿ ಕೇರಳದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನಾಯಕರ ಪ್ರಚಾರದ ನಡುವೆ ಕೋಝಿಕ್ಕೋಡ್‌ನಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದರು.
ಸ್ವಲ್ಪ ಸಮಯದ ನಂತರ, ಅಂತಿಮವಾಗಿ ರಾಜಕೀಯಕ್ಕೆ ಸೇರಲು ಒಪ್ಪಿಕೊಂಡ ಅವರನ್ನು ಬಿಜೆಪಿ ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಿತು. ಉಷಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಸ್ವಾಗತಿಸಿದರು. ಪ್ರಧಾನಿ ಅವರು ಟ್ವೀಟ್ ಮೂಲಕ ಉಷಾ ಅವರ ನಾಮ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದ್ದರು. "ಪಿಟಿ ಉಷಾ ಅವರು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಅವರ ಸಾಧನೆಗಳು ವ್ಯಾಪಕವಾಗಿ ತಿಳಿದಿವೆ. ಹಾಗೇ ಕಳೆದ ಹಲವಾರು ವರ್ಷಗಳಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸವು ಅಷ್ಟೇ ಶ್ಲಾಘನೀಯವಾಗಿದೆ. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಅವರಿಗೆ ಅಭಿನಂದನೆಗಳು. @PTUshaOfficial," ಎಂದು ಪ್ರಧಾನಿ ಮೋದಿ ಅಂದು ಟ್ವೀಟ್ ಶುಭ ಕೋರಿದ್ದರು.
ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸದಸ್ಯೆಯಾಗಿ ಉಷಾ ಅವರು ಫೆಬ್ರವರಿ 8 ರಂದು ಆಯ್ಕೆ ಆಗಿದ್ದರು ಮತ್ತು ಉಪರಾಷ್ಟ್ರಪತಿಗಳ ಅನುಪಸ್ಥಿತಿಯಲ್ಲಿ ಪ್ರಸಿದ್ಧ ಮಾಜಿ ಓಟಗಾರ್ತಿ ಹಾಗು ರಾಜ್ಯಸಭೆ ಸದಸ್ಯೆ ಪಿ.ಟಿ. ಉಷಾ ಕಲಾಪದ ಅಧ್ಯಕ್ಷತೆ ವಹಿಸಿದ್ದರು. ಅಂದು ಅವರು ಸಂಸತ್ತಿನ ಸದಸ್ಯರ ಗದ್ದಲದ ನಡುವೆ ಕೆಲಹೊತ್ತು ಚೇರ್ಮನ್ ಸ್ಥಾನದಲ್ಲಿ ಕುಳಿತಿದ್ದರು. ಅಧ್ಯಕ್ಷ ಜಗದೀಪ್ ಧನಕರ್ ಅವರು ಇತ್ತೀಚೆಗೆ ಉಪಾಧ್ಯಕ್ಷರ ಸಮಿತಿಗೆ ಉಷಾ ಅವರನ್ನು ಆಯ್ಕೆ ಮಾಡಿದರು. ಇದರಿಂದ ಅವರ ಅನುಪಸ್ಥಿತಿಯಲ್ಲಿ ಇಂದು ಮತ್ತೆ ಉಷಾ ಸದನವನ್ನು ಮುನ್ನಡೆಸಿದರು.