ETV Bharat / bharat

ಶಿಷ್ಟಾಚಾರ ಸೌಲಭ್ಯ ದುರುಪಯೋಗ ಮಾಡಿಕೊಳ್ಳಬೇಡಿ; ಹೈಕೋರ್ಟ್​ ನ್ಯಾಯಮೂರ್ತಿಗಳಿಗೆ ಸಿಜೆಐ ಪತ್ರ

ನ್ಯಾಯಾಧೀಶರು ತಮಗೆ ನೀಡಲಾದ ಪ್ರೊಟೊಕಾಲ್ ಸೌಲಭ್ಯಗಳನ್ನು ತಮ್ಮ ಅಧಿಕಾರದ ಅಭಿವ್ಯಕ್ತಿಯಾಗಿ ಬಳಸಕೂಡದು ಎಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.

Protocol facilities for judges must not be misused:

author img

By

Published : Jul 21, 2023, 12:21 PM IST

ನವದೆಹಲಿ : ನ್ಯಾಯಾಧೀಶರಿಗೆ ನೀಡಲಾಗಿರುವ ಶಿಷ್ಟಾಚಾರ (Protocol) ಸೌಲಭ್ಯಗಳನ್ನು ನ್ಯಾಯಾಧೀಶರು ತಮ್ಮ "ಅಧಿಕಾರ ಅಥವಾ ಅಧಿಕಾರದ ಅಭಿವ್ಯಕ್ತಿಯಾಗಿ" ಬಳಸಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಅವರು ದೇಶದ ಎಲ್ಲ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಇತ್ತೀಚೆಗೆ ತಮ್ಮ ಪತ್ನಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಕೆಲ ಅನಾನುಕೂಲತೆಗಳನ್ನು ಎದುರಿಸಿದ್ದರು. ತಮಗಾದ ಅನಾನುಕೂಲತೆಗಳ ಬಗ್ಗೆ ವಿವರಣೆ ನೀಡುವಂತೆ ಆ ನ್ಯಾಯಾಧೀಶರು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಲಹಾಬಾದ್ ಉಚ್ಚನ್ಯಾಯಾಲಯದ ನ್ಯಾಯಾಧೀಶರ ಈ ಕ್ರಮಕ್ಕೆ ನ್ಯಾಯಮೂರ್ತಿ ಚಂದ್ರಚೂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗದೊಳಗೆ ಆತ್ಮಾವಲೋಕನ ಮತ್ತು ಸಮಾಲೋಚನೆ ಅಗತ್ಯ ಎಂದು ಜುಲೈ 19 ರ ಪತ್ರದಲ್ಲಿ ಉಲ್ಲೇಖಿಸಿರುವ ಸಿಜೆಐ, ಹೈಕೋರ್ಟ್ ನ್ಯಾಯಾಧೀಶರು ರೈಲ್ವೆ ಸಿಬ್ಬಂದಿಯ ಮೇಲೆ ಶಿಸ್ತು ಕ್ರಮ ಜರುಗಿಸುವ ಅಧಿಕಾರವನ್ನು ಹೊಂದಿಲ್ಲ ಮತ್ತು ಆದ್ದರಿಂದ, ಹೈಕೋರ್ಟ್‌ನ ಅಧಿಕಾರಿಯೊಬ್ಬರು ವಿವರಣೆಯನ್ನು ಕೇಳುವ ಯಾವುದೇ ಸಂದರ್ಭ ಎದುರಾಗಿಲ್ಲ ಎಂದು ತಿಳಿಸಿದ್ದಾರೆ.

ಉತ್ತರ ಮಧ್ಯ ರೈಲ್ವೇಯ ಜನರಲ್ ಮ್ಯಾನೇಜರ್‌ಗೆ ಹೈಕೋರ್ಟ್‌ನ ರಿಜಿಸ್ಟ್ರಾರ್ (ಪ್ರೋಟೋಕಾಲ್) ಕಳುಹಿಸಿರುವ ಜುಲೈ 14 ರ ಪತ್ರವು ನ್ಯಾಯಾಂಗದ ಒಳಗೆ ಮತ್ತು ಹೊರಗೆ ಸಮರ್ಥನೀಯ ಕಳವಳಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ಸಿಜೆಐ ಹೇಳಿದ್ದಾರೆ.

"ನ್ಯಾಯಾಧೀಶರಿಗಾಗಿ ರೂಪಿಸಲಾದ ಪ್ರೋಟೋಕಾಲ್ ಸೌಲಭ್ಯಗಳನ್ನು ಸಮಾಜದಿಂದ ಪ್ರತ್ಯೇಕಿಸುವ ಸವಲತ್ತುಗಳಿಗಾಗಿ ಹಕ್ಕು ಪ್ರತಿಪಾದಿಸಲು ಅಥವಾ ಅಧಿಕಾರ ಅಥವಾ ಅಧಿಕಾರದ ಅಭಿವ್ಯಕ್ತಿಯಾಗಿ ಬಳಸಬಾರದು. ಪೀಠದ ಮೇಲೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ನ್ಯಾಯಾಂಗವು ತನ್ನ ಅಧಿಕಾರವನ್ನು ಬುದ್ಧಿವಂತಿಕೆಯಿಂದ ಬಳಸಿದಲ್ಲಿ ನ್ಯಾಯಾಂಗದ ವಿಶ್ವಾಸಾರ್ಹತೆ, ನ್ಯಾಯಸಮ್ಮತತೆ ಮತ್ತು ನ್ಯಾಯಾಧೀಶರಲ್ಲಿ ಸಮಾಜ ಹೊಂದಿರುವ ವಿಶ್ವಾಸವನ್ನು ಉಳಿಸಿಕೊಳ್ಳಬಹುದು” ಎಂದು ಭಾರತದ ಮುಖ್ಯ ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ.

ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಗೌತಮ್ ಚೌಧರಿ ಅವರು ಜುಲೈ 8 ರಂದು ಪುರುಷೋತ್ತಮ್ ಎಕ್ಸ್‌ಪ್ರೆಸ್‌ನಲ್ಲಿ ನವದೆಹಲಿಯಿಂದ ಪ್ರಯಾಗ್‌ರಾಜ್‌ಗೆ ಪ್ರಥಮ ದರ್ಜೆ ಎಸಿ ಕೋಚ್‌ನಲ್ಲಿ ಪ್ರಯಾಣಿಸಿದ್ದರು. ಇತ್ತೀಚಿನ ತಮ್ಮ ಪ್ರಯಾಣದ ಸಮಯದಲ್ಲಿ ಅವರು ಎದುರಿಸಿದ ಅನಾನುಕೂಲತೆಗಳನ್ನು ಉಲ್ಲೇಖಿಸಿ, ಹೈಕೋರ್ಟ್‌ನ ರಿಜಿಸ್ಟ್ರಾರ್ (ಪ್ರೋಟೋಕಾಲ್) ರೈಲ್ವೆ ಅಧಿಕಾರಿಗಳಿಂದ ವಿವರಣೆಯನ್ನು ಕೋರಿದ್ದರು.

ರೈಲು ಮೂರು ಗಂಟೆಗೂ ಹೆಚ್ಚು ತಡವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ನ್ಯಾಯಮೂರ್ತಿ ಚೌಧರಿ ಅವರ ಅಗತ್ಯತೆಗಳನ್ನು ಪೂರೈಸಲು ಯಾವುದೇ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಕೋಚ್‌ನಲ್ಲಿ ಇರಲಿಲ್ಲ ಎಂದು ರಿಜಿಸ್ಟ್ರಾರ್‌ ಅವರು ರೈಲ್ವೆ ಇಲಾಖೆಗೆ ಬರೆದಿದ್ದ ಸಂವಹನದಲ್ಲಿ ತಿಳಿಸಲಾಗಿತ್ತು. ಅಲ್ಲದೆ, ಯಾವುದೇ ಪ್ಯಾಂಟ್ರಿ ಉದ್ಯೋಗಿಗಳು ಕೂಡ ನ್ಯಾಯಾಧೀಶರಿಗೆ ಉಪಹಾರ ನೀಡಲಿಲ್ಲ ಮತ್ತು ಪ್ಯಾಂಟ್ರಿ ಕಾರ್ ಮ್ಯಾನೇಜರ್‌ಗೆ ಕರೆ ಮಾಡಿದರೂ ಉತ್ತರಿಸಲಿಲ್ಲ ಎಂದು ರಿಜಿಸ್ಟ್ರಾರ್ ದೂರಿದ್ದರು.

“ಮೇಲೆ ಹೇಳಿದ ಘಟನೆಯು ನ್ಯಾಯಮೂರ್ತಿಗಳಿಗೆ ತೀವ್ರ ಅನಾನುಕೂಲತೆ ಮತ್ತು ಅಸಮಾಧಾನ ಉಂಟುಮಾಡಿತ್ತು. ಈ ನಿಟ್ಟಿನಲ್ಲಿ, ನ್ಯಾಯಾಧೀಶರು ರೈಲ್ವೆಯ ತಪ್ಪಿತಸ್ಥ ಅಧಿಕಾರಿಗಳು, ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಮತ್ತು ಪ್ಯಾಂಟ್ರಿ ಕಾರ್ ಮ್ಯಾನೇಜರ್‌ನ ನಡತೆ ಮತ್ತು ಕರ್ತವ್ಯ ಲೋಪಗಳಿಂದ ತಮ್ಮ ಸ್ಥಾನಕ್ಕೆ ಉಂಟಾದ ಅನಾನುಕೂಲತೆಗಳ ಬಗ್ಗೆ ವಿವರಣೆಯನ್ನು ಕೋರಬಹುದು ಎಂದು ತಿಳಿಸಿದ್ದಾರೆ” ಎಂದು ರೈಲ್ವೇ ಇಲಾಖೆಗೆ ರಿಜಿಸ್ಟ್ರಾರ್‌ ಬರೆದಿದ್ದರು.

ಇದನ್ನೂ ಓದಿ : IT return ಫೈಲಿಂಗ್​ಗೆ ಜುಲೈ 31ರ ಗಡುವು; ಈ ಬಾರಿ ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.