ETV Bharat / bharat

ವೈದ್ಯ ವೃತ್ತಿಪರರಿಗೆ ರಕ್ಷಣೆ: ಕೇರಳ ಆಸ್ಪತ್ರೆ ಸಂರಕ್ಷಣಾ ಕಾಯಿದೆ ತಿದ್ದುಪಡಿಗೆ ಅನುಮೋದನೆ

ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ರಕ್ಷಣೆಗಾಗಿ ಕೇರಳ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಈ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

Kerala Comprehensive Hospital Protection Act, Cabinet approved Ordinance

author img

By

Published : May 17, 2023, 2:24 PM IST

ತಿರುವನಂತಪುರಂ (ಕೇರಳ) : ರಾಜ್ಯದ ಎಲ್ಲ ವೈದ್ಯಕೀಯ ವೃತ್ತಿಪರರನ್ನು ಎಲ್ಲಾ ರೀತಿಯ ದೈಹಿಕ ಮತ್ತು ಮೌಖಿಕ ದಾಳಿಗಳಿಂದ ರಕ್ಷಿಸುವ ದೃಷ್ಟಿಯಿಂದ ಕೇರಳ ಸಚಿವ ಸಂಪುಟವು ಆಸ್ಪತ್ರೆ ಸಂರಕ್ಷಣಾ ಕಾಯಿದೆ (Kerala Comprehensive Hospital Protection Act) ಸುಗ್ರೀವಾಜ್ಞೆಗೆ ಇಂದು (ಬುಧವಾರ) ಅನುಮೋದನೆ ನೀಡಿದೆ. ಪ್ರತಿವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿತವಾಗಿರುವ ಸುಗ್ರೀವಾಜ್ಞೆಯನ್ನು ಒಪ್ಪಿಗೆಗಾಗಿ ಶೀಘ್ರದಲ್ಲೇ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕಳುಹಿಸುವ ಸಾಧ್ಯತೆಯಿದೆ.

ವಂದನಾ ದಾಸ್ ಅವರು ಮೃತಪಟ್ಟು ಒಂದು ವಾರದ ನಂತರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇರಳ ಕ್ಯಾಬಿನೆಟ್ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಗಳಿಗೆ ಕಠಿಣ ಶಿಕ್ಷೆಯನ್ನು ಪ್ರಸ್ತಾಪಿಸುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ. ಕೇರಳ ಹೆಲ್ತ್‌ಕೇರ್ ಸೇವಾ ವ್ಯಕ್ತಿಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳು, (ಹಿಂಸಾಚಾರ ತಡೆಗಟ್ಟುವಿಕೆ ಮತ್ತು ಆಸ್ತಿಗೆ ಹಾನಿ) ಕಾಯಿದೆ 2012 ಅನ್ನು ತಿದ್ದುಪಡಿ ಮಾಡಲು ಸುಗ್ರೀವಾಜ್ಞೆಯನ್ನು ಪ್ರಸ್ತಾಪಿಸಲಾಗಿದೆ.

ಮೇ 10 ರಂದು ಕೊಟ್ಟಾರಕ್ಕರದ ತಾಲೂಕು ಆಸ್ಪತ್ರೆಯ ಹೌಸ್ ಸರ್ಜನ್ ಆಗಿದ್ದ ಡಾ. ವಂದನಾ ದಾಸ್ ಅವರನ್ನು ಚಿಕಿತ್ಸೆಗೆ ಬಂದಿದ್ದ ರೋಗಿಯೊಬ್ಬ ಇರಿದು ಕೊಂದು ಹಾಕಿದ್ದ. ಈ ಘಟನೆಯ ನಂತರ ಕೇರಳದಲ್ಲಿ ಆರೋಗ್ಯ ಕಾರ್ಯಕರ್ತರು ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದರು. ಆರೋಗ್ಯ ವಲಯದಲ್ಲಿ ಕೆಲಸ ಮಾಡುತ್ತಿರುವವರ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಈ ಕೂಡಲೇ ತಡೆಗಟ್ಟುವಂತೆ ಸರ್ಕಾರಕ್ಕೆ ಅವರು ಒತ್ತಾಯಿಸಿದ್ದರು. ಭಾರತೀಯ ವೈದ್ಯಕೀಯ ಸಂಘ ಮತ್ತು ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (ಕೆಜಿಎಂಒಎ) ನಡೆಸಿದ ಮುಷ್ಕರದ ನಂತರ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ತರಲು ನಿರ್ಧರಿಸಿತ್ತು.

ತಿದ್ದುಪಡಿಯ ಪ್ರಕಾರ ವೈದ್ಯಕೀಯ ವೃತ್ತಿಪರರು, ದಾದಿಯರು, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿ, ಅರೆವೈದ್ಯಕೀಯ ವಿದ್ಯಾರ್ಥಿಗಳು, ಭದ್ರತಾ ಸಿಬ್ಬಂದಿ, ವ್ಯವಸ್ಥಾಪಕ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು ಮತ್ತು ಆಸ್ಪತ್ರೆಗಳಲ್ಲಿನ ಸಹಾಯಕರು ಆರೋಗ್ಯ ಸೇವಾ ವ್ಯಕ್ತಿಗಳ ವ್ಯಾಖ್ಯಾನದ ಅಡಿಯಲ್ಲಿ ಬರುತ್ತಾರೆ. ಹೊಸ ತಿದ್ದುಪಡಿಯ ಅನುಸಾರ ಆಸ್ಪತ್ರೆಗಳಲ್ಲಿ ಹಿಂಸಾಚಾರ ನಡೆಸುವ ಜನರ ವಿರುದ್ಧ ದಂಡ ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸುವ ಅವಕಾಶವಿದೆ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಅಥವಾ ಹಲ್ಲೆ ನಡೆಸಲು ಯತ್ನಿಸುವ ವ್ಯಕ್ತಿಗಳಿಗೆ 6 ತಿಂಗಳಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50,000 ರಿಂದ 2 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.

ಹಲ್ಲೆಯಿಂದ ಆರೋಗ್ಯ ಕಾರ್ಯಕರ್ತರಿಗೆ ಗಂಭೀರ ಗಾಯಗಳಾದರೆ ದಾಳಿ ಮಾಡಿದವರಿಗೆ 1 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದಿಂದ 5 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಇನ್ಸ್‌ಪೆಕ್ಟರ್ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಗಳು ಇಂಥ ಪ್ರಕರಣಗಳನ್ನು ತನಿಖೆ ಮಾಡಲಿದ್ದಾರೆ. ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ 60 ದಿನಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಸಬೇಕು. ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.

ಇದನ್ನೂ ಓದಿ : ನಿಷ್ಕ್ರಿಯ ಗೂಗಲ್ ಅಕೌಂಟ್​ ಡಿಲೀಟ್​: Google ಮಹತ್ವದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.