ETV Bharat / bharat

ಕೇಂದ್ರ ಸಚಿವೆ ಸ್ಮೃತಿ ವಿರುದ್ಧ ಫೇಸ್​ಬುಕ್​ನಲ್ಲಿ ಅಶ್ಲೀಲ ಬರಹ.. ಪ್ರೊಫೆಸರ್ ಬಂಧನ - ಸ್ಮೃತಿ ಇರಾನಿ ವಿರುದ್ಧ ಫೇಸ್​ಬುಕ್​ನಲ್ಲಿ ಅಶ್ಲೀಲ ಬರಹ

ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಫೇಸ್​ಬುಕ್​​ನಲ್ಲಿ ಆಶ್ಲೀಲವಾಗಿ ಬರೆದುಕೊಂಡಿದ್ದಕ್ಕಾಗಿ ಇತಿಹಾಸ ಪ್ರೊಫೆಸರ್​ನೋರ್ವನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.

Smriti Irani
Smriti Irani
author img

By

Published : Jul 21, 2021, 6:04 PM IST

ಫಿರೋಜಾಬಾದ್​(ಉತ್ತರ ಪ್ರದೇಶ): ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಅಶ್ಲೀಲವಾಗಿ ಬರೆದಿರುವ ಆರೋಪದ ಮೇಲೆ ಪ್ರಾಧ್ಯಾಪಕನೋರ್ವನನ್ನು ಬಂಧಿಸಲಾಗಿದೆ. ಶಹರ್ಯಾರ್ ಅಲಿ ಎಂಬಾತ ಬಂಧಿತ ಆರೋಪಿ.

ಫಿರೋಜಾಬಾದ್​ನಲ್ಲಿರುವ ಎಸ್​ಆರ್​ಕೆ ಕಾಲೇಜ್​ನಲ್ಲಿ ಶಹರ್ಯಾರ್ ಅಲಿ ಇತಿಹಾಸ ವಿಭಾಗದ ಪ್ರೊಫೆಸರ್​ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಮಾರ್ಚ್​ ತಿಂಗಳಲ್ಲಿ ಫೇಸ್​ಬುಕ್​​ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಅಶ್ಲೀಲವಾಗಿ ಬರೆದುಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಕೋರ್ಟ್​ಗೆ ಶರಣಾಗಿರುವ ಅವರನ್ನ ಪೊಲೀಸರ ವಶಕ್ಕೆ ನೀಡಲಾಗಿದೆ.

ಇದನ್ನೂ ಓದಿರಿ: ಅಬ್ಬಬ್ಬಾ..! 1000 ಮೀನು, 10 ಆಡು, 25 ಕೋಳಿ: ಮಗಳ ಮನೆಗೆ ಟನ್​ಗಟ್ಟಲೇ ಆಷಾಢ ಸಾರೆ ಕಳಿಸಿದ ತಂದೆ!

ತಮಗೆ ಜಾಮೀನು ನೀಡುವಂತೆ ಶಹರ್ಯಾರ್ ಅಲಿ ಕೋರ್ಟ್​ನಲ್ಲಿ ಮನವಿ ಮಾಡಿದ್ದರು. ಆದರೆ ಅದನ್ನ ತಿರಸ್ಕರಿಸಿರುವ ನ್ಯಾಯಾಲಯ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಸುಪ್ರೀಂಕೋರ್ಟ್ ಕೂಡ ಜಾಮೀನು ಅರ್ಜಿ ತಳ್ಳಿ ಹಾಕಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.