ETV Bharat / bharat

ರಾಷ್ಟ್ರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಖ್ಯಾತ 'ದಿ ಗ್ರೇಟ್ ಖಲಿ' ದಲೀಪ್ ಸಿಂಗ್ ರಾಣಾ

ದಿ ಗ್ರೇಟ್ ಖಲಿ ಎಂದೇ ಕರೆಯಲ್ಪಡುವ ವೃತ್ತಿಪರ ಕುಸ್ತಿಪಟು ದಲೀಪ್ ಸಿಂಗ್ ರಾಣಾ ದೆಹಲಿಯಲ್ಲಿ ಇಂದು ಬಿಜೆಪಿಗೆ ಸೇರ್ಪಡೆಯಾದರು. ಫೆಬ್ರವರಿ 14 ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, ಇವರ ಆಗಮನ ಪಕ್ಷಕ್ಕೆ ಬಲ ತುಂಬಿದೆ.

Professional wrestler Dalip Singh Rana, also known as The Great Khali, joins BJP in Delhi

author img

By

Published : Feb 10, 2022, 3:29 PM IST

ಹೊಸದಿಲ್ಲಿ: ಮಾಜಿ WWE ಸ್ಟಾರ್, ಖ್ಯಾತ 'ದಿ ಗ್ರೇಟ್ ಖಲಿ' ದಲೀಪ್ ಸಿಂಗ್ ರಾಣಾ ಅವರು ಇಂದು (ಗುರುವಾರ) ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ಪಕ್ಷದ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ರಾಷ್ಟ್ರ ನಾಯಕರು ಅವರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ಸೇರಿದ್ದಕ್ಕೆ ನನಗೆ ಖುಷಿಯಾಗಿದೆ. ಪ್ರಧಾನಿ ಮೋದಿಯವರು ದೇಶಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಕೆಲಸಗಳೇ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲಿದೆ. ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಆಡಳಿತದ ಭಾಗವಾಗವಾಗಬೇಕೆಂದು ಆಸೆ ಇಟ್ಟುಕೊಂಡಿದ್ದೆ. ಹಾಗಾಗಿ ಬಿಜೆಪಿಯ ರಾಷ್ಟ್ರೀಯ ನೀತಿಯಿಂದ ಪ್ರಭಾವಿತನಾಗಿ ಪಕ್ಷ ಸೇರಿದ್ದೇನೆ ಎಂದು ಖಲಿ ಹೇಳಿದ್ದಾರೆ.

  • I'm glad to have joined BJP... I feel that PM Modi's work for the nation makes him the right Prime Minister. So, I thought why not be a part of his governance for the nation's development. I joined BJP after being influenced by BJP's national policy: Wrestler The Great Khali pic.twitter.com/RjwU4XIw16

    — ANI (@ANI) February 10, 2022 " class="align-text-top noRightClick twitterSection" data=" ">

ಫೆಬ್ರವರಿ 14 ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, 'ದಿ ಗ್ರೇಟ್ ಖಲಿ'ಯ ಆಗಮನದಿಂದ ಬಿಜೆಪಿಗೆ ಬಲ ಬಂದಂತಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಈ ಹಿಂದೆ ವಂದಂತಿ ಕೇಳಿ ಬಂದಿತ್ತು. ಇಂದು ಕಮಲ ಮುಡಿಯುವ ಮೂಲಕ ಆ ವದಂತಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಅಡ್ಡಿಪಡಿಸಲು ಜನರು ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ: ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.