ETV Bharat / bharat

ಉತ್ತರ ಪ್ರದೇಶ ಗೆಲ್ಲೋಕೆ ಪ್ರಿಯಾಂಕಾ ಗಾಂಧಿ ಪಣ ; ನ.11ಕ್ಕೆ ಲಖನೌನಲ್ಲಿ ಪಾದಯಾತ್ರೆ

ಯಾತ್ರೆಯ ಮಾರ್ಗವು ರಾಜ್ಯದ ರಾಜಧಾನಿಯಲ್ಲಿ ಜಾತ್ಯಾತೀತ ಸ್ವರಮೇಳವನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿದೆ. ಲಖನೌನ ಪ್ರಸಿದ್ಧ 'ಗಂಗಾ ಜಮುನಿ ತೆಹಜೀಬ್' ಮೇಲೆ ಪ್ರಿಯಾಂಕಾ ಗಾಂಧಿ ಹೆಚ್ಚಿನ ಗಮನಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ..

Priyanka to embark on padyatra in Lucknow
ಉತ್ತರ ಪ್ರದೇಶ ಗೆಲ್ಲೋಕೆ ಪ್ರಿಯಾಂಕಾ ಗಾಂಧಿ ಪಣ; ನ.11ಕ್ಕೆ ಲಖನೌನಲ್ಲಿ ಪಾದಯಾತ್ರೆ
author img

By

Published : Nov 2, 2021, 4:20 PM IST

ಲಖನೌ(ಉತ್ತರಪ್ರದೇಶ) : ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನವೆಂಬರ್‌ 11ರಂದು ಲಖನೌದ ವಿವಿಧ ಭಾಗಗಳಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.

ಚೌಕ್‌ ಪ್ರದೇಶದ ಬಡಿ ಕಾಳಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಂಡು ಹಳೆ ನಗರದ ಮೂಲಕ ದರ್ಗಾ ಹಜರತ್ ಅಬ್ಬಾಸ್‌ನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸಂಬಂಧ ನಗರ ಕಾಂಗ್ರೆಸ್ ಸಮಿತಿ ಕಾರ್ಯಕ್ರಮದ ಬಗ್ಗೆ ಜನರಿಗೆ ಪತ್ರವೊಂದನ್ನು ಹಂಚಿದೆ.

ಉತ್ತರಪ್ರದೇಶದ ಜನರ ಜೀವನವನ್ನು ಸುಧಾರಿಸಲು ಕಾಂಗ್ರೆಸ್ ತೆಗೆದುಕೊಂಡ ಪ್ರತಿಜ್ಞೆಗಳ ಬಗ್ಗೆ ತಿಳಿಸಲು ಪಾದೆಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಪತ್ರದಲ್ಲಿ ಕೋರಲಾಗಿದೆ.

ಯಾತ್ರೆಯ ಮಾರ್ಗವು ರಾಜ್ಯದ ರಾಜಧಾನಿಯಲ್ಲಿ ಜಾತ್ಯಾತೀತ ಸ್ವರಮೇಳವನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿದೆ. ಲಖನೌನ ಪ್ರಸಿದ್ಧ 'ಗಂಗಾ ಜಮುನಿ ತೆಹಜೀಬ್' ಮೇಲೆ ಪ್ರಿಯಾಂಕಾ ಗಾಂಧಿ ಹೆಚ್ಚಿನ ಗಮನಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ವಾರಾಣಸಿ ನಂತರ ಗೋರಖ್‌ಪುರದಲ್ಲಿ ರ‍್ಯಾಲಿ ಆಯೋಜನೆ : ಯೋಗಿ ಆದಿತ್ಯನಾಥ್ ತವರು ಕ್ಷೇತ್ರದಲ್ಲಿ ಪ್ರಿಯಾಂಕಾ ಭಾಷಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.