ETV Bharat / bharat

ಭವಾನಿಪುರ ಬೈ ಎಲೆಕ್ಷನ್​: ಬಿಜೆಪಿಯ ಪ್ರಿಯಾಂಕಾ ಶ್ರೀಮಂತೆ, ಸಿಎಂ ಮಮತಾ ಬಡ ಅಭ್ಯರ್ಥಿ! - ಸಿಎಂ ಮಮತಾ ಬಡ ಅಭ್ಯರ್ಥಿ

ಭವಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯ ಪ್ರಿಯಾಂಕಾ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಇದರಲ್ಲಿ ಮಮತಾ ಬ್ಯಾನರ್ಜಿ ಬಡ ಅಭ್ಯರ್ಥಿ ಎಂದು ತಿಳಿದು ಬಂದಿದೆ.

West Bengal by-polls
West Bengal by-polls
author img

By

Published : Sep 14, 2021, 8:37 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಬರುವ ಸೆಪ್ಟೆಂಬರ್ 30 ರಂದು ನಡೆಯಲಿರುವ ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದು, ಅವರ ಎದುರಾಳಿಯಾಗಿ ಭಾರತೀಯ ಜನತಾ ಪಾರ್ಟಿಯಿಂದ ಪ್ರಿಯಾಂಕಾ ಟಿಬ್ರೆವಾಲ್ ಕಣಕ್ಕಿಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದು, ಅದರಲ್ಲಿ ತಮ್ಮ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇದರ ಪ್ರಕಾರ ಬಿಜೆಪಿಯ ಪ್ರಿಯಾಂಕಾ ಅತಿ ಶ್ರೀಮಂತ ಅಭ್ಯರ್ಥಿ ಎಂದು ತಿಳಿದು ಬಂದಿದೆ.

ಇತ್ತೀಚಿನ ಅಫಿಡವಿಟ್​ ಪ್ರಕಾರ ಪ್ರಿಯಾಂಕಾ ವಾರ್ಷಿಕ ಆದಾಯ 10,35,235 ರೂ. ಆಗಿದ್ದು, ಇದರಲ್ಲಿ 3,04,189 ರೂ. ನಗದು ರೂಪದಲ್ಲಿ ಬರುತ್ತದೆ. ಐದು ಬ್ಯಾಂಕ್​ ಖಾತೆ ಹೊಂದಿರುವ ಅವರು, ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇವರ ಒಟ್ಟು ಸ್ಥಿರಾಸ್ತಿ ಮೌಲ್ಯ 82,31,222 ಆಗಿದೆ. 15,79,969 ರೂ. ಮೌಲ್ಯದ ಸ್ಕಾರ್ಪಿಯೋ ಕಾರು ಹೊಂದಿದ್ದು, ಇದರ ಜೊತೆಗೆ 13 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಹೊಂದಿದ್ದಾರೆ. ಇದರ ಜೊತೆಗೆ 34,000 ಸಾವಿರ ರೂ. ಮೌಲ್ಯದ ಐದು ಚಿನ್ನದ ನಾಣ್ಯ ಹಾಗೂ 50 ಸಾವಿರ ರೂ. ಮೌಲ್ಯದ 20 ಬೆಳ್ಳಿ ನಾಣ್ಯಗಳಿವೆ. ಇದರ ಜೊತೆಗೆ 35 ಲಕ್ಷ ರೂ. ಸಾಲ ಇದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಉಪಚುನಾವಣೆ: ಸಿಎಂ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಟಿಬ್ರೆವಾಲ್​

ಸಿಪಿಐ(ಎಂ) ಕಮ್ಯುನಿಸ್ಟ್​ ಪಕ್ಷದ ಅಭ್ಯರ್ಥಿ ಶ್ರೀಜಿಬ್​ ಬಿಸ್ವಾಸ್​​ ಕೂಡ ಸಿಎಂ ಮಮತಾ ಬ್ಯಾನರ್ಜಿಗಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಅಫಡವಿಟ್​ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ 32,10,840 ರೂ. ಆಗಿದೆ. ಆದರೆ ಮಮತಾ ಬ್ಯಾನರ್ಜಿ 16,72,352 ರೂ. ಆಗಿದೆ. ಬಿಸ್ವಾಸ್​ ಬಳಿ 10 ಸಾವಿರ ನಗದು ರೂ. ಇದ್ದರೆ, ಮಮತಾ ಕೈಯಲ್ಲಿ 69,255 ರೂ ಇದೆ. ​ಇನ್ನು ಬಿಸ್ವಾಸ್​ ಮ್ಯೂಚುವಲ್​ ಫಂಡ್​​ಗಳಲ್ಲಿ ಹೂಡಿಕೆ ಸಹ ಮಾಡಿದ್ದಾರೆಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಮಮತಾ ಸಲ್ಲಿಕೆ ಮಾಡಿರುವ ಅಫಡವಿಟ್​​ ಪ್ರಕಾರ, ಬ್ಯಾಂಕ್​​ನಲ್ಲಿ 13,11,512 ರೂ.ಗಳಾಗಿದ್ದು, ಈ ಹಿಂದೆ ನಡೆದ ನಂದಿಗ್ರಾಮ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಕೆ ಮಾಡಿದ್ದ 13,53,000 ರೂ. ಕ್ಕಿಂತಲೂ ಕಡಿಮೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.