ETV Bharat / bharat

ಪ್ರಿಯಾಂಕಾ ಆಪ್ತ ಕಾರ್ಯದರ್ಶಿಯೇ 'ಬಿಜೆಪಿ-ಆರ್​ಎಸ್​ಎಸ್​​' ಏಜೆಂಟ್​: ಕೈ ಕಾರ್ಯಕರ್ತರ ಆಕ್ರೋಶ - ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ

ಉತ್ತರ ಪ್ರದೇಶದಿಂದ ದೆಹಲಿಗೆ ಆಗಮಿಸಿರುವ ಕಾಂಗ್ರೆಸ್​ ಕಾರ್ಯಕರ್ತರು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಸಹ ಉಸ್ತುವಾರಿ ಧೀರಜ್​ ಗುರುರಾಜ್ ಮತ್ತು ಪ್ರಿಯಾಂಕಾ ಗಾಂಧಿ ಆಪ್ತ ಕಾರ್ಯದರ್ಶಿ ಸಂದೀಪ್​ ಸಿಂಗ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

congress workers
congress workers
author img

By

Published : Mar 15, 2022, 4:17 PM IST

ನವದೆಹಲಿ : ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿರುವ ಬೆನ್ನಲ್ಲೇ ಪಕ್ಷದ ಪ್ರಮುಖರ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಆಪ್ತರನ್ನು 'ಬಿಜೆಪಿ ಮತ್ತು ಆರ್​ಎಸ್​ಎಸ್​​' ಏಜೆಂಟರೆಂದು ಕರೆದಿದ್ದಾರೆ.

ಉತ್ತರಪ್ರದೇಶದಿಂದ ದೆಹಲಿಗೆ ಆಗಮಿಸಿರುವ ಕಾಂಗ್ರೆಸ್​ ಕಾರ್ಯಕರ್ತರು, ಪಕ್ಷದ ಮುಖ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ, ಸಹ ಉಸ್ತುವಾರಿ ಧೀರಜ್​ ಗುರುರಾಜ್ ಮತ್ತು ಪ್ರಿಯಾಂಕಾ ಗಾಂಧಿ ಆಪ್ತ ಕಾರ್ಯದರ್ಶಿ ಸಂದೀಪ್​ ಸಿಂಗ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಚುನಾವಣೆಯಲ್ಲಿ ಪಕ್ಷದ ಟಿಕೆಟ್​​ಗಳನ್ನು ಮಾರಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಉತ್ತರಪ್ರದೇಶದ ಚುನಾವಣೆಗಾಗಿ ಪ್ರಿಯಾಂಕಾ ಗಾಂಧಿ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದರು. ಚುನಾವಣೆಯಲ್ಲಿ ಫಲಿತಾಂಶ ನಮ್ಮ ಪರವಾಗಿ ಬಂದಿಲ್ಲ ಎಂಬುವುದೂ ನಮಗೆ ವಿಷಯವೇ ಅಲ್ಲ. ಆದರೆ, ಪಕ್ಷದಲ್ಲೇ ಇದ್ದುಕೊಂಡು ಕೆಲವರು ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ.

ಅಂತಹ ವ್ಯಕ್ತಿಗಳು ಚುನಾವಣೆಯನ್ನು ತಪ್ಪಾಗಿ ನಿರ್ವಹಿಸುತ್ತಿದ್ದು, ಮಾತ್ರವಲ್ಲದೇ ನಿಷ್ಟಾವಂತರನ್ನು ಪಕ್ಷ ಬಿಡುವಂತೆ ಮಾಡಿದ್ದಾರೆ ಎಂದು ಮುಖಂಡ ವೀರೇಂದ್ರ ಸಿಂಗ್​ ಗುಡ್ಡು ಬೇಸರ ಹೊರ ಹಾಕಿದ್ದಾರೆ.

ಯಾವ ವ್ಯಕ್ತಿ ತನ್ನದೇ ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೋ, ಆ ವ್ಯಕ್ತಿಯನ್ನು ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈಗ ವ್ಯಕ್ತಿಗೆ ಉತ್ತರಪ್ರದೇಶದಲ್ಲಿ ಕಾಲಿಡಲು ಆಗುವುದಿಲ್ಲ ಎಂದು ಧೀರಜ್​ ಗುರುರಾಜ್ ವಿರುದ್ಧ ವೀರೇಂದ್ರ ಸಿಂಗ್​ ವಾಗ್ದಾಳಿ ನಡೆದಿದ್ದಾರೆ. ಮತ್ತೊಬ್ಬ ಕಾರ್ಯಕರ್ತ ಮಾತನಾಡಿ, ಪ್ರಿಯಾಂಕಾ ಗಾಂಧಿ ಆಪ್ತ ಕಾರ್ಯದರ್ಶಿ ಸಂದೀಪ್​ ಸಿಂಗ್​ ಅವರನ್ನು 'ಬಿಜೆಪಿ ಮತ್ತು ಆರ್​ಎಸ್​ಎಸ್​​' ಏಜೆಂಟರೆಂದು ಕರೆದಿದ್ದಾರೆ.

ಉತ್ತರಪ್ರದೇಶದ ಚುನಾವಣೆಯ ಸೋಲು ಕಾಂಗ್ರೆಸ್​ ಮತ್ತು ಪ್ರಿಯಾಂಕಾ ಗಾಂಧಿ ಸೋಲಲ್ಲ. ಇದು ಕಾಂಗ್ರೆಸ್​​ ಕಾರ್ಯಕರ್ತರ ಬದಲಿಗೆ ಡಮ್ಮಿ ಅಭ್ಯರ್ಥಿಗಳಿಗೆ ಯಾರು ಟಿಕೆಟ್​ ಮಾರಾಟ ಮಾಡಿದ್ದರೋ ಅವರ ಸೋಲು ಎಂದು ಕಾರ್ಯಕರ್ತರು ಹೇಳಿದ್ದಾರೆ. ಅಲ್ಲದೇ, ಟಿಕೆಟ್​ ಹಂಚಿಕೆಯಲ್ಲಿ ಶೇ.40ರಷ್ಟು ಮಹಿಳೆಯರಿಗೆ ಕೊಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು.

ಆದರೆ, ಇದರಲ್ಲಿ ಸಂದೀಪ್​ ಸಿಂಗ್ ಭ್ರಷ್ಟಾಚಾರ ಮಾಡಿದರು. ಈ ಬಗ್ಗೆ ಮಹಿಳಾ ಕಾರ್ಯಕರ್ತೆಯರು ದೂರು ನೀಡಿದರೂ ಸಂದೀಪ್​ ಸಿಂಗ್ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು. ಇನ್ನು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅತ್ಯಂತ ಕಳಪೆ ಸಾಧನೆ ಮಾಡಿದೆ. ಕಳೆದ 2017ರ ಚುನಾವಣೆಯಲ್ಲಿ 7 ಸ್ಥಾನಗಳು ಮತ್ತು ಶೇ.6.25ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಸ್ಥಾನಗಳು 2ಕ್ಕೆ ಕುಸಿದಿದೆ. ಮತ ಗಳಿಕೆಯಲ್ಲೂ ಶೇ.2.35ಕ್ಕೆ ಕುಸಿದು ಶೇ.4ರಷ್ಟು ಮತಗಳನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ: ಪ್ರಧಾನಿ ಮೋದಿ ಕಠಿಣ ಸಂದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.