ETV Bharat / bharat

ರಾಯ್​​ ಬರೇಲಿ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ಹಿಂದಿರುಗಿದ ಪ್ರಿಯಾಂಕಾ.. ಯಾಕಾಗಿ ಈ ನಿರ್ಧಾರ? - ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ರಾಯ್​ಬರೇಲಿ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ದೆಹಲಿಗೆ ಹಿಂದಿರುಗಿದ್ದಾರೆ.

ಪ್ರಿಯಾಂಕಾ
ಪ್ರಿಯಾಂಕಾ
author img

By

Published : Sep 13, 2021, 12:59 PM IST

ರಾಯ್​​ಬರೇಲಿ (ಉತ್ತರಪ್ರದೇಶ): ಎರಡು ದಿನಗಳ ಕಾಲ ರಾಯ್​ಬರೇಲಿ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ಹಿಂದಿರುಗಿದ್ದಾರೆ.

ನಿನ್ನೆ ರಾಯ್​ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ, ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದರು. ನಗರದ ಬಚ್ರವಾನ್, ಹರಚಂದಪುರ, ಜಗದೀಶ್‌ಪುರ ಗ್ರಾಮ ಮತ್ತು ಸಿವಿಲ್ ಲೈನ್ಸ್ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದರು.

ಲಖನೌ-ರಾಯ್ ಬರೇಲಿ ಗಡಿಯಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು. ಇಂದು ಅವರು ಅಮೇಥಿ ಸೇರಿ ಹಲವು ಗ್ರಾಮಗಳಿಗೆ ಭೇಟಿ ನೀಡಬೇಕಿತ್ತು. ಆದರೆ, ಮುಂಜಾನೆಯೇ ದೆಹಲಿಗೆ ಹಿಂದಿರುಗಿದ್ದಾರೆ.

ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ತಾಯಿ ಸೋನಿಯಾ ಗಾಂಧಿ ಸಂಸತ್​ ಕ್ಷೇತ್ರ ರಾಯ್​ ಬರೇಲಿಯ ಎರಡು ದಿನ ಪ್ರವಾಸ ಕೈಗೊಂಡಿದ್ದರು. ರಾಯ್ ಬರೇಲಿಯನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಸಿಎಂ ಭೂಪೇಂದ್ರ ಪಟೇಲ್​ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಡಿಸಿಎಂ ನಿತಿನ್ ಪಟೇಲ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನ್ನು ಬಿಜೆಪಿ, ಎರಡು ಸ್ಥಾನಗಳನ್ನು ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಜಯ ಸಾಧಿಸಿತ್ತು. ಅಲ್ಲದೇ, ಗೆದ್ದ ಇಬ್ಬರೂ ಕಾಂಗ್ರೆಸ್ ವಿರುದ್ಧವೇ ತಿರುಗಿಬಿದ್ದು, ಬಿಜೆಪಿ ಕಡೆ ಒಲವು ತೋರಿಸಿದರು. ಇದೀಗ ರಾಯ್ ಬರೇಲಿಯಲ್ಲಿ ಮತ್ತೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಪ್ರಿಯಾಂಕಾ ಗಾಂಧಿಗೆ ಸವಾಲಾಗಿ ಪರಿಣಮಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.