ಲಖನೌ(ಉತ್ತರಪ್ರದೇಶ): ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಲಖನೌದ ಇಂದಿರಾ ನಗರದಲ್ಲಿರುವ ಲವಕುಶ ವಾಲ್ಮೀಕಿ ಬಸ್ತಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು, ಸೀತಾಪುರದ ಅತಿಥಿ ಗೃಹದಲ್ಲಿ ಕಸ ಗುಡಿಸಿ ಗಮನ ಸೆಳೆದರು. ಗ್ರಾಮದ ಹಲವಾರು ಮನೆಗಳಿಗೆ ಭೇಟಿ ನೀಡಿ ಸ್ಥಳೀಯರನ್ನು ಮಾತನಾಡಿಸಿದರು.
ಪ್ರಿಯಾಂಕಾ ಅವರನ್ನು ಸಾರ್ವಜನಿಕರು ಕಸ ಗುಡಿಸಲು ಬಿಟ್ಟಿದ್ದಾರೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಕಸ ಗುಡಿಸುವುದು ಕೆಟ್ಟದ್ದಲ್ಲ. ಲಕ್ಷಾಂತರ ಮಹಿಳೆಯರು ಕಸ ಗುಡಿಸುವ ಮೂಲಕ ಸ್ವಚ್ಛಗೊಳಿಸುತ್ತಿದ್ದಾರೆ. ಬಿಜೆಪಿ ದಲಿತ ವಿರೋಧಿ ಚಿಂತನೆ ಹೊಂದಿರುವುದರಿಂದ ಯೋಗಿ ಆದಿತ್ಯನಾಥ್ ಹೀಗೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಲವಕುಶ ವಾಲ್ಮೀಕಿ ಬಸ್ತಿಗೆ ಭೇಟಿ ನೀಡಿದ್ದ ಪ್ರಿಯಾಂಕಾ, ಸ್ಥಳೀಯ ಮಹಿಳೆಯರೊಂದಿಗೆ ಮಾತನಾಡಿದ್ರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ರು.