ETV Bharat / bharat

ಮಧ್ಯಪ್ರದೇಶ: ಪ್ರಿಯಾಂಕ ಗಾಂಧಿ ಭಾಷಣದಲ್ಲಿ ಮೋದಿ, ಅದಾನಿ ವಿರುದ್ಧ ವಾಗ್ದಾಳಿ - ಪ್ರಿಯಾಂಕಾ ಗಾಂಧಿ ಭಾಷಣ

Madhya pradesh election 2023: ಮಧ್ಯಪ್ರದೇಶದ ಧರ್​ನಲ್ಲಿ ಪ್ರಿಯಾಂಕಾ ಗಾಂಧಿ ಚುನಾವಣೆಯನ್ನು ಉದ್ದೇಶಿಸಿ ಮಾತನಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಿಯಾಂಕ ಗಾಂಧಿ
ಪ್ರಿಯಾಂಕ ಗಾಂಧಿ
author img

By ETV Bharat Karnataka Team

Published : Nov 6, 2023, 10:55 PM IST

ಧರ್​(ಮಧ್ಯಪ್ರದೇಶ): ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆ ನಡೆಯುತ್ತಿರುವ ಕಾಂಗ್ರೆಸ್​ ರ‍್ಯಾಲಿಯನ್ನು ಉದ್ದೇಶಿಸಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಧಾರ್​ ಜಿಲ್ಲೆಗೆ ಸೋಮವಾರ ಆಗಮಿಸಿದರು. ಧಾರ್‌ನಲ್ಲಿರುವ ಕುಕ್ಷಿ ಪಟ್ಟಣದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ತಮ್ಮ ಭಾಷಣದ ವೇಳೆ ಪ್ರಿಯಾಂಕಾ ಗಾಂಧಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೇ ಅದಾನಿ ಹೆಸರನ್ನು ಪ್ರಸ್ತಾಪಿಸಿದ್ದು, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಪುತ್ರನ ವೈರಲ್ ವಿಡಿಯೋವನ್ನು ಗುರಿಯಾಗಿಸಿ ಮಾತನಾಡಿದರು. ಇವುಗಳಲ್ಲದೇ, ಹಣದುಬ್ಬರ ಮತ್ತು ಈರುಳ್ಳಿ ಬೆಲೆಯ ಬಗ್ಗೆಯೂ ಪ್ರಿಯಾಂಕಾ ಮಾತನಾಡಿದ್ದಾರೆ. ನಿಮ್ಮ ಮುಂದೆ ಚುನಾವಣೆ ಇದೆ, ಆಯ್ಕೆ ಇದೆ. ಸಾರ್ವಜನಿಕರೇ ನಿಮ್ಮ ಮೇಲೆ ದೌರ್ಜನ್ಯಗಳು ಹೆಚ್ಚಾಗಬೇಕು, ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚಾಗಬೇಕೆಂದು ಬಯಸಿದರೆ ಬಿಜೆಪಿಗೆ ಅವಕಾಶ ಕೊಡಿ ಎಂದ ಗಾಂಧಿ ಕೇಂದ್ರದ ಕೃಷಿ ಸಚಿವರೊಬ್ಬರ ಪುತ್ರನ ವಿಡಿಯೋ ವೈರಲ್ ಬಗ್ಗೆ ಮಾತನಾಡಿ ಅದರಲ್ಲಿ ಸಾವಿರಾರು, ನೂರಾರು ಕೋಟಿ ಹಣದ ಮಾತುಗಳು ಕೇಳಿ ಬರುತ್ತಿವೆ ಎಂದರು.

ಅದಾನಿ 1,600 ಕೋಟಿಗಳಿಸಿದರೆ ರೈತ ಕೇವಲ 27 ರೂ: ದೇಶದ ರೈತ 27 ರೂ. ಸಂಪಾದಿಸಿದರೆ, ಅದಾನಿ ದಿನಕ್ಕೆ ಸರ್ಕಾರದ ನೆರವಿನಿಂದ 1600 ಕೋಟಿ ರೂ ಗಳಿಸುತ್ತಿದ್ದಾರೆ ಎಂದರು ಕಿಡಿಕಾರಿದರು. ಮುಂದೆ ಪ್ರಧಾನಿ ಮೋದಿ ವಿರುದ್ಧ ಮೋದಿ ಜಿಯವರು ಲಕ್ಷಗಟ್ಟಲೆ ಬೆಲೆಯ ಸೂಟುಗಳನ್ನು ಧರಿಸುತ್ತಾರೆ. 8 ಸಾವಿರ ಕೋಟಿ ಮೌಲ್ಯದ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿದ್ದಾರೆ. 8 ಸಾವಿರ ಕೋಟಿ ಮೌಲ್ಯದ ಎರಡು ವಿಮಾನಗಳನ್ನು ಖರೀದಿಸಿದ್ದಾರೆ. ಸಂಸತ್ತಿನ ಅಲಂಕಾರಲ್ಕೆ 20 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಅಲ್ಲದೇ ಮೋದಿ ಸರ್ಕಾರ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುತ್ತಿದೆ. ಆದರೆ, ರೈತರ ಬಾಕಿ ಪಾವತಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.

ಬಿಜೆಪಿಯ ಘೋಷಣೆಗಳು ಸುಳ್ಳು: ಗಾಂಧಿ ತಮ್ಮ ಭಾಷಣದ ನಡುವೆ, ಈ 5-6 ವರ್ಷಗಳಲ್ಲಿ ನೀವು ಏನಾದರೂ ಪ್ರಗತಿ ಸಾಧಿಸಿದ್ದೀರಾ ಎಂದು ಪ್ರಿಯಾಂಕಾ ಗಾಂಧಿ ಸಾರ್ವಜನಿಕರನ್ನು ಪ್ರಶ್ನಿಸಿದರು. 18 ವರ್ಷಗಳಲ್ಲಿ ನೀವು ಯಾವುದೇ ಪ್ರಗತಿ ಸಾಧಿಸಿಲ್ಲ. ಈ ನಡುವೆ ಬಂದ ಕಾಂಗ್ರೆಸ್ ಸರಕಾರವನ್ನು, ಹಣ ಕೊಟ್ಟು ಬೀಳಿಸಿದರು. ಬಿಜೆಪಿಯವರು ಮಾಡುತ್ತಿರುವ ಘೋಷಣೆಗಳೆಲ್ಲ ಪೊಳ್ಳು. ಬಿಜೆಪಿ ರಾಜ್ಯದ ಜನತೆಗೆ ಏನೂ ಮಾಡಿಲ್ಲ. ನಾನು ಮತ ಕೇಳಲು ಬಂದಿಲ್ಲ ಜಾಗೃತಿಗಾಗಿ ಬಂದಿದ್ದೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಇಂದಿರಾ ಗಾಂಧಿಯವರು ಯಾವುದೇ ಪೊಳ್ಳು ಘೋಷಣೆಗಳನ್ನು ಮಾಡಿಲ್ಲ, ಬದಲಿಗೆ ಅವರು ನಿಮಗೆ ನೀರು, ಕಾಡು ಮತ್ತು ಭೂಮಿಯ ಮೇಲಿನ ಹಕ್ಕುಗಳನ್ನು ನೀಡಿದ್ದಾರೆ ಎಂದು ಅವರು ಸಮರ್ಥಿಸಿಕೊಂಡರು. ಮುಂದುವರೆದು ಪ್ರಿಯಾಂಕಾ ಗಾಂಧಿ ಹಣದುಬ್ಬರ ಮತ್ತು ನಿರುದ್ಯೋಗದ ಬಗ್ಗೆ ಮಾತನಾಡಿದರು. ಇಂದು ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ.

ಇಂದು ದೇಶದಲ್ಲಿ ಇರುವ ನಿರುದ್ಯೋಗ 45 ವರ್ಷಗಳಿಂದ ದೇಶದಲ್ಲಿ ಇರಲಿಲ್ಲ. 90ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ದೇಶದಲ್ಲಿ ಮೊದಲು ಟೊಮೆಟೊ ಬೆಲೆ ಏರಿಕೆಯಾಗಿತ್ತು. ಈಗ ಈರುಳ್ಳಿ ಬೆಲೆಯೂ ಹೆಚ್ಚಾಗಿದೆ. ಕಾಂಗ್ರೆಸ್ ಸರಕಾರವಿದ್ದಾಗ ಪ್ರಧಾನಿ ಮೋದಿಯವರು ಸಚಿನ್ ಶತಕ ಬಾರಿಸುತ್ತಾರೋ ಅಥವಾ ಈರುಳ್ಳಿ ಶತಕ ಬಾರಿಸುತ್ತದೋ ಎಂದು ಹೇಳುತ್ತಿದ್ದರು. ಈಗ ನಾನು ಬಿಜೆಪಿ ಸರ್ಕಾರವನ್ನು ಕೇಳಲು ಬಯಸುತ್ತೇನೆ, ವಿರಾಟ್ ಮತ್ತು ಈರುಳ್ಳಿ ಇಬ್ಬರೂ ತಮ್ಮ ಶತಕವನ್ನು ತಲುಪಿದ್ದಾರೆ. ಇದು ನಿಮ್ಮ ಸರ್ಕಾರ, ಇದಕ್ಕೆ ಏನು ಹೇಳುತ್ತೀರಿ? ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಛತ್ತೀಸ್​ಗಢ ಚುನಾವಣೆ: ಮೊದಲ ಹಂತದ ಮತದಾನಕ್ಕೆ ಮುನ್ನ ಬಾಂಬ್​ ಸ್ಫೋಟ: ಇಬ್ಬರು ಚುನಾವಣಾಧಿಕಾರಿಗಳು,​ ಯೋಧನಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.