ಬುಂಡಿ(ರಾಜಸ್ಥಾನ): ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ 96ನೇ ದಿನಕ್ಕೆ ತಲುಪಿದೆ. ಇಂದು ಬೆಳಿಗ್ಗೆ ತೇಜಾಜಿ ದೇವಸ್ಥಾನದಿಂದ ಯಾತ್ರೆ ಪುನಾರಂಭವಾಯಿತು. ಭಾನುವಾರ ಸಂಜೆಯಿಂದ ರಾಹುಲ್ ಅವರೊಂದಿಗೆ ಪ್ರಿಯಾಂಕಾ ಗಾಂಧಿ, ಪತಿ ರಾಬರ್ಟ್ ವಾದ್ರಾ ಹಾಗು ಮಗಳು ಮಿರಾಯಾ ವಾದ್ರಾ ಹೆಜ್ಜೆ ಹಾಕುತ್ತಿದ್ದಾರೆ.
ರಾಜ್ಯಾದ್ಯಂತ 5,000ಕ್ಕೂ ಹೆಚ್ಚು ಮಹಿಳಾ ಮುಖಂಡರು, ಕಾರ್ಯಕರ್ತರು ಪಾದಯಾತ್ರೆಗೆ ಸಾಥ್ ನೀಡಿದ್ದಾರೆ. ರಾಜ್ಯ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ನೇತಾ ಡಿಸೋಜಾ, ರಾಜ್ಯದ ಮಹಿಳಾ ಸಚಿವರಾದ ಮಮತಾ ಭೂಪೇಶ್, ಶಕುಂತಲಾ ರಾವತ್ ಮತ್ತು ಜಾಹಿದಾ ಖಾನ್ ಸೇರಿದ್ದರು. ರಾಜಸ್ಥಾನ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮತ್ತು ರಾಜಸ್ಥಾನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೆಹಾನಾ ರಿಯಾಜ್, ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್, ಸಮಾಜ ಕಲ್ಯಾಣ ಆಯೋಗದ ಅಧ್ಯಕ್ಷೆ ಅರ್ಚನಾ ಶರ್ಮಾ ಮತ್ತು ಮಹಿಳಾ ಶಾಸಕರು ರಾಹುಲ್ ಜತೆ ಯಾತ್ರೆಯಲ್ಲಿ ಸಾಗಿದ್ದು ಗಮನ ಸೆಳೆಯಿತು.
ಇದನ್ನೂ ಓದಿ:ಗುಜರಾತ್ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ.. ಪಿಎಂ ಮೋದಿ, ಅಮಿತ್ ಶಾ, ಬೊಮ್ಮಾಯಿ ಭಾಗಿ