ನವದೆಹಲಿ: ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸರಿಗೆ ನೀಡುವ ಪ್ರಶಂಸನೀಯ ಸೇವಾ ಪದಕಕ್ಕೆ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.
ನಾಳೆ ಗಣರಾಜ್ಯೋತ್ಸವದ ನಿಮಿತ್ತ ಇಂದು ಕೇಂದ್ರ ಗೃಹ ಇಲಾಖೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದೆ.
ರಾಷ್ಟ್ರಪತಿಯವರ ಶೌರ್ಯ ಪದಕಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಇವರು ಸಿಆರ್ಪಿಎಫ್ ಮತ್ತು ಜಾರ್ಖಂಡ್ಗೆ ಸೇರಿದವರಾಗಿದ್ದಾರೆ.
ಓದಿ: ವಿಶ್ವದ ಅತ್ಯಂತ ಹಿರಿಯ ಮಹಿಳೆ ವಯಸ್ಸಿನ ವಿವಾದ: ಊಹಾಪೋಹಗಳಿಗೆ ತೆರೆ ಎಳೆದ ಜಿಲ್ಲಾಡಳಿತ
ಪೊಲೀಸ್ ಶೌರ್ಯ ಪದಕಕ್ಕೆ 205 ಮಂದಿ, ವಿಶೇಷ ಸೇವೆಗಾಗಿ ನೀಡುವ ರಾಷ್ಟ್ರಪತಿ ಪದಕಕ್ಕೆ 89 ಮಂದಿ ಪಾತ್ರರಾಗಿದ್ದಾರೆ.
ಪ್ರಧಾನಮಂತ್ರಿಯವರ ಪ್ರಶಂಸನೀಯ ಸೇವಾ ಪದಕಕ್ಕೆ ದೇಶಾದ್ಯಂತ 650 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಕರ್ನಾಟಕದ 19 ಮಂದಿ ಸೇರಿದ್ದಾರೆ.