ETV Bharat / bharat

ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕನಾದ್ರೂ 20 ಕಾಲೇಜುಗಳ ಒಡೆಯ.. ಇಲ್ಲೋರ್ವ ಕುಬೇರ ಟೀಚರ್​! - ಶಿಕ್ಷಕನಾದ್ರೂ 20 ಕಾಲೇಜುಗಳ ಒಡೆಯ

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲೊಬ್ಬ ಶಿಕ್ಷಕ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಮಾಡುತ್ತಿದ್ದರೂ 20 ಶಾಲೆಗಳಿಗೆ ಒಡೆಯನಾಗಿದ್ದಾನೆ. ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದ ಮೇಲೆ ನಡೆದ ದಾಳಿಯಲ್ಲಿ ಶಿಕ್ಷಕನ ಆಸ್ತಿ-ಅಂತಸ್ತಿನ ಬಗ್ಗೆ ಬಹಿರಂಗವಾಗಿದೆ.

collages-owner
ಕುಬೇರ ಮಾಸ್ತರ
author img

By

Published : Mar 26, 2022, 8:12 PM IST

ಗ್ವಾಲಿಯರ್(ಮಧ್ಯಪ್ರದೇಶ): ಸರ್ಕಾರಿ ಶಾಲೆಯ ಶಿಕ್ಷಕರು ಬಡವರು ಎಂಬ ಮಾತಿದೆ. ಆದರೆ, ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿರುವ ಈ ಶಿಕ್ಷಕ ಮಾತ್ರ ಇದಕ್ಕೆ ತದ್ವಿರುದ್ಧ. ಸರ್ಕಾರಿ ಶಾಲೆಯ ಶಿಕ್ಷಕನಾದರೂ ಈತನೇ 20 ಕಾಲೇಜುಗಳ ಒಡೆಯನಾಗಿದ್ದಾನೆ. ಅಲ್ಲದೇ, ಆದಾಯಕ್ಕಿಂತ ಸಾವಿರ ಪಟ್ಟು ಹೆಚ್ಚು ಆಸ್ತಿ ಹೊಂದಿದ್ದಾನೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ ಈ ವಿಷಯ ಬಹಿರಂಗವಾಗಿದೆ. ಅಲ್ಲದೇ ಶಿಕ್ಷಕನ ಆಸ್ತಿಯನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಗ್ವಾಲಿಯರ್​ ನಿವಾಸಿಯಾದ ಈ ಶಿಕ್ಷಕನ ಹೆಸರು ಪ್ರಶಾಂತ್​ ಪರ್ಮಾರ್​. ಘಾಟಿಗಾಂವ್​ ಎಂಬಲ್ಲಿನ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಇವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಶಿಕ್ಷಕನ ಸಂಪಾದನೆಗಿಂತ 1 ಸಾವಿರ ಪಟ್ಟು ಹೆಚ್ಚು ಆಸ್ತಿ ಕಂಡು ಬಂದಿದೆ.

ಈ ಶಿಕ್ಷಕ 20 ಕಾಲೇಜುಗಳ ಮಾಲೀಕ: ಈ ಶಿಕ್ಷಕನ ಚಮತ್ಕಾರ ಎಂದರೆ ಯಾವುದೋ ಸಣ್ಣ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ಮಾಡುತ್ತಿದ್ದರೂ ಈತ ತನ್ನ ಒಡೆತನದ 20 ಕಾಲೇಜುಗಳನ್ನು ನಡೆಸುತ್ತಿದ್ದಾನಂತೆ. ಇದರಲ್ಲಿ ಡಿ.ಇಡಿ​, ಬಿ.ಇಡಿ ಶಿಕ್ಷಣವನ್ನು ಕಲಿಸುವ ಕಾಲೇಜುಗಳೂ ಇವೆ. ವರ್ಷಕ್ಕೆ ಈತ 25 ರಿಂದ 30 ಲಕ್ಷ ವೇತನ ಪಡೆಯುತ್ತಾನೆ. ಆದರೆ, ಅಧಿಕಾರಿಗಳ ದಾಳಿಯ ವೇಳೆ ಈತನಲ್ಲಿ ವೇತನಕ್ಕಿಂತಲೂ 1 ಸಾವಿರ ಪಟ್ಟು ಅಧಿಕ ಆಸ್ತಿ ಪತ್ತೆಯಾಗಿದೆ. ಇದಲ್ಲದೇ, ತೋಟದಲ್ಲಿ ಕಲ್ಯಾಣ ಮಂಟಪ, ಶಾಲೆ ಕೂಡ ನಡೆಸುತ್ತಿದ್ದಾನಂತೆ ಈ ಕುಬೇರ ಶಿಕ್ಷಕ.

ಓದಿ: ಬೆಂಗಳೂರಲ್ಲಿ ವರ್ಕೌಟ್ ಸಮಯದಲ್ಲೇ ಕುಸಿದು ಬಿದ್ದ ಮಹಿಳೆ.. ಕ್ಷಣಾರ್ಧದಲ್ಲೇ ಹಾರಿಹೋಯ್ತು ಪ್ರಾಣ! ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.