ETV Bharat / bharat

ಪೆನ್ಸಿಲ್​​ ಕದ್ದ ವಿಚಾರಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪುಟಾಣಿಗಳು: ಮಕ್ಕಳ ಮಾತು ಕೇಳಿದ್ರೆ ನೀವೂ ನಗ್ತೀರಾ! - ಪೆನ್ಸಿಲ್​​ ಕದ್ದ ವಿಚಾರಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪುಠಾಣಿಗಳು

ಸ್ನೇಹಿತನೋರ್ವ ಪೆನ್ಸಿಲ್​ ಕದ್ದಿದ್ದಾನೆ ಎಂದು ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​​ ಆಗಿದೆ.

Primary School Students
Primary School Students
author img

By

Published : Nov 26, 2021, 3:15 PM IST

Updated : Nov 26, 2021, 3:21 PM IST

ಕರ್ನೂಲ್​(ಆಂಧ್ರಪ್ರದೇಶ): ಪೊಲೀಸರೆಂದರೆ ಭಯ ಸಾಮಾನ್ಯ. ಅವರಿಂದ ಆದಷ್ಟು ದೂರ ಇರುವುದಕ್ಕೆ ಜನರು ಇಷ್ಟಪಡುತ್ತಾರೆ. ಏನಾದ್ರು ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ನಡೆದರೂ ಕೂಡ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರದೆ ಸುಮ್ಮನಾಗಿ ಬಿಡುತ್ತಾರೆ.

ಆದರೆ, ಕೆಲವೊಬ್ಬರು ವಿಚಿತ್ರ ಕಾರಣಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿ ದೂರು ನೀಡಿರುವ ಉದಾಹರಣೆಗಳಿವೆ. ಆಂಧ್ರದ ಕರ್ನೂಲ್‌ನಲ್ಲಿ ಇದೇ ರೀತಿಯ ಕುತೂಹಲಕಾರಿ ಘಟನೆ ನಡೆದಿದೆ.

ಇಲ್ಲಿ ಪೆನ್ಸಿಲ್​ ಕದ್ದಿದ್ದಕ್ಕಾಗಿ 3ನೇ ತರಗತಿ ಬಾಲಕನೋರ್ವ ಶಿಕ್ಷಕರಿಗೆ ಹೇಳದೆ, ತನ್ನ ಸ್ನೇಹಿತನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಠಾಣೆಯಲ್ಲಿ ಇಬ್ಬರು ಮಕ್ಕಳ ನಡುವಿನ ಸಂಭಾಷಣೆ ಪೊಲೀಸರಿಗೆ ಒಳ್ಳೆಯ ಮನರಂಜನೆ ಕೊಟ್ಟಿದೆ. ಇದರ ವಿಡಿಯೋ ತುಣುಕನ್ನು ಆಂಧ್ರಪ್ರದೇಶ ಪೊಲೀಸರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೊಲೀಸರ ಬಳಿ ಬಂದ ಬಾಲಕರು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಈ ವೇಳೆ ಒಬ್ಬ, ಪ್ರತಿ ದಿನ ತಾನು ತೆಗೆದುಕೊಂಡು ಬರುವ ಪೆನ್ಸಿಲ್ ಅನ್ನು ಗೆಳೆಯ ಕಳ್ಳತನ ಮಾಡುತ್ತಿದ್ದಾನೆಂದು ದೂರಿದ್ದಾನೆ. ಇದಕ್ಕೆ ಆರೋಪಿ ಸ್ಥಾನದಲ್ಲಿರುವ ಬಾಲಕ, ತಾನು ಪೆನ್ಸಿಲ್‌ ಕದ್ದಿಲ್ಲ ಎಂದು ಹೇಳಿದ.

ಇದನ್ನೂ ಓದಿ: ಜೈಸಲ್ಮೇರ್‌ನಲ್ಲಿ 'ದಕ್ಷಿಣ ಶಕ್ತಿ' ಮಿಲಿಟರಿ ಸಮರಾಭ್ಯಾಸ: ಸೇನಾ ಮುಖ್ಯಸ್ಥ ನರವಣೆ ಪರಿಶೀಲನೆ

ಹೀಗೆ, ಇಬ್ಬರ ಮಾತು ಕೇಳಿರುವ ಪೊಲೀಸರು ಕೊನೆಗೆ ರಾಜಿ ಮಾಡಿಸಿದರು. ಇನ್ಮುಂದೆ ಈ ರೀತಿಯಾಗಿ ನಡೆದುಕೊಳ್ಳದಂತೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ. ಈ ವಿಡಿಯೋ ತುಣುಕು ಶೇರ್‌ ಮಾಡಿರುವ ಪೊಲೀಸರು ಶಾಲಾ ಮಕ್ಕಳು ಕೂಡ ಆಂಧ್ರಪ್ರದೇಶ ಪೊಲೀಸರ ಮೇಲೆ ನಂಬಿಕೆ ಇಡ್ತಾರೆ ಎಂಬುದಕ್ಕೆ ಇದಕ್ಕಿಂತಲೂ ದೊಡ್ಡ ಉದಾಹರಣೆ ಬೇಕಿಲ್ಲ ಎಂದಿದ್ದಾರೆ.

Last Updated : Nov 26, 2021, 3:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.