ಅನಂತಪುರ (ಆಂಧ್ರಪ್ರದೇಶ): ದೇವಸ್ಥಾನದ ಅರ್ಚಕನೋರ್ವ ತನ್ನ ಮಾಂತ್ರಿಕ ಶಕ್ತಿಯಿಂದ ಮಹಿಳೆಯರನ್ನು ಸೆಳೆದು ಅವರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅವರ ಪತ್ನಿಯೇ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಅಲ್ಲದೇ, ತನಗೆ ಅರ್ಚಕ ಪತಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೆಂಡತಿ ಆರೋಪಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಮುರಡಿ ಗ್ರಾಮದ ಅರ್ಚಕ ಅನಂತಸೈನಾ ಎಂಬವರನ್ನು ಕರ್ನೂಲು ಜಿಲ್ಲೆಯ ಮಹಿಳೆಯ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ಕಳೆದ ಏಳು ವರ್ಷಗಳಿಂದ ಪತಿ ತನಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಈ ವಿಷಯ ಹಿರಿಯರಿಗೆ ತಿಳಿಸಿದ ನಂತರ ಹಲವು ಬಾರಿ ಪತಿಗೆ ತಿಳಿ ಹೇಳಿದ್ದರು. ಆದರೂ, ಪತಿ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಮೇಲಾಗಿ ದೇವಸ್ಥಾನಕ್ಕೆ ಬರುವ ಅನೇಕ ಯುವತಿಯರು, ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಹಾಗೂ ಆಡಿಯೋ ಸಾಕ್ಷ್ಯಗಳು ನನ್ನ ಬಳಿಯಿವೆ ಎಂದು ಪತ್ನಿ ತಿಳಿಸಿದ್ದಾರೆ.
ಅಲ್ಲದೇ, ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಪ್ರಶ್ನೆ ಮಾಡಿದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿ ತವರು ಮನೆಗೆ ಕಳುಹಿಸಿದ್ದಾನೆ ಹಾಗೂ ಕೊಲೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ಅಳಲು ತೋಡಿಕೊಂಡಿರುವ ಮಹಿಳೆ, ಇದೀಗ ತನಗೆ ವಿಚ್ಛೇದನ ನೀಡಬೇಕೆಂದು ಎಂದು ವಕೀಲರ ಮೂಲಕ ಪತಿ ನೋಟಿಸ್ ಕಳುಹಿಸಿದ್ದಾನೆ. ಈ ಕುರಿತು ನಮ್ಮ ತವರು ಮನೆಯ ಹಿರಿಯರು ಮಾತನಾಡಲು ಮಂಗಳವಾರ ಮುರಡಿ ಗ್ರಾಮಕ್ಕೆ ತೆರಳಿದ್ದರು. ಆದರೆ, ಅವರ ಮೇಲೂ ಹಲ್ಲೆ ಮಾಡಿ ಕಳುಹಿಸಲಾಗಿದೆ ಎಂದು ದೂರಿದ್ದಾಳೆ.
ಇದನ್ನೂ ಓದಿ: ರಾಮಸೇನಾದ ಜಿಲ್ಲಾಧ್ಯಕ್ಷನಿಂದ ಪ್ರೇಯಸಿಯ ಕೊಲೆ ಯತ್ನ