ETV Bharat / bharat

ನೂತನ ರಾಷ್ಟ್ರಪತಿ ಆಯ್ಕೆ : 2ನೇ ಸುತ್ತಿನ ಮತ ಎಣಿಕೆಯಲ್ಲೂ ದ್ರೌಪದಿ ಮುರ್ಮು ಮುನ್ನಡೆ

author img

By

Published : Jul 21, 2022, 3:08 PM IST

Updated : Jul 21, 2022, 5:40 PM IST

ನೂತನ ರಾಷ್ಟ್ರಪತಿ ಆಯ್ಕೆಗೋಸ್ಕರ ಜುಲೈ 18ರಂದು ಮತದಾನವಾಗಿದ್ದು, ಮತ ಎಣಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಮೊದಲು ಹಾಗೂ ಎರಡನೇ ಸುತ್ತಿನಲ್ಲಿ ದ್ರೌಪದಿ ಮುರ್ಮು ಮುನ್ನಡೆ ಕಾಯ್ದುಕೊಂಡಿದ್ದಾರೆ.

Droupadi murmu
Droupadi murmu

ನವದೆಹಲಿ: ದೇಶದ ನೂತನ ರಾಷ್ಟ್ರಪತಿ ಆಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೆ ಕೆಲ ಗಂಟೆಗಳಲ್ಲಿ ತೆರೆ ಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು,ಮೊದಲೆರೆಡು ಸುತ್ತಿನಲ್ಲಿ ಎನ್​ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮೂಲಕ ರಾಷ್ಟ್ರಪತಿ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

  • After 2nd round, where ballot paper of first 10 states alphabetically counted - total valid votes 1138 & their total value 1,49,575. Out of this, Droupadi Murmu gets 809 votes valued at 1,05,299 & Yashwant Sinha gets 329 votes valued at 44,276: PC Mody, Secretary Gen, Rajya Sabha pic.twitter.com/5y1ZPwxWhs

    — ANI (@ANI) July 21, 2022 " class="align-text-top noRightClick twitterSection" data=" ">

ರಾಷ್ಟ್ರಪತಿ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆ ಫಲಿತಾಂಶವನ್ನ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೂಡಿ ಪ್ರಕಟಿಸಿದ್ದಾರೆ. ಇದರಲ್ಲಿ ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ ಮುನ್ನಡೆ ಸಾಧಿಸಿದ್ದಾರೆ. ಮುರ್ಮ ಅವರಿಗೆ 540 ಮತಗಳು ಲಭಿಸಿದ್ದು, ಒಟ್ಟು ಮತದ ಮೌಲ್ಯ 3,78,000 ಆಗಿದೆ. ಅದೇ ವೇಳೆ ಯಶವಂತ್​ ಸಿನ್ಹಾ ಅವರಿಗೆ 1,45,600 ಮೌಲ್ಯದ 208 ಮತಗಳು ಲಭಿಸಿದೆ. 15 ಮತಗಳು ಅಸಿಂಧುವಾಗಿವೆ.

  • Droupadi Murmu has secured 540 votes with a value of 3,78,000 & Yashwant Sinha has secured 208 votes with a value of 1,45,600. A total of 15 votes were invalid. These are figures for Parliament (votes), please wait for next announcement: PC Mody, Secretary General, Rajya Sabha pic.twitter.com/ka0PvmOzpX

ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯ ಎರಡನೇ ಹಂತ ಮುಕ್ತಾಯಗೊಂಡಿದ್ದು, 10 ರಾಜ್ಯಗಳ ಬ್ಯಾಲೆಟ್​ ಪೇಪರ್​​ ಎಣಿಸಲಾಗಿದೆ. ಇದರಲ್ಲಿ ದ್ರೌಪದಿ ಮುರ್ಮು 809 ಮತ ಪಡೆದುಕೊಂಡಿದ್ದು, ಯಶವಂತ್ ಸಿನ್ಹಾ 329 ಮತ ಪಡೆದುಕೊಂಡಿದ್ದಾರೆ ಎಂದು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ಸಂಸತ್ತಿನಲ್ಲಿ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಆರಂಭ

ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಕಾರ್ಯ ಆರಂಭಗೊಳ್ಳುತ್ತಿದ್ದಂತೆ ದ್ರೌಪದಿ ಮುರ್ಮು ಅವರ ಗ್ರಾಮ ಒಡಿಶಾದ ರಾಯಿರಂಗಪುರ್​​ದಲ್ಲಿ ಸಂಭ್ರಮಾಚರಣೆ ಶುರುವಾಗಿದೆ.

Last Updated : Jul 21, 2022, 5:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.