ETV Bharat / bharat

ದೆಹಲಿಯಿಂದ ಹುಟ್ಟೂರಿಗೆ ರೈಲು ಪ್ರಯಾಣ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಾಲ್ಕು ದಿನಗಳ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದು, ತಮ್ಮ ಸ್ವಗ್ರಾಮಕ್ಕೆ ತೆರಳಲು ರೈಲ್ವೆ ಪ್ರಯಾಣ ಬೆಳೆಸಿದರು.

President Kovind
President Kovind
author img

By

Published : Jun 25, 2021, 11:09 PM IST

ನವದೆಹಲಿ: ದೇಶದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹಾಗೂ ಅವರ ಧರ್ಮಪತ್ನಿ ಸುನೀತಾ ಕೋವಿಂದ್​ ಸ್ವಗ್ರಾಮಕ್ಕೆ ತೆರಳಲು ರೈಲು ಪ್ರಯಾಣ ಮಾಡಿದರು. ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸ್ವಗ್ರಾಮಕ್ಕೆ ತೆರಳಲು ದೆಹಲಿಯ ಸಫ್​ದಾರ್​ಜಂಗ್​ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ದೆಹಲಿಯಿಂದ ಹುಟ್ಟೂರಿಗೆ ರೈಲು ಪ್ರಯಾಣ ಮಾಡಿದ ರಾಷ್ಟ್ರಪತಿ

ಕಳೆದ 15 ವರ್ಷಗಳಲ್ಲಿ ರೈಲು ಪ್ರಯಾಣ ಮಾಡಿರುವ ಮೊದಲ ರಾಷ್ಟ್ರಪತಿಯಾಗಿದ್ದಾರೆ. ಈ ಹಿಂದೆ 2006ರಲ್ಲಿ ಆಗಿನ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ಲ ಕಲಾಂ ದೆಹಲಿಯಿಂದ ಡೆಹ್ರಾಡೂನ್​ಗೆ ರೈಲಿನಲ್ಲೇ ಪ್ರಯಾಣ ಬೆಳೆಸಿದ್ದರು. ಈ ಮೂಲಕ ಎಲ್ಲರಿಗೂ ಮಾದರಿಯಾದರು. ರಾಷ್ಟ್ರಪತಿ ಜೂ.27ರಂದು ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

  • President Kovind boards a special Presidential train from Safdarjung railway station to Kanpur. The train will make two stop-overs, at Jhinjhak and Rura of Kanpur Dehat, and will reach Kanpur Central in the evening. pic.twitter.com/ZuMpkGjqxP

    — President of India (@rashtrapatibhvn) June 25, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: 15 ವರ್ಷಗಳ ಬಳಿಕ ಟ್ರೈನ್​ ಹತ್ತಿದ ರಾಷ್ಟ್ರಪತಿ... ಕಲಾಂ ಬಳಿಕ ಕೋವಿಂದ್​ ರೈಲು ಪ್ರಯಾಣ!

ರಾಮನಾಥ್​ ಕೋವಿಂದ್​ ಹಾಗೂ ಅವರ ಧರ್ಮಪತ್ನಿ ಸುನೀತಾ ದೇವಿ ಕೋವಿಂದ್​ ಅವರನ್ನ ಬೀಳ್ಕೋಡಲು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಸೇರಿದಂತೆ ಅನೇಕರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪುತ್ತಿದ್ದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕರು ಅವರನ್ನ ಬರಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.