ನವದೆಹಲಿ: ಇಂದು ಮಾಜಿ ಪ್ರಧಾನಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ದಿನ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಅಟಲ್ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದರು.
ಮುಂಜಾನೆ ದೆಹಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಸದೈವ್ ಅಟಲ್ಗೆ ಭೇಟಿ ನೀಡಿದ ಗಣ್ಯರು, ಪುಷ್ಪಾರ್ಚನೆ ಮಾಡಿದರು. ದೇಶದ ಕಂಡ ಧೀಮಂತ ರಾಜಕಾರಣಿ ವಾಜಪೇಯಿ ಅವರು ಆಗಸ್ಟ್ 16, 2018ರಂದು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
-
PM Narendra Modi, President Ram Nath Kovind, and Vice President Venkaiah Naidu pay tribute to former PM Atal Bihari Vajpayee on his death anniversary, at 'Atal Samadhi Sthal' in Delhi pic.twitter.com/vgZ36XPOns
— ANI (@ANI) August 16, 2021 " class="align-text-top noRightClick twitterSection" data="
">PM Narendra Modi, President Ram Nath Kovind, and Vice President Venkaiah Naidu pay tribute to former PM Atal Bihari Vajpayee on his death anniversary, at 'Atal Samadhi Sthal' in Delhi pic.twitter.com/vgZ36XPOns
— ANI (@ANI) August 16, 2021PM Narendra Modi, President Ram Nath Kovind, and Vice President Venkaiah Naidu pay tribute to former PM Atal Bihari Vajpayee on his death anniversary, at 'Atal Samadhi Sthal' in Delhi pic.twitter.com/vgZ36XPOns
— ANI (@ANI) August 16, 2021
ಮೂರು ಅವಧಿಗೆ ಪ್ರಧಾನಿಯಾಗಿದ್ದ ವಾಜಪೇಯಿ, 1996ರಲ್ಲಿ ಮೊದಲ ಸಲ 13 ದಿನ, 1998ರಲ್ಲಿ ಎರಡನೇ ಸಲ 13 ತಿಂಗಳು ಹಾಗೂ 1999ರಲ್ಲಿ ಮೂರನೇ ಅವಧಿಗೆ ಪಿಎಂ ಆಗಿದ್ದ ಅವರು ಐದು ವರ್ಷಗಳ ಅವಧಿ ಪೂರೈಕೆ ಮಾಡಿದ್ದರು. ಡಿಸೆಂಬರ್ 25ರ ಅವರ ಜನ್ಮದಿನವನ್ನು ದೇಶದಲ್ಲಿ 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುತ್ತದೆ. 2014ರಲ್ಲಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿದೆ.