ETV Bharat / bharat

ಬದುಕಿನ ಮೂಲ ಬೇರಿನ ಸಂಪರ್ಕ ಗಟ್ಟಿಯಾಗಿರಲಿ: ಯುವ ಪೀಳಿಗೆಗೆ ಕೋವಿಂದ್​​ ಕಿವಿಮಾತು - ರಾಮನಾಥ ಕೋವಿಂದ ವಿದಾಯ ಭಾಷಣ

ಅಧಿಕಾರವಧಿಯಲ್ಲಿ ನನ್ನ ಊರಿಗೆ ಭೇಟಿ ನೀಡಿ, ವಿದ್ಯೆ ಕಲಿಸಿದ ಶಿಕ್ಷಕರಿಂದ ಆಶೀರ್ವಾದ ಪಡೆದಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳು ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

Former President Ram Nath Kovind
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್​
author img

By

Published : Jul 25, 2022, 7:53 AM IST

ನವದೆಹಲಿ: ಇಂದಿನ ಯುವ ಪೀಳಿಗೆ ತಾವು ಹುಟ್ಟಿ ಬೆಳೆದ ಹಳ್ಳಿ ಅಥವಾ ಪಟ್ಟಣ, ತಾವು ಅಕ್ಷರ ಕಲಿತ ಶಾಲೆ, ಜೀವನಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಜೊತೆ ಸದಾ ಸಂಪರ್ಕದಲ್ಲಿರುವ ಸಂಪ್ರದಾಯವನ್ನು ಮುಂದುವರಿಸಬೇಕು. ನಮ್ಮ ಬದುಕಿನ ಅಡಿಪಾಯ ಗಟ್ಟಿಯಾಗಿರಿಸಿರುವ ಮೂಲ ಬೇರಿನ ಜೊತೆಗಿನ ಸಂಪರ್ಕವೇ ಭಾರತದ ಸಾರ ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರ ತ್ಯಜಿಸುವ ಮುನ್ನಾದಿನ ಭಾನುವಾರ ಯುವಜನಾಂಗಕ್ಕೆ ಕಿವಿಮಾತು ಹೇಳಿದ್ದಾರೆ.

ರಾಷ್ಟ್ರಪತಿ ಕೋವಿಂದ್ ತಮ್ಮ ವಿದಾಯ ಭಾಷಣದಲ್ಲಿ, ನನ್ನ ಅಧಿಕಾರವಧಿಯಲ್ಲಿ ನನ್ನ ಮನೆಗೆ ಭೇಟಿ ನೀಡಿದ್ದು ಮತ್ತು ಕಾನ್ಪುರದಲ್ಲಿರುವ ನನ್ನ ಶಿಕ್ಷಕರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದು. ಹಾಗಾಗಿ ನಿಮ್ಮ ಜೀವನಕ್ಕೆ ಬುನಾದಿ ಹಾಕಿದ ನಿಮ್ಮ ಊರು, ಶಾಲೆ, ಶಿಕ್ಷಕರ ಜೊತೆಗಿನ ಸಂಪರ್ಕವನ್ನು ಯಾವತ್ತೂ ಹಚ್ಚಹಸಿರಾಗಿ ಇಟ್ಟುಕೊಳ್ಳಿ ಎಂದರು.

ಐದು ವರ್ಷಗಳ ಹಿಂದೆ, ನೀವು ನನ್ನ ಮೇಲೆ ಅಪಾರ ನಂಬಿಕೆಯನ್ನಿರಿಸಿ ನನ್ನನ್ನು ಭಾರತದ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದೀರಿ. ನನ್ನ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನನ್ನ ಹುದ್ದೆಯನ್ನು ತ್ಯಜಿಸುತ್ತಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ದೇಶಾದ್ಯಂತ ಭೇಟಿ ನೀಡಿದ ಸಂದರ್ಭ ನಾಗರಿಕರೊಂದಿಗೆ ನಡೆಸಿದ ಮಾತುಕತೆಗಳಿಂದ ನಾನು ಬಹಳಷ್ಟು ಸ್ಫೂರ್ತಿ ಮತ್ತು ಶಕ್ತಿಯನ್ನು ಪಡೆದಿದ್ದೇನೆ.

ಅದರಲ್ಲೂ ಸಶಸ್ತ್ರ ಪಡೆಗಳು, ಅರೆ ಮಿಲಿಟರಿ ಪಡೆಗಳು ಮತ್ತು ಪೊಲೀಸರನ್ನು ಭೇಟಿಯಾಗಲು ಸಿಕ್ಕ ಅವಕಾಶಗಳು ನನ್ನ ಪಾಲಿಗೆ ಮಹತ್ವದ್ದು, ಅವುಗಳನ್ನು ನಾನು ಸದಾ ಗೌರವಿಸುತ್ತೇನೆ. ವಿದೇಶ ಪ್ರವಾಸಗಳನ್ನು ಕೈಗೊಂಡಾಗ ಅಲ್ಲಿನ ಭಾರತೀಯರಲ್ಲಿ ಕಂಡ ತಾಯ್ನಾಡಿನ ಮೇಲಿನ ಪ್ರೀತಿ, ಕಾಳಜಿಗೆ ನಾನು ಮೂಕವಿಸ್ಮಿತನಾಗಿದ್ದೆ ಎಂದು ರಾಷ್ಟ್ರಪತಿ ಕೋವಿಂದ್​ ತಮ್ಮ ವಿದೇಶಿ ಪ್ರವಾಸದ ಅನುಭವಗಳನ್ನೂ ಹಂಚಿಕೊಂಡರು.

ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ರಾಷ್ಟ್ರಪತಿ ಕೋವಿಂದ್​, ಸಣ್ಣ ಹಳ್ಳಿಯಲ್ಲಿ ಬೆಳೆಯುತ್ತಿದ್ದ ವೇಳೆಗೆ, ದೇಶಕ್ಕೆ ಆಗಷ್ಟೇ ಸ್ವಾತಂತ್ರ್ಯವನ್ನು ಗಳಿಸಿತ್ತು. ಆಗ ದೇಶವನ್ನು ಪುನರ್ನಿರ್ಮಾಣ ಮಾಡುವ ಸಾವಿರ ಕನಸುಗಳನ್ನು ಹೊತ್ತ ಹೊಸ ಹುರುಪಿನ ಅಲೆಯಿತ್ತು. ಆಗ ಮಣ್ಣಿನ ಗೋಡೆಯ ಮನೆಯಲ್ಲಿ ವಾಸಿಸುತ್ತಿದ್ದ ಹುಡುಗನಿಗೆ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯ ಬಗ್ಗೆ ಜ್ಞಾನವಿರಲಿಲ್ಲ. ಆದರೆ ಮುಂದೊಂದು ದಿನ ಈ ದೇಶದ ನಿರ್ಮಾಣ ಕಾರ್ಯದಲ್ಲಿ ನಾನು ಕೂಡ ಅರ್ಥಪೂರ್ಣ ರೀತಿಯಲ್ಲಿ ಭಾಗವಹಿಸಬೇಕು ಎಂಬ ಕನಸು ನನಗಿತ್ತು. ಅದು ಈ ಮೂಲಕ ನನಸಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ಪ್ರಜೆಯೂ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಟ್ಟಂತಹ ದೇಶದ ಪ್ರಜಾಪ್ರಭುತ್ವಕ್ಕೆ ಧನ್ಯವಾದಗಳು. ಇಂದು ಪರೌಂಖ್​ ಎಂಬ ಹಳ್ಳಿಯ ರಾಮನಾಥ್ ಕೋವಿಂದ್ ನಿಮ್ಮನ್ನೆಲ್ಲ ಉದ್ದೇಶಿಸಿ ಮಾತನಾಡುತ್ತಿರುವುದಕ್ಕೆ ಕಾರಣವಾದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ನಾನು ಧನ್ಯವಾದ ಅರ್ಪಿಸಬೇಕು. ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡುವುದರಲ್ಲಿಯೇ ನಮ್ಮ ಜೀವನದ ಸಂತೋಷ ಅಡಿಗಿದೆ.

ಮೂಲಭೂತ ಅವಶ್ಯಕತೆಗಳ ನಂತರ ಪ್ರತಿಯೊಬ್ಬ ವ್ಯಕ್ತಿ ತಾನು ಅಂದುಕೊಂಡಿರುವುದನ್ನು ಸಾಧಿಸಲು ಪೂರಕವಾಗಿರುವ ಶಿಕ್ಷಣವನ್ನು ನೀಡಬೇಕು. ಆ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಯುವಕರಿಗೆ ತಮ್ಮ ಪರಂಪರೆಯೊಂದಿಗೆ ಇಪ್ಪತ್ತೊಂದನೇ ಶತಮಾನದ ಮುಂದುವರಿದ ಜಗತ್ತಿನಲ್ಲಿ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಕೋವಿಂದ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.