ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾಲ್ಕು ದಿನಗಳ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಜೂ.27ರಂದು ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ರಾಷ್ಟ್ರಪತಿಯಾದ ಬಳಿಕ ಸ್ವಗ್ರಾಮ ಕಾನ್ಪುರದ ಪರೌಖ್ಗೆ ಅವರು ಭೇಟಿ ನೀಡುತ್ತಿರುವುದು ಇದೇ ಮೊದಲು. ಇಂದು ವಿಶೇಷ ರೈಲಿನಲ್ಲಿ ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಿಂದ ಕಾನ್ಪುರಕ್ಕೆ ಕೋವಿಂದ್ ಪ್ರಯಾಣ ಬೆಳೆಸುತ್ತಾರೆ. ಜೂನ್ 26ರಂದು ಚುನಾಯಿತ ಸದಸ್ಯರು, ಉದ್ಯಮಿಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ತಮ್ಮ ಹಳೆಯ ಸ್ನೇಹಿತರನ್ನು ಅವರು ಭೇಟಿ ಮಾಡುತ್ತಾರೆ.
ಇನ್ನೂ ವಿಶೇಷವೆಂದರೆ, ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ರಾಷ್ಟ್ರಪತಿಯೊಬ್ಬರು ರೈಲು ಪ್ರಯಾಣ ಮಾಡುತ್ತಿದ್ದಾರೆ. ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಕೆಡೆಟ್‌ಗಳ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಪಾಲ್ಗೊಳ್ಳಲು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು 2006 ರಲ್ಲಿ ದೆಹಲಿಯಿಂದ ವಿಶೇಷ ರೈಲಿನಲ್ಲಿ ಪ್ರಯಾಣಿಸಿದ್ದರು.