ETV Bharat / bharat

ತಾವು ಓದಿದ್ದ ಶಾಲೆಗೆ ತೆರಳಿ, ಬಾಲ್ಯದ ಸಹಪಾಠಿಗಳ ಭೇಟಿಯಾದ ರಾಷ್ಟ್ರಪತಿ: ಹಾಸ್ಟೆಲ್​ನ ಮಂಚದ ಮೇಲೆ ಕುಳಿತು ಮುರ್ಮು ಭಾವುಕ

author img

By

Published : Nov 11, 2022, 10:35 PM IST

1970-1974ರಲ್ಲಿ 8ನೇ ತರಗತಿಯಿಂದ 11ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದ ಭುವನೇಶ್ವರದ ಶಾಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದರು.

Etv Bharatpresident-droupadi-murmu-reunites-with-special-friends-during-visit-to-bhubaneswar-school
ತಾವು ಓದಿದ್ದ ಶಾಲೆಗೆ ತೆರಳಿ, ಬಾಲ್ಯದ ಸಹಪಾಠಿಗಳ ಭೇಟಿಯಾದ ರಾಷ್ಟ್ರಪತಿ: ಹಾಸ್ಟೆಲ್​ನ ಮಂಚದ ಮೇಲೆ ಕುಳಿತು ಮುರ್ಮು ಭಾವುಕ

ಭುವನೇಶ್ವರ (ಒಡಿಶಾ): ರಾಷ್ಟ್ರಪತಿ ದ್ರೌಪದಿ ಮುರ್ಮು ಎರಡು ದಿನಗಳಿಂದ ತಮ್ಮ ತವರು ರಾಜ್ಯ ಒಡಿಶಾ ಪ್ರವಾಸದಲ್ಲಿದ್ದಾರೆ. ಶುಕ್ರವಾರ ತಮ್ಮ ವಿದ್ಯಾರ್ಥಿ ಜೀವನದ ಹಲವು ಸವಿ ನೆನಪುಗಳನ್ನು ರಾಷ್ಟ್ರಪತಿ ಮೆಲುಕು ಹಾಕಿದ್ದಾರೆ. ತಾವು ಓದಿದ್ದ ಶಾಲೆ ಭೇಟಿ ಮತ್ತು ಸುಮಾರು 48 ವರ್ಷಗಳ ಹಿಂದೆ ತಮ್ಮೊಂದಿಗೆ ಕಲಿತಿದ್ದ ಸಹಪಾಠಿಗಳನ್ನೂ ಮುರ್ಮು ಭೇಟಿಯಾಗಿದ್ದಾರೆ.

ಶುಕ್ರವಾರ ಭುವನೇಶ್ವರದ ಅಲ್ಮಾ ಮೇಟರ್ ಯುನಿಟ್-2 ಕ್ಯಾಪಿಟಲ್ ಗರ್ಲ್ಸ್ ಹೈಸ್ಕೂಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದರು. ಶಾಲೆಗೆ ಬಂದ ದೇಶದ ಮೊದಲ ಪ್ರಜೆಗೆ ವಿದ್ಯಾರ್ಥಿಗಳು, ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ವಿಶೇಷ 13 ಜನ ಸಹಪಾಠಿಗಳು ರಾಷ್ಟ್ರಪತಿಯವರನ್ನು ಬರ ಮಾಡಿಕೊಂಡರು. ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ತಮ್ಮ ಸ್ನೇಹಿತರೊಂದಿಗೆ ದ್ರೌಪದಿ ಮುರ್ಮು ಸಂವಾದ ನಡೆಸಿದರು.

ಭುವನೇಶ್ವರದ ಶಾಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಇದೇ ಶಾಲೆಯಲ್ಲಿ ದೌಪದಿ ಮುರ್ಮು ಅವರು 1970-1974ರಲ್ಲಿ 8ನೇ ತರಗತಿಯಿಂದ 11ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದರು. ದೇಶದ ಅತ್ಯುನ್ನತ ಹುದ್ದೆಗೇರಿದ ದ್ರೌಪದಿ ಮುರ್ಮು ಸ್ವಾಗತಿಸಲು ಮತ್ತು ಭೇಟಿ ಮಾಡಲು ಅಂದು ಶಾಲೆಯಲ್ಲೆ ಅವರೊಂದಿಗೆ ಓದಿದ್ದ 13 ಜನ ಸ್ನೇಹಿತೆಯರು ಬಂದಿದ್ದರು. ತಮ್ಮ ಸಹಪಾಠಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯದಲ್ಲಿರುವುದಕ್ಕೆ ದ್ರೌಪದಿ ಮುರ್ಮು ಸಂತೋಷವನ್ನು ವ್ಯಕ್ತಪಡಿಸಿದರು.

ದೌಪದಿ ಮುರ್ಮು ಬಗ್ಗೆ ತುಂಬಾ ಹೆಮ್ಮೆ: ದೌಪದಿ ಮುರ್ಮು ಭಾರತದ ರಾಷ್ಟ್ರಪತಿಯಾಗುತ್ತಾರೆ ಎಂದು ನಮಗೆ ತಿಳಿದಾಗ ಅದು ನಮಗೆ ಐತಿಹಾಸಿಕ ಕ್ಷಣವಾಗಿತ್ತು. ದೇಶದ ಪ್ರಥಮ ಪ್ರಜೆಯಾಗಿ 48 ವರ್ಷಗಳ ನಂತರ ಅವರನ್ನು ಭೇಟಿಯಾಗಲು ನಮಗೆ ತುಂಬಾ ಸಂತೋಷವಾಗಿದೆ. ನಾವು ದೌಪದಿ ಮುರ್ಮು ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಎಂದು ಸಹಪಾಠಿಯೊಬ್ಬರು ಸಂತಸ ವ್ಯಕ್ತಪಡಿಸಿದರು.

ಶಾಲಾ ದಿನಗಳಲ್ಲಿ ದೌಪದಿ ಮುರ್ಮು ವಿಧೇಯ ವಿದ್ಯಾರ್ಥಿಯಾಗಿದ್ದರು. ಅಲ್ಲದೇ, ಕ್ರೀಡೆ ಮತ್ತು ಹಾಡುಗಾರಿಕೆಯಲ್ಲಿ ಉತ್ತಮ ಪಟುವಾಗಿದ್ದರು. ತಮ್ಮ ಬಾಲ್ಯದಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ಸಕ್ರಿಯವಾಗಿದ್ದರು. ಮುರ್ಮು ಎನ್‌ಸಿಸಿಯಲ್ಲೂ ತೊಡಗಿಸಿಕೊಂಡಿದ್ದರು ಎಂದು ಮತ್ತೊಬ್ಬ ಸಹಪಾರಿ ತಿಳಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಮಾತನಾಡಿ, ಇದೊಂದು ಸುಂದರ ಬಾಲ್ಯವಾಗಿತ್ತು. ನಾನು ಓದಿದ್ದ ಪ್ರೌಢಶಾಲೆ ಮತ್ತು ಆದಿವಾಸಿ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ್ದು, ನನ್ನ ವಿದ್ಯಾರ್ಥಿ ಜೀವನದ ಹಲವು ಸವಿ ನೆನಪುಗಳನ್ನು ಮರುಕಳಸುವಂತೆ ಮಾಡಿದೆ ಎಂದು ಹೇಳಿದರು.

ಮಂಚದ ಮೇಲೆ ಕುಳಿತು ರಾಷ್ಟ್ರಪತಿ ಭಾವುಕ: ತಮ್ಮ ವಿದ್ಯಾರ್ಥಿ ದಿನಗಳಲ್ಲಿ ತಾವು ತಂಗಿದ್ದ ಹಾಸ್ಟೆಲ್​ನ ಕೋಣೆಗೂ ದ್ರೌಪದಿ ಮುರ್ಮು ಭೇಟಿ ನೀಡಿದರು. ಅಲ್ಲಿ ತಾವು ಮಲಗಲು ಬಳಸುತ್ತಿದ್ದ ಹಾಸಿಗೆಯ ಮೇಲೆ ಕುಳಿತಾಗ ಅವರು ಭಾವುಕರಾದರು.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ, ಸುರಕ್ಷಿತ ಮತ್ತು ಮನೆಯ ವಾತಾವರಣವನ್ನು ಒದಗಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಯಿತು. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ ಎಂದು ಹಾಸ್ಟೆಲ್​ನ ಸಂದರ್ಶಕರ ಡೈರಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬರೆದರು.

ಇದನ್ನೂ ಓದಿ: ರೆಡ್​​​ಲೈಟ್​​​​​​​​​ ಏರಿಯಾದಲ್ಲಿ ಹುಟ್ಟಿ ಬೆಳೆದ ಮಹಿಳೆಗೆ ಮಾನವ ಹಕ್ಕುಗಳ ಆಯೋಗದ ಸಲಹಾ ಗುಂಪಿನಲ್ಲಿ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.