ETV Bharat / bharat

ಭಾರತದ ಆರ್ಥಿಕ ಸಮೀಕ್ಷೆ ವರದಿ ಮಂಡನೆ: ಶೇ 6.5 ಜಿಡಿಪಿ ಬೆಳವಣಿಗೆ ಅಂದಾಜು

ಭಾರತದ ಆರ್ಥಿಕ ಸಮೀಕ್ಷೆ (2022-23) ಪ್ರಕಾರ, ಭಾರತದ ಆರ್ಥಿಕತೆಯು 2023-24ರಲ್ಲಿ ಶೇ 6.5 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ಆರ್ಥಿಕ ಸಮೀಕ್ಷೆ ವರದಿ 2022-23ನ್ನು ಮಂಗಳವಾರ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.

economic-survey
ಭಾರತದ ಆರ್ಥಿಕ ಸಮೀಕ್ಷೆ ವರದಿ ಮಂಡನೆ
author img

By

Published : Jan 31, 2023, 1:46 PM IST

Updated : Jan 31, 2023, 2:27 PM IST

ನವದೆಹಲಿ: ಭಾರತದ ಆರ್ಥಿಕ ಸಮೀಕ್ಷೆ (2022-23) ಪ್ರಕಾರ, ಭಾರತದ ಆರ್ಥಿಕತೆಯು 2023-24 ರಲ್ಲಿ 6.5 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ಆರ್ಥಿಕ ಸಮೀಕ್ಷೆ ವರದಿ 2022-23ನ್ನು ಮಂಗಳವಾರ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. "ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.8 ಹಣದುಬ್ಬರ ಪ್ರಕ್ಷೇಪಣವು ಖಾಸಗಿ ವಲಯದ ಬಳಕೆಯನ್ನು ತಡೆಯುವಷ್ಟು ಹೆಚ್ಚಿಲ್ಲ ಅಥವಾ ಹೂಡಿಕೆಯನ್ನು ದುರ್ಬಲಗೊಳಿಸುವಷ್ಟು ಕಡಿಮೆಯಾಗಿಲ್ಲ" ಎಂದು ಸಚಿವೆ ಹೇಳಿದರು.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸಿದ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆಯ ದಾಖಲೆಯು ವರ್ಷ 2022-23 (ಏಪ್ರಿಲ್-ಮಾರ್ಚ್) ಮತ್ತು ಮುಂದಿನ ವರ್ಷದ ದೃಷ್ಟಿಕೋನದಲ್ಲಿ ಆರ್ಥಿಕತೆಯ ಸ್ಥಿತಿ ಮತ್ತು ಪ್ರಸ್ತುತ ಹಣಕಾಸಿನ ವಿವಿಧ ಸೂಚಕಗಳ ಒಳನೋಟಗಳನ್ನು ನೀಡುತ್ತದೆ.

ಆರ್ಥಿಕ ಸಮೀಕ್ಷೆಯು 2024 ರ ಹಣಕಾಸು ವರ್ಷದಲ್ಲಿ ಮೂಲ ಒಟ್ಟು ಆಂತರಿಕ ಉತ್ಪನ್ನ ಅಥವಾ ಜಿಡಿಪಿಯಲ್ಲಿ ಶೇ 6.5 ರಷ್ಟು ಬೆಳವಣಿಗೆಯ ಮುನ್ಸೂಚನೆ ನೀಡಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ಕಡಿಮೆ ಬೆಳವಣಿಗೆಯ ಮುನ್ಸೂಚನೆಯ ಹೊರತಾಗಿಯೂ, ವಿಶ್ವದ ಬೃಹತ್ ಆರ್ಥಿಕತೆಯ ದೇಶಗಳ ಬೆಳವಣಿಗೆಯ ವೇಗಕ್ಕಿಂತ ಹೆಚ್ಚಾಗಿರುತ್ತದೆ.

ಸಮೀಕ್ಷೆಯ ಅಂದಾಜನ್ನು ಬಹುಪಕ್ಷೀಯ ಏಜೆನ್ಸಿಗಳಾದ ವಿಶ್ವ ಬ್ಯಾಂಕ್, ಐಎಂಎಫ್​​, ಎಡಿಬಿ ಮತ್ತು ದೇಶೀಯವಾಗಿ ಆರ್​ಬಿಐ ಒದಗಿಸಿದ ಅಂದಾಜುಗಳಿಗೆ ಸ್ಥೂಲವಾಗಿ ಹೋಲಿಸಬಹುದು. ನಿಜವಾದ ಜಿಡಿಪಿ ಬೆಳವಣಿಗೆಯ ನಿಜವಾದ ಫಲಿತಾಂಶವು ಜಾಗತಿಕವಾಗಿ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳ ಪಥವನ್ನು ಅವಲಂಬಿಸಿ ಬಹುಶಃ ಶೇಕಡಾ 6 ರಿಂದ 6.8 ರ ವ್ಯಾಪ್ತಿಯಲ್ಲಿರುತ್ತದೆ ಎಂದು ಭಾರತದ ಆರ್ಥಿಕ ಸಮೀಕ್ಷೆ ಹೇಳಿದೆ.

ದೇಶದಲ್ಲಿ ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು 2016 ರಲ್ಲಿ 452 ರಿಂದ 2022 ರಲ್ಲಿ 84,012 ಕ್ಕೆ ಏರಿದೆ. ನಮ್ಮ ಸ್ಟಾರ್ಟ್‌ಅಪ್‌ಗಳಲ್ಲಿ ಸುಮಾರು 48 ಪ್ರತಿಶತವು ಶ್ರೇಣಿ 2 ಮತ್ತು 3 ನಗರಗಳಲ್ಲಿ ಆರಂಭವಾಗಿವೆ ಎಂದು ಸಮೀಕ್ಷೆ ತಿಳಿಸಿದೆ. ಹೆಚ್ಚಿನ ಮಳೆಯು ರಿಯಲ್ ಎಸ್ಟೇಟ್ ಮತ್ತು ನಿರ್ಮಾಣದಂತಹ ಕೆಲವು ವಲಯಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಆದರೆ ಮಳೆಯು ತಂಪಾದ ವಾತಾವರಣ ಉಂಟುಮಾಡಿದ್ದರಿಂದ ವಿದ್ಯುತ್ ಬೇಡಿಕೆ ಕುಸಿತವಾಗುವಂತೆ ಮಾಡಿತು. ಉತ್ಪಾದನೆಯ ಮೇಲೆ ಈಗಾಗಲೇ ಇರುವ ದಾಸ್ತಾನಿನಿಂದ ಮತ್ತು ಅಸಮ ಬೆಳವಣಿಗೆಯಿಂದ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸಮೀಕ್ಷೆ ಹೇಳಿದೆ.

ರೂ. 141.4 ಲಕ್ಷ ಕೋಟಿ ವೆಚ್ಚದ 89,151 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ. ರೂ. 5.5 ಲಕ್ಷ ಕೋಟಿ ಮೌಲ್ಯದ 1009 ಯೋಜನೆಗಳು ಪೂರ್ಣಗೊಂಡಿವೆ. ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಇದು ಸಮಗ್ರ ಯೋಜನೆ ಮತ್ತು ಸಚಿವಾಲಯಗಳು ಹಾಗೂ ಇಲಾಖೆಗಳಾದ್ಯಂತ ಸಿಂಕ್ರೊನೈಸ್ ಮಾಡಿದ ಅನುಷ್ಠಾನಕ್ಕಾಗಿ ಸಮಗ್ರ ಡೇಟಾಬೇಸ್ ರಚಿಸುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಭಾರತದ ಹಣದುಬ್ಬರವು ಶೇಕಡಾ 6ಕ್ಕಿಂತ ಕಡಿಮೆಯಿರುವಾಗ ಮುಂದುವರಿದ ಆರ್ಥಿಕತೆಗಳು ಆರ್ಥಿಕ ಹಿಂಜರಿತ ಎದುರಿಸುತ್ತಿರುವುದರಿಂದ ಹೆಚ್ಚಿನ ಹಣವು ಭಾರತಕ್ಕೆ ಹರಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಇದು ಆರ್ಥಿಕತೆಯ ಬಲವರ್ಧನೆಗೆ ಮತ್ತು ಖಾಸಗಿ ವಲಯದ ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ಸರ್ಕಾರಿ ಸಮೀಕ್ಷೆ ಹೇಳಿದೆ. ಭಾರತದ ಆರ್ಥಿಕತೆಯು ಕೋವಿಡ್ ಸಾಂಕ್ರಾಮಿಕದ ನಂತರ ವೇಗವಾಗಿ ಚೇತರಿಸಿಕೊಂಡಿದೆ ಎಂದು ಸರ್ಕಾರ ಹೇಳಿದೆ. ಆರ್ಥಿಕ ಬೆಳವಣಿಗೆಯನ್ನು ಪ್ರಬಲ ದೇಶೀಯ ಬೇಡಿಕೆ ಮತ್ತು ಬಂಡವಾಳ ಹೂಡಿಕೆಯಲ್ಲಿ ವೇಗವರ್ಧನೆಗಳು ಬೆಂಬಲಿಸುತ್ತವೆ ಎಂದು ಅದು ಹೇಳಿದೆ.

ಆದರೆ ಅಪಾಯಗಳು ಸಹ ಹೆಚ್ಚಾಗಿವೆ. ಅದರಲ್ಲೂ ವಿಶೇಷವಾಗಿ ಜಾಗತಿಕ ಅಂಶಗಳಿಂದ ಅಪಾಯಗಳಿವೆ. ದೀರ್ಘಾವಧಿಯ ಹಣದುಬ್ಬರವು ಪ್ರಪಂಚದಾದ್ಯಂತದ ಕೇಂದ್ರೀಯ ಬ್ಯಾಂಕ್‌ಗಳನ್ನು ಹಣಕಾಸು ಪರಿಸ್ಥಿತಿಗಳನ್ನು ಬಿಗಿಗೊಳಿಸುವಂತೆ ಮಾಡಿದೆ ಎಂದು ಸಮೀಕ್ಷೆ ಹೇಳಿದೆ. ಮುಂದುವರಿದ ಆರ್ಥಿಕತೆಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ನಿಧಾನಗೊಳಿಸುವ ರೂಪದಲ್ಲಿ ಈ ಬಿಗಿಗೊಳಿಸುವಿಕೆಯ ಕ್ರಮ ಈಗ ಗೋಚರಿಸುತ್ತಿದೆ.

ಇದನ್ನೂ ಓದಿ: ದೇಶದಲ್ಲಿ ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Last Updated : Jan 31, 2023, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.