ಅಯೋಧ್ಯೆ : ದೀಪಾವಳಿಗೂ ಮೊದಲೇ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ. ರಾಮ ಜನ್ಮಭೂಮಿ ಈಗ ಎಲ್ಲರ ಮನ ಸೆಳೆಯುತ್ತಿದೆ.
ಪ್ರತಿ ವರ್ಷ ಅಯೋಧ್ಯೆಯಲ್ಲಿ ದೀಪಾವಳಿಗೆ ಒಂದು ದಿನ ಮುಂಚಿತವಾಗಿ ಆಯೋಜಿಸುವ ದೀಪೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಈಗ ಅಯೋಧ್ಯೆ ವಿದ್ಯುತ್ ದೀಪಗಳಿಂದ ಬೆಳಗುತ್ತಿದೆ.
ಅಯೋಧ್ಯೆಯನ್ನು ಲಕ್ಷ ದೀಪಗಳಿಂದ ಅಲಂಕರಿಸಲು ಭರ್ಜರಿ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ. 2017ರಲ್ಲಿ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಅಂದಿನಿಂದ ವಾರ್ಷಿಕ ದೀಪೋತ್ಸವವನ್ನು ವೈಭವದಿಂದ ಆಯೋಜಿಸುತ್ತಿದೆ.