ETV Bharat / bharat

ಲಡಾಖ್​ನಲ್ಲಿ ಕಾರ್ಗಿಲ್​ ವಿಜಯ​ ದಿನ​ ಆಚರಣೆಗೆ ಸಿದ್ಧತೆ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿ - Union Defense Minister Rajnath Singh

Kargil Vijay Diwas: 24ನೇ ಕಾರ್ಗಿಲ್​ ವಿಜಯ​ ದಿನ ಆಚರಣೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಬೆಳಗ್ಗೆ ಲಡಾಖ್‌ಗೆ ಭೇಟಿ ನೀಡಲಿದ್ದಾರೆ.

Kargil Vijay Diwas
ಕಾರ್ಗಿಲ್​ ವಿಜಯ​ ದಿನ
author img

By

Published : Jul 25, 2023, 3:09 PM IST

ದ್ರಾಸ್ (ಲಡಾಖ್): 1999ರ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ದಿನವನ್ನು ಪ್ರತಿ ವರ್ಷ ಜುಲೈ 26ರಂದು ರಾಷ್ಟ್ರ ಸ್ಮರಿಸುತ್ತಿದ್ದು, ಈ ಹಿನ್ನೆಲೆ ಲಡಾಖ್‌ನ ದ್ರಾಸ್‌ನಲ್ಲಿ 24ನೇ ಕಾರ್ಗಿಲ್​ ವಿಜಯ​ ದಿನ ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಮಂಗಳವಾರ ಪ್ರಾರಂಭಿಸಲಾಗಿದೆ. ಇದೇ ಸಂದರ್ಭದಲ್ಲಿ ಯುದ್ಧ ಸ್ಮಾರಕಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಬುಧವಾರ ಬೆಳಗ್ಗೆ ಕಾರ್ಯಕ್ರಮ ನಡೆಯುವ ಲಡಾಖ್​ಗೆ ಸಚಿವ ರಾಜನಾಥ್​ ಸಿಂಗ್​ ಅವರು ಆಗಮಿಸಲಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಏತನ್ಮಧ್ಯೆ, ಇಂದು ಲಮೊಚೆನ್ ವ್ಯೂ ಪಾಯಿಂಟ್‌ನಲ್ಲಿ, ಭಾರತೀಯ ಸೇನೆಯ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಎತ್ತಿ ತೋರಿಸುವ ಯುದ್ಧಗಳ ಆಡಿಯೋ ಮತ್ತು ದೃಶ್ಯ ನಿರೂಪಣೆಯನ್ನು ಪ್ರದರ್ಶಿಸುವ ಬ್ರೀಫಿಂಗ್ ಅನ್ನು ನಡೆಸಲಾಗುವುದು. ಲಮೋಚನ್ ವ್ಯೂ ಪಾಯಿಂಟ್‌ನಿಂದ ಗಣ್ಯರಿಗೆ ಯುದ್ಧಭೂಮಿಯ ಪರಿಚಯದ ನಂತರ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು 'ಬಾರಾಖಾನಾ' ಒಳಗೊಂಡ 'ವಿಜಯ್ ಭೋಜ್' ಕಾರ್ಯಕ್ರಮವನ್ನು ಸ್ಯಾಂಡೋ ಹಿಂಭಾಗದಲ್ಲಿ ಆಯೋಜಿಸಲಾಗಿದೆ.

ಸೇನಾ ಪಡೆಯಿಂದ ದೇಶಭಕ್ತಿ ಗೀತೆಗಳ ಪ್ರದರ್ಶನ ಹಾಗೂ ಮಾರ್ಚ್​ ಫಾಸ್ಟ್​ ಕೂಡ ನಡೆಯಲಿದೆ. ನಂತರದಲ್ಲಿ ಸ್ಥಳೀಯ ಸಾಂಸ್ಕೃತಿಕ ಕಲಾವಿದರು ತಮ್ಮ ಸಾಂಪ್ರದಾಯಿಕ ನೃತ್ಯಗಳ ಮೂಲಕ ತಮ್ಮ ಜನಾಂಗದ ಶ್ರೀಮಂತಿಕೆಯನ್ನು ಪ್ರದರ್ಶಿಸಲಿದ್ದಾರೆ. ಭಾರತೀಯ ಸೇನೆಯ ಜೊತೆಗೆ ಸ್ಥಳೀಯ ಜನರ ಬದ್ಧತೆಯನ್ನು ಈ ಕಲಾವಿದರು ಸಾಬೀತುಪಡಿಸಲಿದ್ದು, ಆಪರೇಷನ್ ವಿಜಯ್ ಸಮಯದಲ್ಲಿ ವೀರರ ಕೊಡುಗೆಗಳನ್ನು ನೆನಪಿಸಿಕೊಳ್ಳಲಿದ್ದಾರೆ.

ಇಂದು ಅನೇಕ ಹಾಲಿ ಮತ್ತು ಮಾಜಿ ಉನ್ನತ ಸೇನಾಧಿಕಾರಿಗಳು ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಸಮಾರಂಭದ ನಂತರ ಸ್ಮಾರಕದ ಪಕ್ಕದಲ್ಲಿ ನಿರ್ಮಿಸಲಾದ ವಸ್ತುಸಂಗ್ರಹಾಲಯವಾದ 'Hut of Remembranc'ಗೆ ಭೇಟಿ ನೀಡಲಿದ್ದಾರೆ.

ಕಾರ್ಗಿಲ್​ ವಿಜಯ ದಿನದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಪೈಪ್ ಬ್ಯಾಂಡ್ ಮತ್ತು ಸ್ಟ್ಯಾಟಿಕ್ ಬ್ಯಾಂಡ್ ಪ್ರದರ್ಶನ ಮತ್ತು ಬೀಟಿಂಗ್ ರಿಟ್ರೀಟ್ ಮೂಲಕ ಹುತಾತ್ಮರಿಗೆ ದೀಪಗಳನ್ನು ಬೆಳಗಿಸುವುದು ಮತ್ತು ಪ್ರಾರ್ಥನೆ ಸಲ್ಲಿಸುವುದು ಕೂಡ ನಡೆಯಲಿದೆ. ಭಾರತೀಯ ಸಶಸ್ತ್ರ ಪಡೆಗಳ ವಿಜಯದ ಉತ್ತುಂಗದಲ್ಲಿ ನಿಲ್ಲುವ ಆಪರೇಷನ್ ವಿಜಯ್ ಅನ್ನು ಮುನ್ನಡೆಸಿದ ಕಾರ್ಗಿಲ್ ಯುದ್ಧ ವೀರರ ಶೌರ್ಯವನ್ನು ಸ್ಮರಿಸಲು ಹಾಗೂ ಶೌರ್ಯಕ್ಕೆ ಗೌರವ ಸಲ್ಲಿಸಲು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಮಣಿಪುರ ಬೆತ್ತಲೆ ಪ್ರಕರಣ: ಕಾರ್ಗಿಲ್​ನಲ್ಲಿ ದೇಶಕ್ಕಾಗಿ ಹೋರಾಡಿದೆ, ಆದರೆ ನನ್ನ ಪತ್ನಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ: ಮಾಜಿ ಸೈನಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.