ETV Bharat / bharat

ಮತ್ತೆ ಹೆಣ್ಣು ಹುಟ್ಟುವ ಭಯದಲ್ಲಿ ಹೆರಿಗೆ ಹಿಂದಿನ ದಿನವೇ ಗರ್ಭಿಣಿ ಆತ್ಮಹತ್ಯೆ: ಹೊಟ್ಟೆಯಲ್ಲಿದ್ದದ್ದು ಗಂಡು ಮಗು - ತೆಲಂಗಾಣದಲ್ಲಿ ಗರ್ಭಿಣಿ ಆತ್ಮಹತ್ಯೆ

ಮೂರು ವರ್ಷಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ರಮ್ಯಾ, ಇದೀಗ ಮತ್ತೊಮ್ಮೆ ಹೆಣ್ಣು ಮಗು ಹುಟ್ಟುತ್ತದೆ ಎಂಬ ಭಯದಲ್ಲಿದ್ದರಂತೆ. ಇದರ ಜೊತೆಗೆ, ಗಂಡನ ಮನೆಯವರಿಂದ ಕಿರುಕುಳ ಅನುಭವಿಸಬೇಕೆಂಬ ಭಯ, ಆತಂಕದಲ್ಲಿ ಹೆರಿಗೆ ಆಗುವುದಕ್ಕೂ ಒಂದು ದಿನಕ್ಕೂ ಮುನ್ನವೇ ಗರ್ಭಿಣಿ ಇಹಲೋಕ ತ್ಯಜಿಸಿದ್ದಾರೆ.

PREGNANT WOMAN SUICIDE
PREGNANT WOMAN SUICIDE
author img

By

Published : Jan 7, 2022, 6:49 PM IST

ಮಂಚೇರಿಯಲ್​(ತೆಲಂಗಾಣ): ಮಗು ಗಂಡಾದರೇನು, ಹೆಣ್ಣಾದರೇನು?, ಮಗುವಿಗೆ ಜನ್ಮ ನೀಡುವ ಮಹಿಳೆಯ ಸಂತೋಷಕ್ಕೆ ಪಾರವಿರದು. ತಂದೆಯೂ ಸಂತಾನದ ಖುಷಿಯನ್ನು ಮನಸಾರೆ ಅನುಭವಿಸಬೇಕು. ಆದರೆ, ಇಂದಿನ ದಿನಮಾನಗಳಲ್ಲೂ ಗಂಡು ಮಗುವಿನ ವಿಚಿತ್ರ, ವಿಲಕ್ಷಣ ಬಯಕೆಯನ್ನು ಹೊಂದುವ ಜನರಿಗೆ ನಮ್ಮಲ್ಲಿ ಕೊರತೆಯೇ ಇಲ್ಲವೇನೋ? ಇದಕ್ಕೊಂದು ಹೊಸ ಉದಾಹರಣೆ ತೆಲಂಗಾಣದಲ್ಲಿ ನಡೆದ ಈ ಘಟನೆ.

ತೆಲಂಗಾಣದ ಮಂಚೇರಿಯಲ್​​ ಜಿಲ್ಲೆಯ ಎನ್​ಟಿಆರ್​ ನಗರದಲ್ಲಿ ನಡೆದ ಈ ಹೃದಯ ವಿದ್ರಾವಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತನಗೆ ಮತ್ತೆ ಹುಟ್ಟುವ ಮಗು ಹೆಣ್ಣಾಗಲಿದೆ ಎಂಬ ಭಯದಲ್ಲೇ 9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆಯ ಸಂಪೂರ್ಣ ವಿವರ:

ಕಳೆದ ನಾಲ್ಕು ವರ್ಷಗಳ ಹಿಂದೆ ಮಂಚೇರಿಯಲ್​ ಪಟ್ಟಣದ ಎನ್​ಟಿಆರ್​​​ ನಗರದ ಆನಂದ್ ಜೊತೆ ದಂಡೇಪಲ್ಲಿಯ ರಮ್ಯಾ (25) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ವರ್ಷದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ರಮ್ಯಾ ಇದೀಗ ಮತ್ತೊಮ್ಮೆ ಗರ್ಭಿಣಿಯಾಗಿದ್ದರು. ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಅವರಿಗೆ ಗುರುವಾರ(ಜನವರಿ 6) ಹೆರಿಗೆ ದಿನಾಂಕ ನಿಗದಿಪಡಿಸಲಾಗಿತ್ತು.

ಮೂರು ವರ್ಷಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಈಕೆ ಇದೀಗ ಮತ್ತೊಮ್ಮೆ ಹೆಣ್ಣು ಮಗು ಹುಟ್ಟುತ್ತದೆ ಎಂಬ ಭಯದಲ್ಲಿದ್ದರಂತೆ. ಇದರ ಜೊತೆಗೆ, ಗಂಡನ ಮನೆಯವರಿಂದ ಕಿರುಕುಳ ಅನುಭವಿಸಬೇಕೆಂಬ ಭಯ, ಆತಂಕದಲ್ಲಿ ಹೆರಿಗೆ ಆಗುವುದಕ್ಕೂ ಒಂದು ದಿನಕ್ಕೂ ಮುನ್ನವೇ ಗರ್ಭಿಣಿ ಇಹಲೋಕ ತ್ಯಜಿಸಿದ್ದಾಳೆ.

ಇದನ್ನೂ ಓದಿ: ಭದ್ರತಾ ಲೋಪದ ತನಿಖೆ: ಪಂಜಾಬ್ ಡಿಜಿಪಿ ಸೇರಿ ಉನ್ನತಾಧಿಕಾರಿಗಳಿಗೆ ನೋಟಿಸ್

ಗರ್ಭದಲ್ಲಿದ್ದಿದ್ದು ಗಂಡು ಮಗು:

ಆತ್ಮಹತ್ಯೆಗೆ ಶರಣಾಗಿರುವ ರಮ್ಯಾಳ ಮೃತದೇಹದ ಅಂತ್ಯಕ್ರಿಯೆ ನಡೆಸುವುದಕ್ಕೂ ಮುನ್ನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಗರ್ಭದಲ್ಲಿದ್ದಿದ್ದು ಗಂಡು ಮಗು ಎಂದು ತಿಳಿದು ಬಂದಿದೆ.

ಅತ್ತೆ ಮನೆಯವರ ಮಾನಸಿಕ, ದೈಹಿಕ ಕಿರುಕುಳದಿಂದಲೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.