ETV Bharat / bharat

ಬಸ್​​​​​ನಲ್ಲೇ ಹೆರಿಗೆ ನೋವು.. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ - ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿರುವ ಪರಿಣಾಮ ಗರ್ಭಿಣಿಯೊಬ್ಬರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಜಲಂದರ್​ನಲ್ಲಿ ನಡೆದಿದೆ.

pregnant woman birth to the baby girl in Bus

author img

By

Published : May 28, 2022, 3:35 PM IST

ಜಲಂಧರ್(ಪಂಜಾಬ್​): ಹುಟ್ಟು - ಸಾವು ದೇವರ ಕೈಯಲ್ಲಿದೆ ಎಂದು ಹೇಳಲಾಗ್ತಿದೆ. ಜನನ ಮತ್ತು ಮರಣದ ಸ್ಥಳವನ್ನ ಆತನೇ ನಿರ್ಧಾರ ಮಾಡ್ತಾನೆ. ಇಂತಹ ಪ್ರಕರಣವೊಂದು ಪಂಜಾಬ್​ನ ಫಗ್ವಾರಾದಲ್ಲಿ ಬೆಳಕಿಗೆ ಬಂದಿದ್ದು, ಬಸ್​​ನಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯನ್ನ ಲೂಧಿಯಾನದ ನಿವಾಸಿ ಅಶ್ವಿರ್​ ಎಂದು ಗುರುತಿಸಲಾಗಿದೆ.

ಗರ್ಭಿಣಿ ಸರ್ಕಾರಿ ಬಸ್​​ನಲ್ಲಿ ಜಲಂಧರ್​​ನಿಂದ ಲೂಧಿಯಾನಕ್ಕೆ ತೆರಳುತ್ತಿದ್ದರು. ಈ ವೇಳೆ ಬಸ್​​ನಲ್ಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಾರ್ಗ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದೃಷ್ಟವಶಾತ್​ ಬಸ್​​ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರಣ, ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಸಹಾಯ ಮಾಡಿದ್ದಾರೆ.

ಬಸ್​​ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಇದನ್ನೂ ಓದಿ: ವುಡ್‌ ಕಟ್ಟರ್​ನಿಂದ ಪತ್ನಿ ಮಕ್ಕಳ ಕತ್ತು ಸೀಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ತದನಂತರ ಆ್ಯಂಬುಲೆನ್ಸ್​​​​​​​​​​ಗೆ ಕರೆ ಮಾಡಿ, ಮಹಿಳೆ ಮತ್ತು ಮಗುವನ್ನ ಫಗ್ವಾರ್​ ಸಿವಿಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಬಸ್​​ನಲ್ಲಿ ಜನಸಿರುವ ಮಗುವಿಗೆ ಶಿವಾನಿ ಎಂದು ಹೆಸರಿಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿವಿಲ್ ಆಸ್ಪತ್ರೆಯ ಎಸ್​ಎಂಒ ಡಾ. ಕಮಲ್ ಕಿಶೋರ್ ಮಾತನಾಡಿ, ಗರ್ಭಿಣಿಗೆ ಬಸ್​ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆರೋಗ್ಯ ಸಿಬ್ಬಂದಿ ಸಹಾಯದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಆಸ್ಪತ್ರೆಯಲ್ಲಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.