ETV Bharat / bharat

ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ಕಾಮುಕರು, ರೈಲ್ವೆ ಟ್ರ್ಯಾಕ್​ ಮೇಲೆ ಎಸೆದು ಪರಾರಿ - ಬಿಹಾರ ಕ್ರೈಂ ನ್ಯೂಸ್​

ಪ್ರಜ್ಞೆ ಬಂದ ಬಳಿಕ ಮಹಿಳೆ ಕಿರುಚಾಡಿದ್ದಾಳೆ. ತಕ್ಷಣವೇ ಕೆಲವರು ಅಲ್ಲಿಗೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿರುವ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿರುವುದು ದೃಢಪಟ್ಟಿದೆ..

Pregnant woman gangrape
Pregnant woman gangrape
author img

By

Published : Sep 27, 2021, 3:09 PM IST

ಪಾಟ್ನಾ(ಬಿಹಾರ) : ಗರ್ಭಿಣಿಯೋರ್ವಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.

24 ವರ್ಷದ ಗರ್ಭಿಣಿ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನ ಪಾಟ್ನಾ ರೈಲ್ವೆ ಜಂಕ್ಷನ್​​ನ ಟ್ರ್ಯಾಕ್​ ಮೇಲೆ ಎಸೆದು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲು ಮಾಡಿಕೊಂಡಿರುವ ಪೊಲೀಸರು, ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶನಿವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಊಟ ಮಾಡಿದ ಬಳಿಕ ಗರ್ಭಿಣಿ ಮನೆ ಬಳಿ ವಾಕ್​ ಮಾಡಲು ಹೋಗಿದ್ದಾಳೆ. ಈ ವೇಳೆ ಇಬ್ಬರು ಯುವಕರು ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಇದರ ಬೆನ್ನಲ್ಲೇ ಆಕೆಯನ್ನ ಹತ್ತಿರದ ಹೊಲಕ್ಕೆ ಎತ್ತಿಕೊಂಡು ಹೋಗಿ, ಅತ್ಯಾಚಾರವೆಸಗಿದ್ದಾರೆ.

ಈ ವೇಳೆ ಮತ್ತೋರ್ವ ಕಾಮುಕರಿಗೆ ಸಾಥ್​ ನೀಡಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರಜ್ಞೆ ಕಳೆದುಕೊಂಡಿರುವ ಗರ್ಭಿಣಿಯನ್ನ ರೈಲ್ವೆ ಟ್ರ್ಯಾಕ್​ ಮೇಲೆ ಎಸೆದು ಪರಾರಿಯಾಗಿದ್ದಾರೆ.

ಇದನ್ನೂ ಓದಿರಿ: IPL ಪಂದ್ಯದ ವೇಳೆ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಅಂತಾರಾಷ್ಟ್ರೀಯ ಬುಕ್ಕಿಗಳ ಬಂಧನ.. ಲಕ್ಷ ಲಕ್ಷ ರೂ ನಗದು ವಶಕ್ಕೆ!

ಪ್ರಜ್ಞೆ ಬಂದ ಬಳಿಕ ಮಹಿಳೆ ಕಿರುಚಾಡಿದ್ದಾಳೆ. ತಕ್ಷಣವೇ ಕೆಲವರು ಅಲ್ಲಿಗೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿರುವ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿರುವುದು ದೃಢಪಟ್ಟಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳ ಬಂಧನ ಮಾಡಿದ್ದು, ಮತ್ತೋರ್ವನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.