ವೆಲ್ಲೂರು( ತ.ನಾಡು) : ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ವಾಹನ ಸಿಗದೆ ಆರು ಕಿಲೋಮೀಟರ್‌ಗೂ ಹೆಚ್ಚು ದೂರ ಡೋಲಿಯಲ್ಲಿ ಹೊತ್ತೊಯ್ದ ಘಟನೆ ವೆಲ್ಲೂರಿನ ಆನೈಕಟ್ಟು ಕ್ಷೇತ್ರದ ವ್ಯಾಪ್ತಿಯ ಪೀಂಚಮಂಡೈ ಗ್ರಾಮ ಪಂಚಾಯಿತಿಯ ಜಟಾಯನಕೊಳ್ಳೈ ಗ್ರಾಮದಲ್ಲಿ ಜರುಗಿದೆ.
ಅನಿತಾ ಎಂಬುವರಿಗೆ ಡಿಸೆಂಬರ್ 14 ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ, ಆ ಗ್ರಾಮಕ್ಕೆ ಆ್ಯಂಬುಲೆನ್ಸ್ ಆಗಲಿ ಇತರ ವಾಹನಗಳಾಗಲಿ ಹೋಗಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಕೆಟ್ಟಿದೆ ಇಲ್ಲಿನ ರಸ್ತೆ. ಈ ಕಾರಣಕ್ಕೆ ಆಕೆಯ ಕುಟುಂಬ ಮತ್ತು ಗ್ರಾಮಸ್ಥರು ಬಟ್ಟೆಯಿಂದ ಸ್ಟ್ರೆಚರ್ ತಯಾರಿಸಿ ಆರು ಕಿಲೋಮೀಟರ್ ದೂರದವರೆಗೆ ಹೊತ್ತು ಅಥಿಯೂರು ಪಂಚಾಯತ್ ಕಲಂಗುಮೇಡು ಪ್ರದೇಶದ ಬಳಿ ಬಂದು ವಾಹನದ ಮೂಲಕ ಆಸ್ಪತ್ರೆ ಸೇರಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಗುತ್ತಾ RT-LAMP ಕೋವಿಡ್ ಟೆಸ್ಟ್..?
108 ಆ್ಯಂಬುಲೆನ್ಸ್ ಅನಿತಾ ಅವರನ್ನು ಉಸೂರು ಅರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಅನಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗಳು ಇಬ್ಬರೂ ಚೆನ್ನಾಗಿದ್ದಾರೆ ಎಂದು ತಿಳಿದುಬಂದಿದೆ.