ಕಾಸರಗೋಡು(ಕೇರಳ): ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿರುವ ಮೂವರು ಕಾಮುಕರು ಅದನ್ನು ಕೊಂದಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತಮಿಳುನಾಡು ಮೂಲದ ಸೆಂಥಿಲ್ ಎಂಬಾತನನ್ನು ಬಂಧನ ಮಾಡಿದ್ದಾರೆ. ಉಳಿದ ಇಬ್ಬರಿಗೋಸ್ಕರ ಶೋಧಕಾರ್ಯ ಮುಂದುವರೆಸಿದ್ದಾರೆ.
ಕೇರಳದ ಕಾಞಂಗಾಡಿನಲ್ಲಿ ರೆಸ್ಟೋರೆಂಟ್ ಮಾಲೀಕನಾಗಿರುವ ಮೊಯ್ದೀನ್ ಕುಂಜು ಎಂಬುವವರಿಗೆ ಸೇರಿದ ಮೇಕೆಯ ಮೇಲೆ ಮೂವರು ಮೃಗೀಯ ವರ್ತನೆ ತೋರಿದ್ದಾರೆ. ಅದು ನಾಲ್ಕು ತಿಂಗಳ ಗರ್ಭಿಣಿಯಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕಾಮುಕ ಸೆಂಥಿಲ್ ರೆಸ್ಟೋರೆಂಟ್ನಲ್ಲಿ ಉದ್ಯೋಗಿಯಾಗಿದ್ದಾನೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ ಪತ್ತೆ
ಕೇರಳದಲ್ಲಿ ಮುಷ್ಕರವಿದ್ದ ಕಾರಣ ಕಳೆದ ಮಂಗಳವಾರ ರೆಸ್ಟೋರೆಂಟ್ ಬಂದ್ ಮಾಡಲಾಗಿತ್ತು. ರಾತ್ರಿ ರೆಸ್ಟೋರೆಂಟ್ನ ಹಿಂಬದಿಯಿಂದ ಮೇಕೆ ಕೂಗಿದ ಶಬ್ದ ಕೇಳಿಸಿದೆ. ಈ ವೇಳೆ ಮಾಲೀಕ, ಕೆಲ ಸ್ಥಳೀಯರೊಂದಿಗೆ ಅಲ್ಲಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಮೂವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಸೆಂಥಿಲ್ ಸಿಕ್ಕಿಬಿದ್ದಿದ್ದಾನೆ.